Waking up at 5 am really boosts brain productivity: ಭಾರತೀಯರಾದ ನಾವು ಮುಂಜಾನೆ ಐದಕ್ಕೆ ಎದ್ದು, ಮನೆಯ ಅಂಗಳ ತೊಳೆದು, ಸ್ನಾನ ಮಾಡಿ, ತುಳಸಿ ಪೂಜೆ ಮಾಡೋದು, ಶ್ಲೋಕ ಓದೋದು ಸಾಮಾನ್ಯ. ಕಾಲಾನಂತರದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಮಕ್ಕಳು ಬೇಗ ಎದ್ದು ಓದುವುದು ತಲೆಗೆ ಹೋಗುತ್ತದೆ ಎಂದು ಆ ವೇಳೆಯನ್ನೇ ಓದಲು ಫಿಕ್ಸ್ ಮಾಡಿಕೊಂಡರು. ಆದರೆ, ಇದು ಎಲ್ಲ ರೀತಿಯ ವ್ಯಕ್ತಿಗಳಿಗೆ ಒಳ್ಳೆಯದಲ್ಲ, ಮೆದುಳನ್ನು ನಿಜವಾಗಿಯೂ ಚುರುಕಾಗಿಡುವುದು ಯಾವ ಸಮಯ ಎನ್ನುವುದನ್ನು ನ್ಯೂರೋ ಸೈಂಟಿಸ್ಟ್ ರಾಚೆಲ್ ಬ್ಯಾರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.