

Mental Health: ಇಂದಿನ ದಿನಗಳಲ್ಲಿ ಪುರುಷರು ಮಾನಸಿಕ ಆರೋಗ್ಯವನ್ನು ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ. ಏಕೆಂದರೆ, ಭಾರತದಲ್ಲಿ 70 ಮಿಲಿಯನ್ಗಿಂತಲೂ ಹೆಚ್ಚು ಪುರುಷರು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದು ಸಾಮಾಜಿಕ ನಿರೀಕ್ಷೆಗಳು, ಆತಂಕ, ಒತ್ತಡಗಳು, ಮಾನಸಿಕ ಕಿರಿಕಿರಿ, ದೈಹಿಕ ಸಮಸ್ಯೆ ಈ ರೀತಿಯ ಸಮಸ್ಯೆಗಳಿಂದ ಪುರುಷನು ಹಲವಾರು ತೊಂದರೆಗಳನ್ನು ಎದುರಿಸುತ್ತಿದ್ದಾನೆ. ಅಂದಹಾಗೇ, ಭಾವನಾತ್ಮಕವಾಗಿ ಆರೋಗ್ಯಕರ ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದರಿಂದ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಬಹುದು.
ಮಾನಸಿಕವಾಗಿ ಒತ್ತಡವನ್ನು ಅನುಭವಿಸುವಂತಹ ಪುರುಷನು ಚಿಕ್ಕ ಚಿಕ್ಕ ವಿಚಾರಗಳಿಗೂ ಕೋಪಗೊಳ್ಳುತ್ತಾನೆ. ಕಿರಿಕಿರಿಗೆ ಒಳಗಾಗುತ್ತಾನೆ. ಹಾಗಾಗಿ ಯಾವುದೇ ಪುರುಷನು ಮಾನಸಿಕ ತೊಂದರೆಯಲ್ಲಿದ್ದಾಗ ಮೌನವಾಗಿರುವುದು ಉತ್ತಮ. ಇಲ್ಲದಿದ್ದರೆ, ಇದು ನಿಮ್ಮ ಸಂಸಾರದಲ್ಲಿ ಇಲ್ಲವೇ, ಸಮುದಾಯಕ್ಕೆ ವಿನಾಶಕಾರಿಯಾಗಿ ಪರಿಣಾಮ ಬೀರಬಹುದು ಎಂದು ಸಂಶೋಧನೆಗಳು ತೋರಿಸಿವೆ.
ಯಾವುದೇ ವ್ಯಕ್ತಿಯು ಮಾನಸಿಕವಾಗಿ ಕಿರಿಕಿಯನ್ನು ಅನುಭವಿಸುತ್ತಿರುವಂತಹ ಸಂದರ್ಭದಲ್ಲಿ ಆತ ತನ್ನ ಸ್ನೇಹಿತರು ಹಾಗೂ ಸಹೋದ್ಯೋಗಿಗಳ ಜೊತೆ ಕೆಲಸದ ಮಾತುಕತೆಗಳನ್ನು ಆಡುವುದು, ಅವರೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳುವುದು, ಮತ್ತು ಭಾವನಾತ್ಮಕ ಸಂಭಾಷಣೆಗಳನ್ನು ಹಂಚಿಕೊಳ್ಳುವುದನ್ನು ಮಾಡಬೇಕು. ಈ ವಿಧಾನಗಳು ವ್ಯಕ್ತಿಯ ಮನಸ್ಸನ್ನು ಹಗುರ ಮಾಡಿ ಮಾನಸಿಕ ಕಿರಿಕಿರಿಯನ್ನು ದೂರಗೊಳಿಸಬಹುದು.
ಪುರುಷರ ಮಾನಸಿಕ ಆರೋಗ್ಯ ಬಿಕ್ಕಟ್ಟುಗಳನ್ನು ಕಡಿಮೆ ಮಾಡಲು ನಿದ್ರೆಯು ಸಹಾಯಕವಾಗಿದೆ. ಏಕೆಂದರೆ ಇದು ಆದಷ್ಟು ಮನಸ್ಸನ್ನು ಹಗುರ ಮಾಡಲು ಸಹಾಯ ಮಾಡುತ್ತದೆ. ಸರಿಯಾದ ನಿದ್ರೆ ಚಕ್ರವನ್ನು ನೀವು ಅಳವಡಿಸಿಕೊಳ್ಳಿ. ಇದು ಜೀವನದಲ್ಲಿರುವ ಒತ್ತಡಗಳನ್ನು ತಡೆಯಲು ಸಹಾಯ ಮಾಡುತ್ತದೆ. ಹಾಗಾಗಿ ಮಲಗುವ ಮುನ್ನ ಕನಿಷ್ಟ 1 ಗಂಟೆ ಮೊಬೈಲ್, ಟಿವಿಯನ್ನು ನೋಡುವುದನ್ನು ನಿಯಂತ್ರಿಸಿ. ಅದರ ಬದಲಿಗೆ ಪುಸ್ತಕ ಓದುವುದು ಇಲ್ಲವೇ ಸಂಗೀತ ಕೇಳುವುದನ್ನು ಮಾಡಿ. ಇದು ಮನಸ್ಸನ್ನು ಹಗುರವಾಗಿಸುತ್ತದೆ.
ಪ್ರತಿನಿತ್ಯ ಪುರುಷರು 30 ನಿಮಿಷಗಳ ಕಾಲ ನಡೆಯುವ ಅಭ್ಯಾಸಗಳನ್ನು ಮಾಡಿಕೊಳ್ಳಿ. ಇದು ಒತ್ತಡದ ಹಾರ್ಮೋನುಗಳನ್ನು ನಿರ್ವಹಿಸಲು ಮತ್ತು ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಗೆಯೇ ದೈಹಿಕವಾಗಿ ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ. ಹಾಗಾಗಿ ಸೈಕ್ಲಿಂಗ್, ತೂಕ ಎತ್ತುವುದು, ನಡೆಯುವುದು, ಓಡುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಪುರುಷರಿಗೆ ಒತ್ತಡದಿಂದ ಉಂಟಾಗುವ ಮಾನಸಿಕ ಯಾತನೆಯನ್ನು ಕಡಿಮೆ ಮಾಡಲು ಸರಳ ಉಸಿರಾಟದ ವ್ಯಾಯಾಮಗಳನ್ನು ಅಭ್ಯಾಸ ಮಾಡಿಕೊಳ್ಳಿ. ಅಂದರೆ, ದಿನಕ್ಕೆ 3 ಬಾರಿ ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳುವುದು, ಬಿಡುವುದು, ಸ್ವಚ್ಛವಾಗಿರುವಂತಹ ಪರಿಸರವನ್ನು ವೀಕ್ಷಿಸುವುದು. ಈ ರೀತಿಯ ಅಭ್ಯಾಸಗಳನ್ನು ಮಾಡುವುದರಿಂದ ಮನಸ್ಸು ಹಗುರವಾಗುತ್ತದೆ.
ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಕ್ರಿಯೆಯು ಗಂಭೀರವಾಗಿ ಪರಿಗಣಿಸಬೇಕಾದ ಅಂಶವಾಗಿದೆ. ಹಾಗಾಗಿ ಮಾನಸಿಕ ಆರೋಗ್ಯ ತಪಾಸಣೆಯನ್ನು ನಿಗದಿಪಡಿಸುವುದು ಅಥವಾ ಆರೋಗ್ಯವನ್ನು ಪೂರ್ವಭಾವಿಯಾಗಿ ತೆಗೆದುಕೊಳ್ಳಲು ಚಿಕಿತ್ಸೆ ಪಡೆಯುವುದು ಉತ್ತಮವಾಗಿದೆ. ಹಾಗಾಗಿ ನಿಮ್ಮ ಭಾವನೆಗಳಿಗೆ ಯಾವ ವ್ಯಕ್ತಿ ಸ್ಪಂದಿಸುತ್ತಾರೋ, ಆ ವ್ಯಕ್ತಿಯೊಂದಿಗೆ ಸಮಯ ಕಳೆಯಿರಿ. ಇದು ನಿಮ್ಮ ಆರೋಗ್ಯವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. (ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.