ಬೆಳಗ್ಗೆ ಖಾಲಿ ಹೊಟ್ಟೆಗೆ ಎರಡೇ 2 ಖರ್ಜೂರ ತಿಂದ್ರೆ ಏನೆಲ್ಲ ಪ್ರಯೋಜನ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ | Dates

ಮತ್ತೊಂದೆಡೆ, ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳಲು ಸಿಕ್ಕಾಪಟ್ಟೆ ಖರ್ಚು ಮಾಡಿ, ದುಬಾರಿ ಪದಾರ್ಥಗಳನ್ನು ಕೊಂಡುಕೊಳ್ಳಬೇಕು ಅಂತೇನಿಲ್ಲ. ಕೆಲವು ಸರಳ ಅಭ್ಯಾಸಗಳನ್ನು ನಿರಂತರವಾಗಿ ಅನುಸರಿಸಿದರೆ ಸಾಕು.
Dates
ಬೆಳಗ್ಗೆ ಖಾಲಿ ಹೊಟ್ಟೆಗೆ ಎರಡೇ 2 ಖರ್ಜೂರ ತಿಂದ್ರೆ ಏನೆಲ್ಲ ಪ್ರಯೋಜನ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ | Dates
Published on: 

Dates: ಇಂದಿನ ಕಾಲಘಟ್ಟದಲ್ಲಿ ಎಲ್ಲವೂ ಸೂಪರ್​ ಫಾಸ್ಟ್​ ಎನ್ನುವಂತೆ ಸಿಕ್ಕಾಪಟ್ಟೆ ವೇಗದಲ್ಲಿ ಸಾಗುತ್ತಿದೆ. ಅದರಲ್ಲೂ, ಈ ಎಐನಂತಹ ಆಧುನಿಕ ಟೆಕ್ನಾಲಜಿ ಬಂದ ಮೇಲಂತು ಜಗತ್ತಿನಲ್ಲಿ ವಿಪರೀತ ಬದಲಾವಣೆಗಳು ಬಂದೋಗಿವೆ. ಇದಕ್ಕೆಲ್ಲ ಹೊಂದಿಕೊಂಡು ದಿನನಿತ್ಯದ ಕೆಲಸದಲ್ಲಿ ತೊಡಗುವ ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದನ್ನೇ ಮರೆಯುತ್ತಿದ್ದಾರೆ. ಈ ಮಧ್ಯೆ, ಆರೋಗ್ಯಕರ ಜೀವನಶೈಲಿ ಮತ್ತು ಸುಂದರವಾಗಿರಲು ಬಯಸುವ ಮಂದಿ, ಹೇಗಾದರೂ ಸಮಯ ಮಾಡಿಕೊಂಡು ಆರೋಗ್ಯಕರವಾಗಿರಲು ಎಷ್ಟು ಹಣ ಬೇಕಾದರೂ ಖರ್ಚು ಮಾಡಲು ಸಿದ್ಧರಿದ್ದಾರೆ.

ವಾಸ್ತವದಲ್ಲಿ, ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಆರಂಭದಲ್ಲಿ ತೀರ ಕಷ್ಟಸಾಧ್ಯವೇ. ಆದರೆ, ಅದೇ ಅಭ್ಯಾಸವಾಗಿ ಮುಂದುವರಿದರೆ ನಿಮ್ಮ ದೈನಂದಿನ ಜೀವನ ಅದ್ಭುತವಾಗಿರುತ್ತೆ. ಅದರಲ್ಲೂ, ಬೆಳಗ್ಗೆ ಎದ್ದ ಕ್ಷಣದಿಂದಲೇ ನೀವು ಚುರುಕಾಗಿ ಮತ್ತು ಬಹಳ ಆಕ್ಟೀವ್ ಆಗಿರುತ್ತೀರಿ. ಮತ್ತೊಂದೆಡೆ, ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳಲು ಸಿಕ್ಕಾಪಟ್ಟೆ ಖರ್ಚು ಮಾಡಿ, ದುಬಾರಿ ಪದಾರ್ಥಗಳನ್ನು ಕೊಂಡುಕೊಳ್ಳಬೇಕು ಅಂತೇನಿಲ್ಲ. ಕೆಲವು ಸರಳ ಅಭ್ಯಾಸಗಳನ್ನು ನಿರಂತರವಾಗಿ ಅನುಸರಿಸಿದರೆ ಸಾಕು.

ಹೀಗೆ ನೋಡುವುದಾದರೆ, ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ಖರ್ಜೂರವನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಯಾವೆಲ್ಲ ರೀತಿಯಲ್ಲಿ ಪ್ರಯೋಜನ ಸಿಗಬಹುದು? ಈ ಅಭ್ಯಾಸವನ್ನು ದಿನನಿತ್ಯ ಪಾಲಿಸಿಕೊಂಡು ಬಂದರೆ ದೇಹದಲ್ಲಿ ಎಷ್ಟೆಲ್ಲ ಬದಲಾವಣೆ ಮತ್ತು ಆರೋಗ್ಯ ಪ್ರಯೋಜನಗಳು ಏನಿವೆ ಎಂಬುದನ್ನುಇಂದಿನ ಲೇಖನದಲ್ಲಿ ವಿವರವಾಗಿ ತಿಳಿಯೋಣ ಬನ್ನಿ.

ಮೊದಲಿಗೆ ಖರ್ಜೂರದಲ್ಲಿ ಏನಿದೆ?

ಖರ್ಜೂರದಲ್ಲಿ ಫೈಬರ್, ಪೊಟ್ಯಾಸಿಯಮ್, ಮೆಗ್ನೀಸಿಯಮ್, ನೈಸರ್ಗಿಕ ಸಕ್ಕರೆ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇವು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಒದಗಿಸಲು ಹೆಚ್ಚು ಸಹಕಾರಿ.

ನೈಸರ್ಗಿಕ ಶಕ್ತಿ

ಖರ್ಜೂರದಲ್ಲಿರುವ ನೈಸರ್ಗಿಕ ಸಕ್ಕರೆಗಳು ದೇಹಕ್ಕೆ ಶಕ್ತಿಯ ವೇಗವನ್ನು ನೀಡುತ್ತದೆ. ಖರ್ಜೂರದಲ್ಲಿರುವ ಫೈಬರ್ ಈ ಶಕ್ತಿಯನ್ನು ಸ್ಥಿರ ರೀತಿಯಲ್ಲಿ ಒದಗಿಸಲು ಸಹಾಯ ಮಾಡುತ್ತದೆ. ಮತ್ತು ಬೆಳಗ್ಗೆ ನೀವು ಎನರ್ಜಿಟಿಕ್​ ಆಗಿರಲು ಇದು ಸಹಕಾರಿ.

ಹಸಿವು ಕಂಟ್ರೋಲ್​

ಖರ್ಜೂರದಲ್ಲಿರುವ ನಾರಿನಂಶವು ನಿಮಗೆ ದೀರ್ಘಾವಧಿಯವರೆಗೆ ಹೊಟ್ಟೆ ತುಂಬಿದ ಅನುಭವಕ್ಕೆ ಸಹಾಯ ಮಾಡುತ್ತದೆ. ಇದು ಅನಗತ್ಯ ತಿಂಡಿಗಳು (ಕುರುಕಲು, ಮೂರು ಅಥವಾ ಎರಡು ಹೊತ್ತಿಗಿಂತ ಜಾಸ್ತಿ) ಮತ್ತು ಅತಿಯಾದ ಸಿಹಿ ಆಹಾರಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆ

ಫೈಬರ್​ ಅಂಶದಲ್ಲಿ ಸಮೃದ್ಧವಾಗಿರುವ ಖರ್ಜೂರವು, ಕರುಳಿನ ಚಲನೆಯನ್ನು ನಿಯಂತ್ರಿಸಲು ಮತ್ತು ಮಲಬದ್ಧತೆಯನ್ನು ನಿಯಂತ್ರಿಸುವಲ್ಲಿ ಎತ್ತಿದಕೈ. ಇವು ಕರುಳಿನಲ್ಲಿ ಪ್ರಯೋಜನಕಾರಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಸಹ ಉತ್ತೇಜಿಸುತ್ತದೆ.

ರೋಗನಿರೋಧಕ ಶಕ್ತಿ

ಖರ್ಜೂರದಲ್ಲಿ ಫ್ಲೇವನಾಯ್ಡ್‌ಗಳು, ಕ್ಯಾರೊಟಿನಾಯ್ಡ್‌ಗಳು ಮತ್ತು ಫೀನಾಲಿಕ್ ಆಮ್ಲಗಳಂತಹ ಉತ್ಕರ್ಷಣ ನಿರೋಧಕಗಳು ತುಂಬಿವೆ. ಇದು ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಮತ್ತು ಜೀವಕೋಶಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.

Also Read
ನಿಮಗೆ ಮೋಡದಲ್ಲಿ ಮುಖಗಳು, ವಿಚಿತ್ರ ಚಿತ್ರಗಳು ಕಾಣಿಸುತ್ತಾ? ನಿಮ್ಮ ಮಿದುಳಿನ ಈ ಶಕ್ತಿಯ ಹಿಂದಿದೆ ವಿಜ್ಞಾನ | Pareidolia
Dates

ಒಟ್ಟಾರೆಯಾಗಿ, ಪ್ರತಿದಿನ ನಿಮ್ಮ ಆಹಾರದಲ್ಲಿ ಎರಡು ಅಥವಾ ಮೂರು ಖರ್ಜೂರವನ್ನು ಸೇರಿಸುವುದು ಆರೋಗ್ಯಕ್ಕೆ ಉತ್ತಮ. ನೈಸರ್ಗಿಕ ಶಕ್ತಿಯನ್ನು ಹೊಂದಲು, ಸುಲಭ ಜೀರ್ಣಕ್ರಿಯೆ ಮತ್ತು ಬೆಳಗ್ಗೆ ಹಸಿವನ್ನು ಹತೋಟಿಗೆ ತರಲು ಬಯಸುವವರಿಗೆ ಇದು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ,(ಏಜೆನ್ಸೀಸ್).

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net