Weight Loss Diet: ದಿನಕ್ಕೊಂದು ಗ್ಲಾಸ್ ಈ ಜ್ಯೂಸ್‍ಗಳನ್ನು ಕುಡಿದ್ರೆ ಸಾಕು! ಈಸಿಯಾಗಿ ತೂಕ ಇಳಿಸಬಹುದು..

Lemon Juice
Published on

Weight Loss Diet : ನೀವು ತೂಕ ಕಳೆದುಕೊಳ್ಳಲು ಬೇರೆ ಯಾವುದೇ ರಾಸಾಯನಿಕ/ವೈದ್ಯಕೀಯ ಔಷಧಿಗಳನ್ನು ಬಳಸುವ ಅಗತ್ಯವಿಲ್ಲ. ನಿಮ್ಮ ಮನೆಯಲ್ಲಿಯೇ ಇರುವ ಸಾಮಾಗ್ರಿಗಳಿಂದ ನಿಮ್ಮ ತೂಕವನ್ನು ಕಡಿಮೆ ಮಾಡಬಹುದು. ಈ ಜ್ಯೂಸ್​ಗಳನ್ನು ಸೇವಿಸುವುದರಿಂದ ನಿಮ್ಮ ತೂಕ ಕಡಿಮೆ ಆಗುತ್ತದೆ.

 ನಿಂಬೆ ಹಣ್ಣಿನ ಜ್ಯೂಸ್​​ : ನಿಂಬೆ ರಸವನ್ನು ನೀರನಲ್ಲಿ ಬೆರೆಸಿ ಕುಡಿಯುವುದರಿಂದ ದೇಹದ ದಣಿವು ಕಡಿಮೆ ಆಗುತ್ತದೆ.  ನಿಂಬೆ ಹಣ್ಣಿನಲ್ಲಿ ವಿಟಾಮಿನ್​ 'ಸಿ' ಇದೆ. ಮುಂಜಾನೆ ಒಂದು ಗ್ಲಾಸ್ ನೀರಿಗೆ ನಿಂಬೆ ರಸದ ಜೊತೆಗೆ ಒಂದು ಸ್ಪೂನ್ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ದೇಹದ ತೂಕ ಕಡಿಮೆ ಆಗುತ್ತದೆ ಮತ್ತು ಜೀರ್ಣಕ್ರಿಯೆಯು ಸರಿಯಾಗಿ ಆಗುತ್ತದೆ.

Lemon Juice

ಅರಿಶಿಣ ನೀರು:  ಅರಿಶಿಣದಲ್ಲಿ ವೈದ್ಯಕೀಯ ಗುಣವಿದೆ. ಪ್ರಾಚೀನ ಕಾಲದಿಂದಲೂ ಅರಿಶಿಣಕ್ಕೆ ಬಹಳ ಮಹತ್ವ ಇದೆ. ಸುಂದರವಾಗಿ ಕಾಣಲು ಮುಖಕ್ಕೆ ಹಚ್ಚಿಕೊಳ್ಳುತ್ತಾರೆ.ಶುಭ ಸಂದರ್ಭಗಳಲ್ಲಿಯೂ ಅರಿಶಿಣ ಬಳಸುವುದು ವಾಡಿಕೆ. ಹಾಗೆಯೇ ಅರಿಶಿಣ ನೀರಿಗೆ ಬೆರೆಸಿ ಕುಡಿಯುವುದರಿಂದ ದೇಹ ತೂಕ ಇಳಿಸಲು ಸಹಾಯಕವಾಗಿದೆ.

ಶುಂಠಿ ಟೀ: ಶುಂಠಿ ದೇಹಕ್ಕೆ ತುಂಬಾ ಒಳ್ಳೆಯದ್ದು. ಇದು ಜೀರ್ಣಕ್ರಿಯೆಗೆ ಸಹಾಯಕವಾಗಿದೆ. ಶುಂಠಿ ಟೀ ಕುಡಿಯುವಾಗ ಊರಿ ಎನಿಸಿದರು ಅದು ತೂಕ ಕಡಿಮೆ ಮಾಡಲು ರಾಮಬಾಣದಂತೆ ಕೆಲಸ ಮಾಡುತ್ತದೆ.

ಗ್ರೀನ್ ಟೀ: ಗ್ರೀನ್ ಟೀ ರೋಗನಿರೋಧಕ ಶಕ್ತಿಯನ್ನು ಹೊಂದಿದೆ.  ಇದೂ ಕೂಡಾ ದೇಹದ ತೂಕ ಕಳೆದುಕೊಳ್ಳು ಸಹಾಯ ಮಾಡಿದೆ.

Lemon Juice

ಸೌತೆಕಾಯಿ ಮತ್ತು ಪುದೀನಾ ಮಿಶ್ರಣ: ಇದು ತುಂಬಾ ಸರಳವಾದ ಡಯಟ್ ಜ್ಯೂಸ್​​. ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಸಿಗುವ ಸಾಮಾನ್ಯ ವಸ್ತುಗಳಿಂದ ತಯಾರಿಸಬಹುದು. ಹಣ್ಣು ಮತ್ತು ಗಿಡಮೂಲಿಕೆಗಳ ಸಮ್ಮಿಲನದಿಂದ ದೇಹದಲ್ಲಿನ ಕ್ಯಾಲೋರಿ ಮತ್ತು ಹೈಡ್ರೇಟಿಂಗ್ ಕಡಿಮೆ ಮಾಡಲು ಸಹಾಯಕವಾಗಿದೆ.

ಈ ಐದು ಔಷಧಿ ಗುಣವುಳ್ಳ  ಜ್ಯೂಸ್​ಗಳ ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ  ಅವಶ್ಯಕ ಇರುವ ಪೋಷಕಾಂಶಗಳು ದೊರೆಯುತ್ತವೆ. ನೀವು ಇನ್ನಷ್ಟು ಆರೋಗ್ಯಕರವಾಗಿ ಮತ್ತು ಪೀಟ್ ಆಗಿ ಇರಲು ಇವುಗಳು ಸಹಾಯ ಮಾಡುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net