ಪ್ರತಿನಿತ್ಯ ಒಂದರೆಡು ವಾಲ್​​​ನಟ್ಸ್​​​ ಸೇವನೆ ಮಾಡಿ, ಈ ಎಲ್ಲಾ ಆರೋಗ್ಯ ಲಾಭಗಳನ್ನ ಪಡೆಯಿರಿ…!

wfinal
Published on

ವಾಲ್ ನಟ್ಸ್‌ ಒಣ ಹಣ್ಣುಗಳಲ್ಲಿ ಒಂದಾಗಿದೆ. ಇದು ದುಬಾರಿಯಾಗಿದ್ದರು ಕೂಡ ಆರೋಗ್ಯದ ವಿಷಯದಲ್ಲಿ ಬಹಳ ಒಳ್ಳೆಯದು. ಅಪಾರ ಪ್ರಮಾಣದ ಪೌಷ್ಟಿಕ ಸತ್ವವನ್ನು ಹೊಂದಿರುವ ವಾಲ್ ನಟ್ಸ್‌ ಸೂಪರ್‌ ಫುಡ್‌ ಆಗಿದೆ. ವಾಲ್ ನಟ್ಸ್‌ ನಿಮ್ಮ ಹೃದಯ ಮತ್ತು ಮೆದುಳಿಗೆ ಬಹಳ ಒಳ್ಳೆಯದು.
ಹಾಗಿದ್ರೆ ವಾಲ್​ನಟ್​​ ಸೇವನೆಯ ಆರೋಗ್ಯ ಪ್ರಯೋಜನವನ್ನ ತಿಳಿಯೋಣ:

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ವಾಲ್‌ನಟ್ಸ್ ತಿನ್ನುವುದರಿಂದ ಆಗುವ ಪ್ರಯೋಜನಗಳು
ವಾಲ್‌ನಟ್ಸ್ ಸೇವಿಸುವುದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ಇದು ತೂಕ ನಷ್ಟಕ್ಕೂ ಪ್ರಯೋಜನಕಾರಿಯಾಗಿದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವಾಲ್ ನಟ್ಸ್ ತಿನ್ನುವುದು ಉತ್ತಮ ಎಂದು ಆರೋಗ್ಯ ತಜ್ಞರು ಕೂಡಾ ಸಲಹೆ ನೀಡುತ್ತಾರೆ.

ಮೂಳೆಗಳನ್ನು ಬಲಪಡಿಸುತ್ತದೆ
ಪ್ರತಿದಿನ ವಾಲ್‌ನಟ್ಸ್ ಸೇವಿಸುವುದರಿಂದ ಮೂಳೆ ಮತ್ತು ಹಲ್ಲುಗಳ ಬಲ ಹೆಚ್ಚುತ್ತದೆ. ಇದರಲ್ಲಿರುವ ಆಲ್ಫಾ-ಲಿನೋಲೆನಿಕ್ ಆಮ್ಲವು ಮೂಳೆಗಳ ಬಲವನ್ನು ಹೆಚ್ಚಿಸುತ್ತದೆ.

ಮಧುಮೇಹವನ್ನು ನಿಯಂತ್ರಿಸುತ್ತದೆ
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವಾಲ್‌ನಟ್ಸ್ ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಇದರ ಸೇವನೆಯು ಟೈಪ್-2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.

ಹೃದಯದ ಆರೋಗ್ಯಕ್ಕೆ ಉತ್ತಮ
ವಾಲ್‌ನಟ್ಸ್‌ನಲ್ಲಿ ಒಮೆಗಾ -3 ಕೊಬ್ಬಿನಾಮ್ಲ ಇದೆ. ಅವು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಹೃದಯವನ್ನು ಆರೋಗ್ಯವಾಗಿಡುತ್ತವೆ.

ಥೈರಾಯ್ಡ್​​​ ಸಮಸ್ಯೆಗೆ ಇದು ರಾಮಬಾಣ
ರಾಯ್ಡ್‌ನಂತಹ ಸಮಸ್ಯೆಗಳನ್ನು ನಿವಾರಿಸುವಲ್ಲಿಯೂ ಇದು ಪರಿಣಾಮಕಾರಿಯಾಗಿದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ವಾಲ್‌ನಟ್‌ಗಳನ್ನು ಸೇವಿಸುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net