Bread Omelette : ಬ್ರೆಡ್ ಆಮ್ಲೆಟ್ನ್ನು ಸಿದ್ಧಪಡಿಸಲು ಸಹ ತುಂಬಾ ಸರಳವಗಿರುವ ಕಾರಣ ಹೆಚ್ಚಿನ ಜನರು ಬೆಳಗಿನ ಉಪಹಾರವಾಗಿ ಸೇವಿಸಲು ಇಷ್ಟಪಡುತ್ತಾರೆ. ಆದರೆ ಈ ಬ್ರೆಡ್ ಆಮ್ಲೆಟ್ನ್ನು ದಿನನಿತ್ಯ ಸೇವಿಸಿದರೆ ಆರೋಗ್ಯಕ್ಕೆ ಲಾಭವೋ? ಎಂಬ ಪ್ರಶ್ನೆ ಸಾಮಾನ್ಯವಾಗಿರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ..
ಬ್ರೆಡ್ ಆಮ್ಲೆಟ್ನ ಗುಣಮಟ್ಟವು ಬಳಸುವ ಬ್ರೆಡ್ಡಿನ ಮೇಲೆ ನಿರ್ಧರಿತವಾಗಿರಿತ್ತದೆ. ಬಿಳಿ ಬಣ್ಣದ ಬ್ರೆಡ್ ಇದು ಮೈದಾದಿಂದ ತಯಾರಾಗಿದ್ದರೆ, ಜೀರ್ಣಕ್ರೀಯೆಯು ನಿಧಾನವಾಗುತ್ತದೆ ಮತ್ತು ದಿನನಿತ್ಯ ಮೈದಾ ಸೇವನೆ ದೇಹದ ಮೇಲೆ ಅಡ್ಡ ಪರಿಣಾಮವನ್ನು ಬೀರುತ್ತದೆ. ಬ್ರೌನ್ ಬ್ರೆಡಿನ ಬಳಕೆ ಬಿಳಿ ಬಣ್ಣದಕ್ಕಿಂತ ಉತ್ತಮವಾಗಿರುತ್ತದೆ. ಆದರೆ ಮಾರುಕಟ್ಟೆಯಲ್ಲಿ ನಕಲಿ ಬ್ರೌನ್ ಬ್ರೆಡಿನ ಮಾರಾಟ ಹೆಚ್ಚಾಗಿರುವ ಕಾರಣ ಖರೀಧಿಯ ವೇಳೆ ಜಾಗರೂಕವಾಗಿರುವ ಅಗತ್ಯವಿದೆ.
ಮಾರುಕಟ್ಟೆಯಲ್ಲಿರುವ ಬ್ರೆಡ್ ಗಳಲ್ಲಿ ಉತ್ತಮವಾದ ಆಯ್ಕೆ ಎಂದರೆ ಅದು ಮಲ್ಟಿ ಗ್ರೇನ್ ಬ್ರೆಡ್ ಆಗಿದ್ದು ಅದರಲ್ಲಿ ವಿವಿಧ ಧಾನ್ಯಗಳ ಮಿಶ್ರಣ ಇರುವುದರಿಂದ ವಿವಿಧ ಪೋಷ್ಟಿಕಾಂಶ ದೊರೆಯುತ್ತದೆ. ಇದನ್ನು ಸಹ ನಕಲಿ ಮಾಡಿ ಮಾರಾಟ ಮಾಡುತ್ತಿರುವ ಹಿನ್ನಲೆಯಲ್ಲಿ ಖರೀದಿಯ ವೇಳೆ ಎಚ್ಚರವಾಗಿರುವುದು ಅಗತ್ಯ.
ಇನ್ನು ಮೊಟ್ಟೆ ಎನ್ನುವುದು ಶಕ್ತಿಯ ಆಗರವಾಗಿದ್ದು,ಇದರಲ್ಲಿ ಪ್ರೋಟಿನ್, ವಿಟಮಿನ್ ಬಿ, ಅಮಿನೋ ಆಮ್ಲ ಹೇರಳವಾಗಿದ್ದು, ಮಾಂಸಖಂಡದ ಬೆಳವಣಿಗೆ, ಜೀರ್ಣಕ್ರೀಯೆಗೆ ಉತ್ತಮವಾಗಿರುವುದರಿಂದ ದಿನನಿತ್ಯ ಮೊಟ್ಟೆಯನ್ನು ಸೇವಿಸುವುದು ಉತ್ತಮವಾಗಿದೆ.
ಮೊಟ್ಟೆಗಳಲ್ಲಿ ಹೆಚ್ಚಿನ ಪ್ರೋಟೀನ್ ಅಂಶ ಇರುವುದರಿಂದ ತೂಕ ನಿರ್ವಹಣೆಗೆ ಅವು ಸಾಮಾನ್ಯವಾಗಿ ಸಹಕಾರಿಯಾಗುತ್ತವೆ, ಇದು ನಿಮ್ಮನ್ನು ಹೆಚ್ಚು ಹೊತ್ತು ಹೊಟ್ಟೆ ತುಂಬಿದಂತೆ ಇರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ಈ ಉಪಾಹಾರವು ತೂಕ ಹೆಚ್ಚಾಗಲು ಕೊಡುಗೆ ನೀಡುತ್ತದೆಯೇ ಎಂಬುದು ಹೆಚ್ಚಾಗಿ ಬ್ರೆಡ್ ಮತ್ತು ಅಡುಗೆಯಲ್ಲಿ ಬಳಸುವ ಕೊಬ್ಬಿನ ಮೇಲೆ ಅವಲಂಬಿತವಾಗಿರುತ್ತದೆ.
ಪ್ರತಿದಿನ ಬ್ರೆಡ್ ಆಮ್ಲೆಟ್ನ್ನು ತಿನ್ನುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮವಿರುವುದಿಲ್ಲ ಆದರೆ ಸೂಕ್ತವಾದ ಬ್ರೆಡ್ಡಿನ ಅಯ್ಕೆ ಮತ್ತು ಕಡಿಮೆ ಎಣ್ಣೆಯ ಬಳಕೆ ಮಾಡಿದರೆ ಮಾತ್ರ ಉತ್ತಮ.
ಬ್ರೆಡ್ ಆಮ್ಲೆಟ್ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸಲು ಬಯಸಿದರೆ, ಸಣ್ಣ ಬದಲಾವಣೆಗಳು ದೊಡ್ಡ ವ್ಯತ್ಯಾಸವನ್ನುಂಟುಮಾಡಬಹುದು. ಪಾಲಕ್, ಈರುಳ್ಳಿ, ಟೊಮ್ಯಾಟೊ ಸೇರಿಸುವುದರಿಂದ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಹೆಚ್ಚಾಗುತ್ತವೆ. ಧಾನ್ಯದ ಬ್ರೆಡ್ ಅನ್ನು ಆಯ್ಕೆ ಮಾಡುವುದು ಸಹ ಅತ್ಯಾಧಿಕತೆ ಮತ್ತು ಜೀರ್ಣಕ್ರಿಯೆಯನ್ನು ಬೆಂಬಲಿಸುತ್ತದೆ. ಸಾಧ್ಯವಾದಾಗಲೆಲ್ಲಾ ಮನೆಯಲ್ಲಿಯೇ ಇದನ್ನು ತಯಾರಿಸಬೇಕೆಂದು ಪೌಷ್ಟಿಕತಜ್ಞರು ಶಿಫಾರಸು ಮಾಡುತ್ತಾರೆ.
ಗಮನಿಸಿ: ಈ ಲೇಖನವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಉದ್ದೇಶಿಸಲಾಗಿದೆ ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ ಮತ್ತು ತಜ್ಞರ ಅಭಿಪ್ರಾಯಗಳನ್ನು ಆಧರಿಸಿದೆ.