

ಬೆಂಗಳೂರು: ನಿದ್ರೆಯ ಕೊರತೆ, ಅನಾರೋಗ್ಯಕರ ಆಹಾರ, ಒತ್ತಡ, ಧೂಮಪಾನ, ಮಾಲಿನ್ಯ ಇತ್ಯಾದಿಗಳಿಂದ ಜನರು ಅನೇಕ ರೀತಿಯ ಚರ್ಮ ಸಂಬಂಧಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದು ಕಣ್ಣುಗಳ ಸುತ್ತಲಿನ ಚರ್ಮದ ಮೇಲೂ ಪರಿಣಾಮ ಬೀರುತ್ತದೆ. ವಿಶೇಷವಾಗಿ ದೇಹದಲ್ಲಿ ನೀರಿನ ಕೊರತೆಯಿಂದ ಜನರು ಡಾರ್ಕ್ ಸರ್ಕಲ್ ಸಮಸ್ಯೆಯನ್ನು ಸಹ ಎದುರಿಸಬೇಕಾಗುತ್ತದೆ.
ಆದರೆ ನಿಮಗೆ ಗೊತ್ತಾ, ಈ ಸಮಸ್ಯೆಯನ್ನು ಹೋಗಲಾಡಿಸಲು ಕಲ್ಲಂಗಡಿ ತುಂಬಾ ಪ್ರಯೋಜನಕಾರಿಯಾಗಿದೆ. ನೀರಿನಂಶವಿರುವ ಈ ಹಣ್ಣು ದೇಹವನ್ನು ಹೈಡ್ರೇಟ್ ಮಾಡುವುದರ ಜೊತೆಗೆ ತ್ವಚೆಯನ್ನು ಹೈಡ್ರೇಟ್ ಆಗಿ ಇಡಲು ತುಂಬಾ ಉಪಯುಕ್ತವಾಗಿದೆ. ಡಾರ್ಕ್ ಸರ್ಕಲ್ ಸಮಸ್ಯೆಯನ್ನು ತಪ್ಪಿಸಲು, ಕಣ್ಣಿನ ಸುತ್ತಲಿನ ಚರ್ಮದ ಮೇಲೆ ಕಲ್ಲಂಗಡಿ ರಸವನ್ನು ಹಚ್ಚಿ. ಜತೆಗೆ ನಿಮ್ಮ ಆಹಾರದಲ್ಲಿ ಈ ಹಣ್ಣನ್ನು ಸೇರಿಸುವ ಮೂಲಕ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು.
ಬೀಟಾ ಕ್ಯಾರೋಟಿನ್, ಲೈಕೋಪೀನ್, ಫೈಬರ್, ವಿಟಮಿನ್ ಬಿ1, ಬಿ6 ಮತ್ತು ಸಿ, ಪೊಟ್ಯಾಶಿಯಂ, ಮೆಗ್ನೀಶಿಯಂ ಮುಂತಾದ ಪೋಷಕಾಂಶಗಳು ಈ ಹಣ್ಣಿನಲ್ಲಿ ಕಂಡುಬರುತ್ತವೆ. ಕಲ್ಲಂಗಡಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗುಣಗಳಿಂದಾಗಿ ಕಪ್ಪು ವರ್ತುಲ ಸಮಸ್ಯೆ ದೂರವಾಗುತ್ತದೆ.