ಬೇಸಿಗೆಯಲ್ಲೂ ಗ್ಲೋಯಿಂಗ್​​ ಸ್ಕಿನ್​​ ನಿಮ್ಮದಾಗಿಸಿಕೊಳ್ಳಬೇಕಾ; ಹಾಗಿದ್ರೆ ಕಲ್ಲಂಗಡಿ ಹಣ್ಣಿನ ಸಿಪ್ಪೆಯಿಂದ ಈ ರೀತಿ ಮಾಡಿ ಸಾಕು..Glowing Skin

Glowing Skin
Published on

Glowing Skin: ಬೇಸಿಗೆ ಬಂತೆಂದರೆ ಸಾಕು ಎಲ್ಲರ ಮೆನೆಗಳಲ್ಲಿ ಕಲ್ಲಂಗಡಿ ಹಣ್ಣು ರಾರಾಜಿಸುತ್ತದೆ. ಇದು ರುಚಿಕರವಾದ ಮತ್ತು ಹೆಚ್ಚು ನೀರಿನಾಶವಿರುವ ಹಣ್ಣು ಮಾತ್ರವಲ್ಲ ಅದರ ಪ್ರಯೋಜನಗಳು ಸಾಕಷ್ಟಿದೆ. ನಾವೆಲ್ಲಾ ಹೆಚ್ಚಾಗಿ ಈ ಹಣ್ಣನ್ನು ಮಾತ್ರ ತಿಂದು ಸಿಪ್ಪೆಯನ್ನು ಎಸೆಯುತ್ತೇವೆ. ಆದರೆ ಕಲ್ಲಂಗಡಿ ಸಿಪ್ಪೆ ನಿಮ್ಮ ಮುಖದ ಆರೈಕೆಯಲ್ಲಿ ಪರಿಣಾಮಕಾರಿಯಾಗಿದೆ.

ಪೋಷಕಾಂಶಗಳಿಂದ ಸಮೃದ್ಧವಾಗಿರುವ ಕಲ್ಲಂಗಡಿ ಸಿಪ್ಪೆಯನ್ನು ವಿವಿಧ ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಮತ್ತು ನಿಮ್ಮ ತ್ವಚೆಯೂ ಕಾಂತಿಯುತವಾಗಿ ಹೊಳೆಯುವಂತೆ ಮಾಡುವ ಪೋಷಣೆಯ ಫೇಸ್ ಪ್ಯಾಕ್ಅಲ್ಲಿ ಬಳಸಬಹುದು. ಹಾಗಾದ್ರೆ ಕಲ್ಲಂಗಡಿ ಸಿಪ್ಪೆಯನ್ನು ಫೇಸ್ ಪ್ಯಾಕ್​ನಲ್ಲಿ ಬಳಸುವ ವಿಧಾನ ಇಲ್ಲಿದೆ ನೋಡಿ.

ಕಲ್ಲಂಗಡಿ ಸಿಪ್ಪೆ ಮತ್ತು ಕಡಲೆ ಹಿಟ್ಟು

ನೀವು ಕಲ್ಲಂಗಡಿ ಸಿಪ್ಪೆ ಮತ್ತು ಕಡಲೆ ಹಿಟ್ಟಿನಿಂದ ಫೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಬಹುದು. ಇದಕ್ಕಾಗಿ ಕಲ್ಲಂಗಡಿ ಸಿಪ್ಪೆಯ ಬಿಳಿ ಭಾಗವನ್ನು ತೆಗೆದುಹಾಕಿ. ನಂತರ ಅವುಗಳನ್ನು ನುಣ್ಣಗೆ ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ಕಡಲೆ ಹಿಟ್ಟು ಸೇರಿಸಿ. ರೆಡಿಯಾದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ. ಅರ್ಧ ಗಂಟೆಯ ನಂತರ ಮುಖವನ್ನು ನೀರಿನಿಂದ ತೊಳೆಯಿರಿ. ಇದು ಬಿಸಿಲಿನಿಂದ ಉಂಟಾಗುವ ಜಿಗುಟುತನವನ್ನು ತೆಗೆದುಹಾಕುತ್ತದೆ ಹಾಗೂ ಚರ್ಮವನ್ನು ತಂಪಾಗಿರಿಸುತ್ತದೆ.

ಕಲ್ಲಂಗಡಿ ಸಿಪ್ಪೆ ಮತ್ತು ಹಸಿ ಹಾಲು

ಕಲ್ಲಂಗಡಿ ಸಿಪ್ಪೆಯ ಪೇಸ್ಟ್ಅನ್ನು ನಿಮ್ಮ ಮುಖಕ್ಕೆ ಹಸಿ ಹಾಲನ್ನು ಬೆರೆಸಿ ಹಚ್ಚಬಹುದು. ಇದಕ್ಕಾಗಿ 2 ಚಮಚ ಕಲ್ಲಂಗಡಿ ಸಿಪ್ಪೆಯ ಪೇಸ್ಟ್ ತೆಗೆದುಕೊಳ್ಳಿ. ಅದಕ್ಕೆ ಅರ್ಧ ಟೀ ಚಮಚ ಹಸಿ ಹಾಲು ಸೇರಿಸಿ. ಅದನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಡಿ. ಹಸಿ ಹಾಲು ಮುಖವನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ. ಇದು ತ್ವಚೆಯ ಮೇಲೆ ಸಂಗ್ರಹವಾಗಿರುವ ಎಲ್ಲಾ ಕೊಳಕು ಮತ್ತು ಧೂಳನ್ನು ಸುಲಭವಾಗಿ ತೆಗೆದುಹಾಕುತ್ತದೆ. ಈ ಫೇಸ್ ಪ್ಯಾಕ್ಅನ್ನು ಹಚ್ಚುವುದರಿಂದ ಮುಖಕ್ಕೆ ತಕ್ಷಣದ ಹೊಳಪು ಬರುತ್ತದೆ.

ಕಲ್ಲಂಗಡಿ ಸಿಪ್ಪೆ ಮತ್ತು ಅಲೋವೆರಾ

ಕಲ್ಲಂಗಡಿ ಸಿಪ್ಪೆ ಮತ್ತು ಅಲೋವೆರಾ ಫೇಸ್ ಪ್ಯಾಕ್ಅನ್ನು ಸಹ ತಯಾರಿಸಬಹುದು. ಇದಕ್ಕಾಗಿ ಕಲ್ಲಂಗಡಿ ಸಿಪ್ಪೆಗಳನ್ನು ತೆಗೆದುಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ಅದಕ್ಕೆ 2 ಚಮಚ ಅಲೋವೆರಾ ಜೆಲ್ ಸೇರಿಸಿ. ಈ ಪ್ಯಾಕ್ಅನ್ನು ಮುಖಕ್ಕೆ ಹಚ್ಚಿ 40 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ಅಲೋವೆರಾ ಚರ್ಮಕ್ಕೆ ತೇವಾಂಶವನ್ನು ನೀಡುತ್ತದೆ. ಇದು ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ನೀವು ಈ ಫೇಸ್ ಪ್ಯಾಕ್ಅನ್ನು ವಾರಕ್ಕೆ 2-3 ಬಾರಿ ಬಳಸಬಹುದು.

ಕಲ್ಲಂಗಡಿ ಸಿಪ್ಪೆ ಮತ್ತು ರೋಸ್ ವಾಟರ್

ಬೇಸಿಗೆಯಲ್ಲಿ ಕಲ್ಲಂಗಡಿ ಸಿಪ್ಪೆ ಮತ್ತು ರೋಸ್ ವಾಟರ್ ಫೇಸ್ ಪ್ಯಾಕ್ ಕೂಡ ಪ್ರಯೋಜನಕಾರಿ. ಈ ಫೇಸ್ ಪ್ಯಾಕ್ ಮಾಡಲು ಕಲ್ಲಂಗಡಿ ಸಿಪ್ಪೆಗಳನ್ನು ಪುಡಿಮಾಡಿ ದಪ್ಪ ಪೇಸ್ಟ್ ಮಾಡಿ. ಅದಕ್ಕೆ ರೋಸ್ ವಾಟರ್ ಸೇರಿಸಿ ನಂತರ ಮುಖಕ್ಕೆ ಹಚ್ಚಿ. ಅರ್ಧ ಗಂಟೆಯ ನಂತರ ಮುಖವನ್ನು ನೀರಿನಿಂದ ತೊಳೆಯಿರಿ. ಇದು ಬಿಸಿಲಿನಿಂದ ಉಂಟಾಗುವ ಚರ್ಮದ ಸಮಸ್ಯೆಗಳನ್ನು ಸಹ ತೆಗೆದುಹಾಕುತ್ತದೆ. ಆದ್ದರಿಂದ ನೀವು ಬೇಸಿಗೆಯಲ್ಲಿ ಈ ಫೇಸ್ ಪ್ಯಾಕ್ಅನ್ನು ಪ್ರಯತ್ನಿಸಬಹುದು.

ಕಲ್ಲಂಗಡಿ ಸಿಪ್ಪೆ ಮತ್ತು ಶ್ರೀಗಂಧದ ಪುಡಿ

ಬೇಸಿಗೆಯಲ್ಲಿ ಕಲ್ಲಂಗಡಿ ಸಿಪ್ಪೆ ಮತ್ತು ಶ್ರೀಗಂಧದ ಪುಡಿಯ ಫೇಸ್ ಪ್ಯಾಕ್ ಹಚ್ಚಿಕೊಳ್ಳುವುದು ಕೂಡ ಒಳ್ಳೆಯದು. ಇದಕ್ಕಾಗಿ 2 ಚಮಚ ಕಲ್ಲಂಗಡಿ ಸಿಪ್ಪೆಯ ಪೇಸ್ಟ್ ತೆಗೆದುಕೊಳ್ಳಿ. ಅದಕ್ಕೆ ಅರ್ಧ ಚಮಚ ಶ್ರೀಗಂಧದ ಪುಡಿಯನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. ಅರ್ಧ ಗಂಟೆಯ ನಂತರ ನೀರಿನಿಂದ ಮುಖ ತೊಳೆಯಿರಿ. ಶ್ರೀಗಂಧದ ಪುಡಿ ಮುಖವನ್ನು ತಂಪಾಗಿಸುತ್ತದೆ. ಇದು ಟ್ಯಾನಿಂಗ್, ಬಿಸಿಲಿನ ಬೇಗೆ ಮತ್ತು ಕಲೆಗಳನ್ನು ನಿವಾರಿಸುತ್ತದೆ. ಶ್ರೀಗಂಧದ ಪುಡಿಯನ್ನು ಹಚ್ಚುವುದರಿಂದ ಚರ್ಮದ ಕಿರಿಕಿರಿ ಮತ್ತು ಕೆಂಪು ಬಣ್ಣವೂ ನಾಶವಾಗುತ್ತೆ.

ಈ ರೀತಿಯಾಗಿ ಮನೆಯಲ್ಲಿಯೇ ಸಿಂಪಲ್​​ ಆಗ ಕಲ್ಲಂಗಡಿ ಸಿಪ್ಪೆಯ ಫೇಸ್ ಪ್ಯಾಕ್ ಮಾಡಿ ನಿಮ್ಮ ಮುಖಕ್ಕೆ ಹಚ್ಚಿ, ಬೇಸಿಗೆಯಲ್ಲಿಯೂ ಫಳಫಳ ಹೊಳೆಯುವ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಿ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net