

Eat Pomegranate: ಆಭರಣ ಪೆಟ್ಟಿಗೆಯಂತೆ ತನ್ನ ದೇಹವನ್ನು ಸುತ್ತುವರಿದ ಹಣ್ಣೆಂದರೆ ಅದು ದಾಳಿಂಬೆ. ಇದು ರಸದಿಂದ ಪೂರ್ತಿಯಾಗಿ ಸಮೃದ್ಧಿಯಾಗಿದ್ದು, ಗಂಭೀರವಾದ ಆರೋಗ್ಯ ಶಕ್ತಿಯಿಂದ ಕೂಡಿದೆ. ಇದನ್ನು ಮಧ್ಯಪ್ರಾಚೀನ ಕಾಲದ ಪೌಷ್ಟಿಕ ಹಣ್ಣು ಎಂದೂ ಸಹ ಕರೆಯಲಾಗುತ್ತದೆ. ಇದರಲ್ಲಿರುವ ಕಡಿಮೆ ಕ್ಯಾಲರಿ, ಫ್ಯಾಟ್, ಹೆಚ್ಚು ಫೈಬರ್, ವಿಟಮಿನ್ ಸಿ, ಕೆ, ಪೊಟ್ಯಾಷಿಯಂಗಳು ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಇದು ಅನೇಕ ರೋಗಗಳ ವಿರುದ್ಧ ಹೋರಾಡುತ್ತದೆ. ಹಾಗಾಗಿ ಒಂದು ತಿಂಗಳ ಕಾಲ ಈ ಹಣ್ಣನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ನೋಡೋಣ ಬನ್ನಿ...
ದಾಳಿಂಬೆಯು ಪೌಷ್ಟಿಕ ಅಂಶದಿಂದ ಕೂಡಿದಂತಹ ಹಣ್ಣಾಗಿದೆ. ಇದನ್ನು 2 ತಿಂಗಳ ಕಾಲ ಸೇವಿಸುವುದರಿಂದ ರಕ್ತದೊತ್ತಡ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ದೇಹದಲ್ಲಾಗುವ ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ಸೇವಿಸುವುದರಿಂದ ಉತ್ತಮ ಕೊಲೆಸ್ಟ್ರಾಲ್ನ್ನು ಸಹ ಸುಧಾರಿಸಿ ಆರೋಗ್ಯವಾಗಿರುವಂತೆ ಮಾಡುತ್ತದೆ.
ದಾಳಿಂಬೆಯು ಪ್ಯೂನಿಕಲಗಿನ್ಸ್ ಮತ್ತು ಫ್ಲ್ಯಾವೊನಾಯ್ಡ್‌ಗಳಂತಹ ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿರುತ್ತದೆ. ಇದು ದೇಹದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ಹೃದಯದ ರೋಗ ಮತ್ತು ಮಧುಮೇಹ ಇರುವಂತವರು ಈ ಹಣ್ಣನ್ನು ಸೇವಿಸುವುದರಿಂದ ಆರೋಗ್ಯದಲ್ಲಿ ಚೇತರಿಕೆಯನ್ನು ಕಾಣಬಹುದಾಗಿದೆ.
ದಾಳಿಂಬೆಯನ್ನು ಪ್ರತಿನಿತ್ಯ ಸೇವಿಸುವುದರಿಂದ ಇದು ಚರ್ಮವನ್ನು ಕಾಂತಿಯುತವಾಗಿ ಹೊಳೆಯುವಂತೆ ಮಾಡುತ್ತದೆ. ತೀವ್ರವಾಗಿ ಸುಕ್ಕು ಗಟ್ಟಿದ ಚರ್ಮವನ್ನು ಹೊಂದಿರುವಂತವರು ಈ ಹಣ್ಣನ್ನು ಸೇವಿಸುವುದರಿಂದ ಹೊಳೆಯುವಂತ ಚರ್ಮವನ್ನು ಪಡೆಯಬಹುದು. ಹಾಗೆಯೇ, ಇದರ ಸೇವನೆಯು ರಕ್ತವನ್ನು ಶುದ್ಧವಾಗಿಸಿ ದೇಹದಲ್ಲಿರುವ ಅನಗತ್ಯ ಎಣ್ಣೆಯನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಪ್ರತಿನಿತ್ಯ ದಾಳಿಂಬೆ ಹಣ್ಣನ್ನು ಸೇವಿಸುವುದರಿಂದ ಇದು ನೆನಪಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನು ಅರಿವಿನ ದುರ್ಬಲತೆಯನ್ನು ಹೊಂದಿರುವಂತಹವರು ಪ್ರತಿದಿನ 1 ಹಣ್ಣನ್ನು ಸೇವಿಸಿ. ಇದು ಕಲಿಕೆಯನ್ನು ನೆನೆಪಿನಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.
ಕರುಳಿನ ಆರೋಗ್ಯವು ಆರೋಗ್ಯವನ್ನು ಕಾಪಾಡಿಕೊಳ್ಳಲು ದಾಳಿಂಬೆ ಹಣ್ಣಿನ ಸೇವನೆಯು ಬಹಳ ಮುಖ್ಯವಾಗಿದೆ. ದಾಳಿಂಬೆಗಳು ಪ್ರಿಬಯಾಟಿಕ್‌ನಂತೆ ಕಾರ್ಯನಿರ್ವಹಿಸುತ್ತವೆ. ಇದು ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳನ್ನು ಪೋಷಿಸಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ. ಈ ಹಣ್ಣು ರಕ್ತವನ್ನು ಶುದ್ಧ ಮಾಡುವುದರಿಂದ ಇದು ದೇಹದಲ್ಲಿ ಸರಾಗವಾಗಿ ರಕ್ತ ಹರಿಯುವಂತೆ ಮಾಡುತ್ತದೆ. (ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.