ದಿನಕ್ಕೆ 5 ವಾಲ್​ನಟ್ಸ್​ ಸೇವಿಸುವುದರಿಂದ ಆಗುವ ಪ್ರಯೋಜನಗಳೇನು? | Health tips

Walnuts
Published on

Health tips: ವಾಲ್​ನಟ್​ಗಳು ಅನೇಕ ಅಗತ್ಯ ಪೋಷಕಾಂಶಗಳಿಂದ ತುಂಬಿರುವಂತಹ ಧಾನ್ಯವಾಗಿದೆ. ಈ ಬೀಜವು ಒಮೆಗಾ-3, ಕೊಬ್ಬಿನಾಮ್ಮಗಳು, ಜೀವಸತ್ವಗಳು, ಖನಿಜಗಳು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ದಿನಕ್ಕೆ 5 ವಾಲ್​ನಟ್​ ತಿನ್ನುವುದರಿಂದ ಪ್ರಯೋಜನಗಳೇನು ನೋಡೋಣ ಬನ್ನಿ...

ಹೃದಯದ ಆರೋಗ್ಯ ಕಾಪಾಡುತ್ತದೆ

ವಾಲ್​ನಟ್​​ಗಳು ಆಲ್ಫಾ-ಲಿನೋಲೇನಿಕ್​ ಆಮ್ಲದ ಮೂಲವಾಗಿದೆ. ಇದು ಒಮೆಗಾ-3 ಕೊಬ್ಬಿನಾಮ್ಲವಾಗಿದ್ದು, ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದರಿಂದ ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯವಾಗುತ್ತದೆ.

ಮೆದುಳಿನ ಆರೋಗ್ಯ ಕಾಪಾಡುತ್ತದೆ

ವಾಲ್​ನಟ್​ನಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಪಾಲಿಫಿನಾಲ್​ಗಳು ಮೆದುಳಿನ ಕಾರ್ಯವನ್ನು ಸುಧಾರಿಸುತ್ತವೆ ಮತ್ತು ಮಾನಸಿಕ ಕುಸಿತವನ್ನು ನಿಧಾನಗೊಳಿಸುತ್ತದೆ.

ಕರುಳಿನ ಆರೋಗ್ಯ ಸಂರಕ್ಷಣೆ

ಕರುಳಿನಲ್ಲಿರುವ ಬ್ಯಾಕ್ಟಿರಿಯಾಗಳು ದೇಹಕ್ಕೆ ಅಗತ್ಯವಾಗಿರುತ್ತದೆ. ವಾಲ್​ನಟ್​​ ಸೇವಿಸುವುದರಿಂದ ಕರುಳಿನ ಆರೋಗ್ಯ ಸುಧಾರಿಸಲು ಸಹಾಯವಾಗುತ್ತದೆ.

ಕೊಲೆಸ್ಟ್ರಾಲ್​ ಕಡಿಮೆ ಮಡುತ್ತದೆ

ವಾಲ್​ನಟ್​ ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿರುತ್ತದೆ. ಇದನ್ನು ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮಧುಮೇಹ ಕಡಿಮೆ ಮಾಡುವುದು

ಫೈಬರ್​ ಮತ್ತು ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧಿಯಾಗಿರುವ ವಾಲ್​ನಟ್​ನ್ನು ಸೇವಿಸುವುದರಿಂದ ಮಧುಮೇಹವನ್ನು ತಡೆಗಟ್ಟಬಹುದು.

ಕ್ಯಾನ್ಸರ್​ ತಡೆಗಟ್ಟುವಿಕೆ

ಕರುಳಿನಲ್ಲಿರುವ ಸೂಕ್ಷ್ಮ ಜೀವಿಗಳು ವಾಲ್​ನಟ್​ನಲ್ಲಿ ಕಂಡುಬರುವ ಸಂಯುಕ್ತಗಳನ್ನು ತೆಗೆದುಕೊಂಡು ಯುರೊಲಿಥಿನ್​ ಸಂಯುಕ್ತಗಳನ್ನು ಉತ್ಪಾದಿಸುತ್ತದೆ. ಈ ಯುರೊಲಿಥಿನ್​ ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net