ಗಾಳಿಯ ಹರಿವು ಚೆನ್ನಾಗಿಲ್ಲದಿದ್ದರೆ, ಅನಿಲ ಸರಿಯಾಗಿ ಉರಿಯದಿದ್ದರೆ ಸಿಲಿಂಡರ್ ಬಳಕೆ ಹೆಚ್ಚಾಗುತ್ತದೆ. ಬರ್ನರ್ ಶುದ್ಧವಾಗಿದ್ದರೆ, ಜ್ವಾಲೆಯು ನೀಲಿ ಬಣ್ಣದಲ್ಲಿ ಕಾಣಿಸುತ್ತದೆ. ಜ್ವಾಲೆಯು ಕೆಂಪು, ಹಳದಿ ಅಥವಾ ಕಿತ್ತಳೆ ಬಣ್ಣದಲ್ಲಿ ಕಾಣಿಸಿಕೊಂಡರೆ, ಬರ್ನರ್‌ನಲ್ಲಿ ಏನೋ ತಪ್ಪಾಗಿದೆ ಎಂದರ್ಥ. ಹಾಗಾಗಿ ನೀವು ಸ್ವಚ್ಛವಾದ ಬ್ರಷ್ನಿಂದ ಸ್ವಚ್ಛಗೊಳಿಸುವುದರಿಂದ ಸಮಸ್ಯೆಯು ಬಗೆಹರಿಯುತ್ತದೆ. ಹಾಗೆಯೇ ಗ್ಯಾಸ್ ಇನ್ನು ಸ್ವಲ್ಪ ದಿನ ಬರುತ್ತದೆ.