ದೀಪಾವಳಿಗೆ ಮನೆಯಲ್ಲೇ ತಯಾರಿಸಿ Ambani ಸ್ಪೆಷಲ್​ ಲಡ್ಡು; ಮಾಡುವ ವಿಧಾನ ಹೀಗಿದೆ | Viral Recipe

Untitled design - 2024-10-23T202136.119
Published on

ದೀಪಾವಳಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಎಲ್ಲರೂ ಸಿಹಿತಿಂಡಿಯೊಂದಿಗೆ ಹಬ್ಬದ ಶುಭಾಶಯಗಳನ್ನು ಕೋರುತ್ತಾರೆ. ಪ್ರತಿ ದೀಪಾವಳಿಯಲ್ಲೂ ಒಂದೇ ರೀತಿಯ ಸಿಹಿತಿನಿಸು ತಿನ್ನಲು ಸಿಗುತ್ತದೆ. ಆದ್ದರಿಂದ ಎಲ್ಲರೂ ಹೊಸದನ್ನು ಏನಾದರೂ ಮಾಡಬೇಕು ಎಂದು ಯೋಚಿಸುತ್ತಿರುತ್ತಾರೆ. ಅವರಿಗಾಗಿಯೇ ‘ಅಂಬಾನಿ ಲಡ್ಡು’ ಮಾಡುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.(Viral Recipe)

ಅಂಬಾನಿ ಲಡ್ಡುಗಳು ಎಂದರೇನು ಎಂದು ಈಗ ಆಶ್ಚರ್ಯ ಪಡುತ್ತಿದ್ದೀರಾ. ಸಂದರ್ಶನವೊಂದರಲ್ಲಿ ಅನಂತ್​ ಅಂಬಾನಿ ಅವರು ತಮ್ಮ ವಂತಾರದಲ್ಲಿರುವ ಆನೆಗಳಿಗೆ ಡ್ರೈಫ್ರೂಟ್ಸ್​​ ಲಡ್ಡುಗಳನ್ನು ನೀಡುತ್ತೇವೆ ಎಂದು ಹೇಳಿದ್ದರು. ಈ ಲಡ್ಡುಗಳನ್ನು ಮನಷ್ಯರು ತಿನ್ನಬಹುದು. ಇದೀಗ ದೀಪಾವಳಿಗೂ ಮುನ್ನವೇ 'ಅಂಬಾನಿ ಲಡ್ಡು' ರೆಸಿಪಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಮಾಡಲು ಸುಲಭವಾದ ಈ ಲಡ್ಡು ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ಅಂಬಾನಿ ಲಡ್ಡು ಮಾಡಲು ಬೇಕಾಗಿರುವ ಪದಾರ್ಥಗಳು

  • ಗೋಡಂಬಿ
  • ಬಾದಾಮಿ
  • ಪಿಸ್ತಾ
  • ಮಖಾನಾ
  • ಖರ್ಜೂರ
  • ಏಪ್ರಿಕಾಟ್​​​
  • ಅಂಜೂರ
  • ಒಣದ್ರಾಕ್ಷಿ
  • ತುಪ್ಪ
  • ಇಷ್ಟವಿದ್ದರೆ ಸೂರ್ಯಕಾಂತಿ ಬೀಜ, ಅಗಸೆ ಬೀಜ

ಮಾಡುವ ವಿಧಾನ

  • ಬಾದಾಮಿ,ಗೋಡಂಬಿ ಮತ್ತು ಪಿಸ್ತಾವನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ.
  • ಮಖಾನಾವನ್ನು ಮಿಕ್ಸಿಯಲ್ಲಿ ಒರಟಾಗಿ ರುಬ್ಬಿಕೊಳ್ಳಿ.
  • ಈಗ ಬಾಣಲೆಯಲ್ಲಿ ತುಪ್ಪ ಹಾಕಿದ ನಂತರ ಸಣ್ಣದಾಗಿ ಕತ್ತರಿಸಿರುವ ವಾದಾಬಿ, ಗೋಡಂಬಿ, ಪಿಸ್ತಾ, ಪುಡಿ ಮಾಡಿರುವ ಮಖಾನಾ, ಸೂರ್ಯಕಾಂತಿ ಬೀಜ ಅಥವಾ ಅಗಸೆ ಬೀಜ, ದ್ರಾಕ್ಷಿ ಹಾಕಿ ಮಧ್ಯಮ ಉರಿಯಲ್ಲಿ ಸ್ವಲ್ಪ ಪರಿಮಳ ಬರುವವರೆಗೆ ಹುರಿಯಿರಿ. ಖರ್ಜೂರವನ್ನು ನೀರನ್ನು ಹಾಕದೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಮತ್ತೊಂದು ಕಡಾಯಿಯಲ್ಲಿ ತುಪ್ಪ ಕಾಯಿಸಿ ಖರ್ಜೂರದ ಪೇಸ್ಟ್​ ಹಾಕಿ ಸ್ವಲ್ಪ ರವೆ ಹಾಕಿ ಹುರಿಯಿರಿ. ನಂತರ ಮೊದಲೆ ಫ್ರೈ ಮಾಡಿ ಇಟ್ಟಿರುವ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಮಿಕ್ಸ್​ ಮಾಡಿ. ಎಲ್ಲವೂ ಚೆನ್ನಾಗಿ ಮಿಶ್ರಣವಾದ ನಂತರ ಗ್ಯಾಸ್ ಆಫ್ ಮಾಡಿ. ತಣ್ಣಗಾದ ನಂತರ ಲಡ್ಡುಗಳನ್ನು ತಯಾರಿಸಿ. ಈಗ ಲಡ್ಡು ಸವಿಯಲು ರೆಡಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net