ಕಾಫಿ, ಸಿನಿಮಾ ಡೇಟಿಂಗ್​ ಬೋರ್​ ಆಯ್ತಾ?; ಪ್ರೇಯಸಿ ಜೊತೆ ಬೆಂಗಳೂರಿನ ಈ ಮ್ಯೂಸಿಯಂಗಳಿಗೊಮ್ಮೆ ಭೇಟಿ ನೀಡಿ!..Museum Dating

Bengaluru Museum Dating
Bengaluru Museum Dating
Published on

ಪ್ರಮುಖ ಮುಖ್ಯಾಂಶಗಳು

  • ಅದೇ ಕಾಫಿ, ಐಸ್​ಕ್ರೀಂ, ನೈಟ್​ ಔಟ್​ ಡೇಟಿಂಗ್​ ಮಾಡೋದ್​ ಬಿಡಿ
  • ಬೆಂಗಳೂರಿನ ಈ ಪ್ರಸಿದ್ಧ, ವಿಭಿನ್ನ ಮ್ಯೂಸಿಯಂಗೆ ಬೇಟಿ ನೀಡಿ
  • ಬೆಂಗಳೂರಿನಲ್ಲಿದೆ ಅಪರೂಪದ ಪೆನ್ನು, ಮೆದುಳು. ಪೇಪರ್​ ಮನಿ ಸಂಗ್ರಹಾಲಯ
Bengaluru Museum Dating: ಪ್ರತಿ ಬಾರಿ ಪ್ರೇಯಸಿ ಅಥವಾ ಪ್ರಿಯಕರನ ಜೊತೆ ಸೇರಿ ಕಾಫಿ ಡೇಟ್, ನೈಟ್​ ಔಟ್​, ಪಾರ್ಕ್​ನಲ್ಲಿ​ ಸುತ್ತಾಟ, ಐಸ್ ಕ್ರೀಂ ಡೇಟ್​ ಮಾಡಿ ಮಾಡಿ ಬೋರ್​  ಆಗಿ ಮುಂದೆ ಏನ್​ ಮಾಡೋದು, ಯಾವ ಸ್ಥಳಕ್ಕೆ ಭೇಟಿ ಕೊಡೋದು. ಏಕಾಂತತೆಯಲ್ಲಿ ಸಮಯ ಕಳೆಯೋದು ಎಲ್ಲಿ ಎಂದು ಯೋಚನೆ​ ಮಾಡ್ತಿದ್ರೆ. ಈ ಭಾರಿ ಕೊಂಚ ವಿಭಿನ್ನ ಜಾಗಕ್ಕೆ ಹೋಗೋ ಪ್ಲ್ಯಾನ್​ ಮಾಡಿ...
ಹೌದು ನಿಮ್ಮ ಮುಂದಿನ ಡೇಟಿಂಗ್​ ಜಾಗಗಳು ಕೈ ಗಡಿಯಾರದ ಮ್ಯೂಸಿಯಂ, ಪೆನ್ನಿನ ಸಂಗ್ರಹಾಲಯ ಹಾಗೂ  ಮ್ಯೂಸಿಕ್​ ಎಕ್ಸ್​ಪೀರಿಯನ್ಸ್​  ಮ್ಯೂಸಿಯಂ, ಏರೋ ಸ್ಪೇಸ್​ ಮ್ಯೂಸಿಯಂ ಸೇರಿದಂತೆ ಬೆಂಗಳೂರಿನಲ್ಲಿ ಪ್ರೇಮಿಗಳಿಗೆ ಹೇಳಿ ಮಾಡಿಸಿದ ಕೆಲವು  ಸೃಜನ ಶೀಲ ಪ್ರದೇಶಕ್ಕೆ ಭೇಟಿ ಕೊಟ್ಟು, ಅವುಗಳ ಬಗ್ಗೆ ಚರ್ಚೆ ಮಾಡುತ್ತಾ,  ಕಾಫಿ ಹೀರುತ್ತಾ ನಿಮ್ಮ ದಿನವನ್ನು ಕಳೆಯಬಹುದಾಗಿದೆ. ಹಾಗಾದರೆ, ಆ  ಮ್ಯೂಸಿಯಂಗಳು ಯಾವುದು ಎಲ್ಲಿದೆ ಎನ್ನುವ ಮಾಹಿತಿ ಈ ಲೇಖನದಲ್ಲಿ ಇದೆ.

ಪೆನ್ನು ಸಂಗ್ರಹಾಲಯ

ಬೆಂಗಳೂರಿನ  ಡಿ ಫೋರ್ಟ್ ರಸ್ತೆ, ಬೆಂಗಳೂರು ಕೋಟೆ, ಕೆಆರ್ ಮಾರುಕಟ್ಟೆ ಮೆಟ್ರೋ ಬಳಿ ಇರುವ 'ಜೆ' ಸ್​ ಲಾ ಕ್ವಿಲ್​​ ದೇಶದ ಏಕೈಕ ಪೆನ್ನು ಸಂಗ್ರಹಾಲಯವಾಗಿದೆ. ಮುಂಜಾನೆ 10ರಿಂದ 5ರವರೆಗೆ ಇಲ್ಲಿ ನೋಡಲು ಅವಕಾಶವಿರುತ್ತದೆ. ಖ್ಯಾತ ಕ್ಯಾಲಿಗ್ರಾಫರ್​ ಕೆಸಿ ಜನಾರ್ಧನ್​ ಎನ್ನುವವರು ತಮ್ಮ ಸ್ವಂತ ನಿವಾಸದಲ್ಲಿ ಮ್ಯೂಸಿಎಂ ಸ್ಥಾಪಿಸಿ 4 ಸಾವಿರಕ್ಕೂ ಹೆಚ್ಚು ಪೆನ್ನು ಸಂಗ್ರಹಿಸಿದ್ದಾರೆ. ಹಾಗೂ 3 ಸಾವಿರಕ್ಕು ಹೆಚ್ಚು ನಿಬ್​ ಹಳೆಯ ಕಾಲದ ಇಂಕ್​ ಬಾಟಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಯಾವುದೇ ಪ್ರವೇಶ ಶುಲ್ಕ ಇರೋದಿಲ್ಲ.

ರೆಜ್ವಾನ್​ ಅವರ ಕಾಗದದ ಹಣದ ಮ್ಯೂಸಿಯಂ

ಟ್ರಿನಿಟಿ ಮೆಟ್ರೋ ನಿಲ್ದಾಣದಿಂದ ಕೊಂಚ ದೂರದಲ್ಲಿರುವ ಅಶೋಕ ವೃತ್ತದ ಬಳಿ ರೆಜ್ವಾನ್​ ರಜಾಕ್​ ಅವರ ನ ಮ್ಯೂಸಿಯಂ ಆಫ್​​​ ಇಂಡಿಯನ್​ ಪೇಪರ್​ ಮನಿ ಸಂಗ್ರಹಾಲಯವಿದೆ. ಇದು ದಕ್ಷಿಣ ಭಾರತದ ಏಕೈಕ ಕಾಗದದ ಕರೆನ್ಸಿ ವಸ್ತು ಸಂಗ್ರಹಾಲಯವಾಗಿದೆ. 
ಇಲ್ಲಿಗೆ ಬೆಳಿಗ್ಗೆ 10:30ರಿಂದ ಸಂಜೆ 6ರವರೆಗೂ ಭೇಟಿ ನೀಡಬಹುದಾಗಿದ್ದು, ಶುಲ್ಕ 100 ರೂಪಾಯಿ ಇರಬಹುದು ಎಂದು ಊಹಿಸಲಾಗಿದೆ.  ಇಲ್ಲಿ ಈಸ್ಟರ್ನ್​ ಇಂಡಿಯಾ ಕಂಪನಿ ಕಾಲದ ನೋಟ, ಬ್ರಿಟಿಷ್​ ರಾಜ್​ನ ಅಪರೂಪ 10 ಸಾವಿರ ರೂ. ನೋಟು ಸೇರಿದಂತೆ ರಾಜರ ಆಳ್ವಿಕೆಯ ನೋಡುಗಳನ್ನು ಇಲ್ಲಿ ಕಾಣಬಹುದಾಗಿದೆ. 

ಇಂಡಿಯನ್ ಮ್ಯೂಸಿಕ್ ಎಕ್ಸಪೀರಿಎನ್ಸ್ ಮ್ಯೂಸಿಯಂ

ಬ್ರಿಗೇಡ್ ಮಿಲೇನಿಯಮ್ ರಸ್ತೆ, J.P. ನಗರ 7ನೇ ಹಂತದಲ್ಲಿರುವ ಇಂಡಿಯನ್ ಮ್ಯೂಸಿಕ್ ಎಕ್ಸಪೀರಿಎನ್ಸ್ ಮ್ಯೂಸಿಯಂನಲ್ಲಿ ಹಾಡುತ್ತಾ, ರೆಕಾರ್ಡ್​ ಮಾಡುತ್ತಾ ಸಮಯ ಕಳೆಯಬಹುದು. ಇಲ್ಲಿ ಒಟ್ಟು 9 ಗ್ಯಾಲರಿ ಇದೆ. ಶಾಸ್ತ್ರೀಯ ಸಂಗೀತ, ಜಾನಪದ, ಚಿತ್ರಗೀತೆ, ಪಾಪ್​​​, ಇತ್ತೀಚಿನ ಹಾಡುಗಳ  ಇತಿಹಾಸವನ್ನು ಕಾಣಬಹುದು. ಇಲ್ಲಿ ಭಾರತದ ಮೂಲೆ ಮೂಲೆಯಲ್ಲಿ ಬಳಕೆ ಮಾಡಲಾಗುತ್ತಿದ್ದ ಸಂಗೀತ ವಾದ್ಯಗಳ ಸಂಗ್ರಹವಿದೆ. ರೆಡಿಯೋ, ಕ್ಯಾಸೆಟ್, ಸಿಡಿಗಳು ಇವೆ. ಸಂಗೀತ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಜಾಗವಾಗಿದೆ. ಇವನ್ನು ಕಣ್ತುಂಬಿಕೊಳ್ಳಲು  150ರೂಪಾಯಿ ಪಾವತಿ ಮಾಡಬೇಕಾಗುತ್ತದೆ. 

ಎಚ್‌ಎಂಟಿ ಹೆರಿಟೇಜ್ ಸೆಂಟರ್ ಮತ್ತು ಮ್ಯೂಸಿಯಂ 

ಎಚ್‌ಎಂಟಿ  ಕಾಲೋನಿ, ಹಂಟ್ ಎಸ್ಟೇಟ್, ಜಾಲಹಳ್ಳಿ ಬಳಿ ಇರುವ ಎಚ್‌ಎಂಟಿ ಹೆರಿಟೇಜ್ ಸೆಂಟರ್ ಮತ್ತು ಮ್ಯೂಸಿಯಂಗೆ ಮುಂಜಾನೆ  10.30 ರಿಂದ ಸಂಜೆ 6ರವರೆಗೆ ಭೇಟಿ ನೀಡಬಹುದಾಗಿದೆ. ಹಳೆಯ ಕ್ಲಾಸಿಕ್ ಕೈಗಡಿಯಾರಗಳು, ಅಪರೂಪದ ಬ್ರೈಲ್ ಮಾದರಿಗಳು ಮತ್ತು ಗಡಿಯಾರಗಳ ಹಿಂದಿನ ತಂತ್ರಜ್ಞಾನವನ್ನು ಇಲ್ಲಿ ನೋಡಬಹುದು. ಇದರೊಂದಿಗೆ ಟ್ರ್ಯಾಕ್ಟರ್‌ಗಳು ಮತ್ತು ಯಂತ್ರೋಪಕರಣಗಳನ್ನು ಕಾಣಬಹುದು. ನೀವು ನೆನಪಿನ ಬುತ್ತಿಯಾಗಿ ಎಚ್‌ಎಂಟಿ ವಾಚ್‌ಗಳನ್ನೂ ಖರೀದಿಸಬಹುದು. ಇಲ್ಲಿನ ಪ್ರವೇಶ ಶುಲ್ಕ 30 ರಿಂದ ಆರಂಭವಾಗಲಿದೆ

ನಿಮ್ಹಾನ್ಸ್ ಬ್ರೈನ್​ ಮ್ಯೂಸಿಯಂ

ಬೆಂಗಳೂರಿನ ಹೊಂಬೇಗೌಡ ನಗರದಲ್ಲಿರುವ  ನಿಮ್ಹಾನ್ಸ್​​ನಲ್ಲಿ ಮಾನವನ ಮೆದುಳಿನ ಮಾದರಿ ಹಾಗೂ ಇತರ ಮಾನವನ ಅಂಗಾಗ ಸಂಗ್ರಹಿಸಿ ಇಡಲಾಗಿದೆ. ಮಾನವನ ಮೆದುಳಿನ ರಚನೆ ನರ, ವಿವಿಧ ಕಾಯಿಲೆಗಳ ಮಾಹಿತಿ ನೀಡುವ ಉದ್ದೇಶ ಇದರದ್ದಾಗಿದೆ. ಇಲ್ಲಿ 400ಕ್ಕೂ ಹೆಚ್ಚು ವಿಭಿನ್ನ ಮಾನವನ ಮೆದುಳಿನ ಮಾದರಿ ಇಲ್ಲಿದೆ. ಇಲ್ಲಿಗೆ ಬುಧವಾರ 2:30ರಿಂದ 4:30ರವರೆಗೆ ಹಾಗೂ ಶನಿವಾರ 10:30ರಿಂದ 4:30ರೊಳಗೆ ಭೇಟಿ ನೀಡಬಹುದಾಗಿದೆ. ಇಲ್ಲಿ ಪ್ರವೇಶ ಪಡೆಯಲು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net