ಖಾಲಿ ಹೊಟ್ಟೆಯ ವಾಕಿಂಗ್ ಅಥವಾ ಊಟದ ನಂತರದ ವಾಕಿಂಗ್;ತೂಕ ಇಳಿಸಿಕೊಳ್ಳಲು ಯಾವುದು ಉತ್ತಮ|Health Tips

waight loss
Published on

Health Tips; ನಾವು ದಿನ ನಿತ್ಯ ಸ್ವಲ್ಪ ಸಮಯದ ಕಾಲ ನಡೆಯುವುದರಿಂದ ಆರೋಗ್ಯದಲ್ಲಿ ಸಮತೋಲನ ಕಾಪಾಡಿಕೊಳ್ಳಬಹುದು ಅಥವಾ ತೂಕ ಇಳಿಸಿಕೊಳ್ಳಬಹುದು ಎಂದು ವೈದ್ಯರು ಸಲಹೆ ನೀಡುತ್ತಾರೆ. ಅಂದಹಾಗೆ ನಾವು ನಡೆಯುವ ಸಮಯವೂ ಸಹ ಬಹಳ ಮುಖ್ಯವಾಗಿರುತ್ತದೆ. ಸರಿಯಾದ ಸಮಯದಲ್ಲಿ ನಡೆಯುವುದರಿಂದ ನಮ್ಮ ದೇಹಕ್ಕೆ ಪೂರ್ಣ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

ಊಟ ಮಾಡುವ ಮೊದಲು ಅಥವಾ ನಂತರ ನಡೆಯಬೇಕೇ ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಇರುತ್ತದೆ. ಎರಡೂ ಸಮಯಗಳಲ್ಲಿ ನಡೆಯುವುದರಿಂದ ತನ್ನದೇ ಆದ ಪ್ರಯೋಜನಗಳಿವೆ, ಆದರೆ ತೂಕ ಇಳಿಸಿಕೊಳ್ಳಲು ಯಾವ ಸಮಯ ಹೆಚ್ಚು ಪರಿಣಾಮಕಾರಿ ಎಂಬುದನ್ನು ತಿಳಿಯೋಣ.

ಖಾಲಿ ಹೊಟ್ಟೆಯಲ್ಲಿ ನಡೆಯುವುದರಿಂದಾಗುವ ಪ್ರಯೋಜನಗಳು

ಬೆಳಗಿನ ಉಪಾಹಾರದ ಮೊದಲು ಯಾವುದೇ ವ್ಯಾಯಾಮವನ್ನು ಮಾಡುವುದರಿಂದ ಕೊಬ್ಬಿನ ಆಕ್ಸಿಡೀಕರಣವನ್ನು ಹೆಚ್ಚಿಸುತ್ತದೆ ಮತ್ತು ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡಲಿದೆ. ಆದರೆ ಮಧುಮೇಹ, ಅಧಿಕ ರಕ್ತದೊತ್ತಡ ಆರೋಗ್ಯ ಸಮಸ್ಯೆ ಗಳಿರುವವರು ಉಪವಾಸದ ನಡಿಗೆಯಲ್ಲಿ ತೊಡಗಿಸಿಕೊಳ್ಳುವಾಗ ಜಾಗರೂಕರಾಗಿರಬೇಕು.

ಖಾಲಿ ಹೊಟ್ಟೆಯಲ್ಲಿ ನಡೆಯುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ವೇಗವಾಗಿ ಕರಗಿಸುತ್ತದೆ. ನೀವು ತಿನ್ನುವ ಮೊದಲು ನಡೆಯುವಾಗ, ದೇಹವು ಶಕ್ತಿಗಾಗಿ ಗ್ಲೈಕೊಜೆನ್ (ಕಾರ್ಬೋಹೈಡ್ರೇಟ್‌ಗಳಿಂದ ಪಡೆದ ಶಕ್ತಿ) ಬದಲಿಗೆ ನೇರವಾಗಿ ಕೊಬ್ಬನ್ನು ಬಳಸುತ್ತದೆ, ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಕೊಬ್ಬನ್ನು ಕರಗಿಸಲು ಸಹಕಾರಿ

ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನಡೆಯುವುದರಿಂದ ಚಯಾಪಚಯ ಕ್ರಿಯೆ ಚುರುಕುಗೊಳ್ಳುತ್ತದೆ. ಇದು ದಿನವಿಡೀ ಕ್ಯಾಲೊರಿಗಳನ್ನು ಕರಗಿಸುವ ಪ್ರಕ್ರಿಯೆಯನ್ನು ವೇಗವಾಗಿ ಮಾಡುತ್ತದೆ.

ಚಯಾಪಚಯ ಕ್ರಿಯೆ ವೃದ್ಧಿ

ಮಧುಮೇಹ ರೋಗಿಗಳಿಗೆ ಊಟ ಮಾಡುವ ಮೊದಲು ನಡೆಯುವುದು ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣ

ಊಟದ ನಂತರ ನಡೆಯುವುದರಿಂದಾಗುವ ಪ್ರಯೋಜನಗಳು

1) ಊಟದ ನಂತರ 15 ರಿಂದ 30 ನಿಮಿಷಗಳ ಕಾಲ ಲಘುವಾಗಿ ನಡೆಯುವುದರಿಂದ ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.

5) ಟೈಪ್ 2 ಡಯಾಬಿಟಿಸ್ ಅಪಾಯದಲ್ಲಿರುವವರಿಗೆ ಊಟದ ನಂತರ ನಡೆಯುವುದು ಉತ್ತಮ ಮಾರ್ಗವಾಗಿದೆ.

4) ಊಟದ ನಂತರದ ನಡಿಗೆ ಕರುಳಿನ ಆರೋಗ್ಯ ಸಮಸ್ಯೆಗಳನ್ನು ತಡೆಯಲು ಸಹಕಾರಿ ಯಾಗಿದ್ದು ಇದು ಹೊಟ್ಟೆಯುಬ್ಬರ ಮತ್ತು ಅಸಿಡಿಟಿ ಸಮಸ್ಯೆ ಯನ್ನು ದೂರ ಮಾಡಲಿದೆ.

3) ಊಟದ ನಂತರ ನಡಿಗೆಯು ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡಲಿದೆ.

2) ಇದು ಗ್ಯಾಸ್, ಆಮ್ಲೀಯತೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ.

(ಏಜೆನ್ಸೀಸ್)

ತೂಕ ನಷ್ಟಕ್ಕೆ ಮತ್ತು ಒಟ್ಟಾರೆ ದೇಹದ ಯೋಗ ಕ್ಷೇಮವನ್ನು ಕಾಪಾಡಿಕೊಳ್ಳಲು, ಪ್ರತಿದಿನ 30 ರಿಂದ 60 ನಿಮಿಷಗಳ ಕಾಲ ನಡೆಯಬೇಕು. ನಿಮ್ಮ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವ ಜೊತೆಗೆ, ಸಾಕಷ್ಟು ನಿದ್ರೆ ಪಡೆಯಬೇಕು ಹಾಗೂ ಆರೋಗ್ಯಕರ ಆಹಾರ ಸೇವನೆ ಮಾಡಬೇಕು.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು ಹಾಗೂ ಪಠ್ಯಗಳಿಂದ ಸಂಗ್ರಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net