ಈ ಅಪಾಯದ ಮುನ್ನೆಚ್ಚರಿಕೆಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ. ಪ್ರತಿಯೊಬ್ಬರ ಅಡುಗೆ ಮನೆಯಲ್ಲೂ ಗ್ಯಾಸ್ ಸ್ಟೌವ್ ನಿತ್ಯ ಬಳಕೆಯ ವಸ್ತುವಾಗಿದೆ. ಆದರೆ, ಉರಿಯುವಾಗ ಗ್ಯಾಸ್ ಜ್ವಾಲೆಯ ಬಣ್ಣ ಹೇಗಿದೆ ಎಂಬುದನ್ನು ನಾವು ಗಮನಿಸುವುದು ಒಳಿತು. ಗ್ಯಾಸ್ ಉರಿದಾಗ ಅದರ ಬಣ್ಣವು ಕೇವಲ ತಾಪಮಾನವನ್ನು ಮಾತ್ರವಲ್ಲ, ನಿಮ್ಮ ಕುಟುಂಬದ ಆರೋಗ್ಯ ಮತ್ತು ಸುರಕ್ಷತೆಯನ್ನೂ ಸೂಚಿಸುತ್ತದೆ.