ಟೆಕ್​ನೆಕ್​ ನೋವು ನಿವಾರಕ ಭುಜಂಗಾಸನ

Bhujangasana
Published on

ಇಂದು ಇಡೀ ವಿಶ್ವವೇ ಎಲೆಕ್ಟ್ರಾನಿಕ್​ ಮಯವಾಗಿದೆ. ಪುಟ್ಟಮಗು ಸಹ ಈ ಎಲೆಕ್ಟ್ರಾನಿಕ್​ ಗ್ಯಾಜೆಟ್​ಗಳನ್ನು ಆಟಿಕೆಗಳಿಗಿಂತ ಹೆಚ್ಚಾಗಿ ಬಳಸುತ್ತಿದೆ. ಕರೊನಾ, ಕೋವಿಡ್​ ಸಂಕ್ರಮಣ, ಏಕಾಂತ ವಾಸ್ತವ್ಯ, ಲಾಕ್​ಡೌನ್​, ಮನೆಯಿಂದಲೇ ಕೆಲಸಮಾಡುವ ದಿನಗಳಲ್ಲಂತೂ ಎಲೆಕ್ಟ್ರಾನಿಕ್​ ಉಪಕರಣಗಳ ಬಳಕೆ ಅತೀ ಅವಶ್ಯವಾಗಿದೆ. ಜೀವನದ ಅನಿವಾರ್ಯ ಅಂಗವಾಗಿದೆ.

ಸಂವಹನೆಗೆ ಮೊಬೈಲ್​&ಟ್ಯಾಬ್ಲೆಟ್​ಗಳಾದರೆ ಕೌಟುಂಬಿಕ ಸಾಮಾಜಿಕ ಮಾಧ್ಯಮವಾಗಿ ವಾಟ್ಸ್​ ಆ್ಯಪ್​ &ಇನ್​ಸ್ಟಾಗ್ರಾಮ್​&ೇಸ್​ಬುಕ್​ಗಳು, ಐಪಾಡ್​, ಕಂಪ್ಯೂಟರ್​ ಇಮೇಲ್​ಗಳು. ಆರೋಗ್ಯ ಶಿಕ್ಷಣ, ಸಂಶೋಧನೆ ದಾಖಲೆ ಪರಿಶೀಲನೆ ಹಾಗೂ ಸಂಗ್ರಹಕ್ಕೆ ಸಂಪರ್ಕ ಮಾಧ್ಯಮವಾಗಿ ಅಗತ್ಯವಾಗಿರುವುದು ಸಹ ಈ ಎಲೆಕ್ಟ್ರಾನಿಕ್​ ಸಾಧನಗಳೇ. ಎಲೆಕ್ಟ್ರಾನಿಕ್ಸ್​ ಹೆಲ್ತ್​ ರೆಕಾರ್ಡ್​ ಪ್ರಕಾರ ಒಬ್ಬ ಪ್ರತಿದಿನ ಕನಿಷ್ಠ ಆರುಗಂಟೆಗಳ ಸರಾಸರಿ ಸಮಯ ವಿವಿಧ ಡಿಜಿಟಲ್​ ಮಾಧ್ಯಮ ಉಪಕರಣಗಳೊಂದಿಗೆ ಸಹಯೋಗ ಸಂವಹನ ಕಾಲಕ್ಷೇಪ ನಡೆಸುತ್ತಾರೆ. ಇದರ ಪರಿಣಾಮವಾಗಿ ಟೆಕ್​ನೆಕ್​. ಕುತ್ತಿಗೆ ನೋವು ನರಸೆಳೆತ, ಭುಜಬಿಗಿತ, ಬೆನ್ನು ನೋವು, ನಿದ್ರಾಹಿನತೆ, ಒತ್ತಡ, ಉದ್ವೇಗ ಹೆಚ್ಚಲು ಕಾರಣವಾಗಿದೆ.

ಟೆಕ್​ನೆಕ್​ ಕಾರಣ ಹಾಗೂ ದುಷ್ಪರಿಣಾಮ: ತಲೆಯೆತ್ತಿ ನೇರವಾಗಿ ಕುಳಿತು ಎಷ್ಟೇ ಹೊತ್ತು ಕೆಲಸ ಮಾಡಿದರೂ ಕತ್ತಿನ ಹಿಂಭಾಗದ ಸ್ನಾಯುಗಳು ಸಹಜ, ವಿಶ್ರಾಂತ ಹಾಗೂ ಸಂಕುಚಿತ ಸ್ಥಿತಿಯಲ್ಲಿರುತ್ತವೆ. ಆದರೆ, ನಿರಂತರ ಕಂಪ್ಯೂಟರ್​ನಲ್ಲಿ ಕೆಲಸ ಮಾಡುವಾಗ, ಸ್ಮಾರ್ಟ್​ೋನ್​ ಬಳಸುತ್ತಿರುವಾಗ ತಲೆಕೆಳಗೆ ಬಾಗಿಸಿ ನೋಡುವಾಗ ಕುತ್ತಿಗೆಯ ಅಸ್ಥಿರಜ್ಜು& ಸ್ನಾಯುಗಳು ಸೆಳೆತಕ್ಕೆ ಒಳಗಾಗಿ ಕ್ರಮೇಣ "ಟೆಕ್​ನೆಕ್​' ಸಂಬಂಧಿ ಸಮಸ್ಯೆಗೆ ಕಾರಣವಾಗುವುದು.

ವೈಜ್ಞಾನಿಕ ಸಂಶೋಧನೆ ಪ್ರಕಾರ ವ್ಯಕ್ತಿಯ ತಲೆಯ ಸರಾಸರಿ ತೂಕ ಸುಮಾರು 10&12 ಪೌಂಡುಗಳು. ತಲೆ ಹದಿನೈದು ಕೋನ ಮುಂಬಾಗಿದರೆ ಗುರುತ್ವಾಕರ್ಷಣೆಗೆ ಒಳಗಾಗುವ ಕಾರಣ ಕುತ್ತಿಗೆಯ ಮೇಲೆ 27 ಪೌಂಡುಗಳ ಭಾರ ಬೀಳುವುದು. ಹಾಗೆಯೇ 30 ಕೋನಕ್ಕೆ 40 ಪೌಂಡು, 45 ಕೋನಕ್ಕೆ 49 ಪೌಂಡು, 60 ಕೋನಕ್ಕೆ 60 ಪೌಂಡುಗಳಷ್ಟು ಭಾರವನ್ನು ಕುತ್ತಿಗೆ ಸಹಿಸಬೇಕಾಗುವುದು.
ಪರಿಹಾರ: ತಲೆ ಕುತ್ತಿಗೆ&ಬೆನ್ನು ಸ್ಥಿರವಾಗಿರಲಿ. ಕುಳಿತುಕೊಳ್ಳುವ ಭಂಗಿ ನೇರವಾಗಿರಲಿ. ಕಂಪ್ಯೂಟರ್​ ಪರದೆ ಸ್ಮಾರ್ಟ್​ೋನ್​ ಬಳಸುವಾಗ ಕಣ್ಣಿನ ಮಟ್ಟದಲ್ಲಿ ಇರಿಸಿ. ಕುರ್ಚಿಯ ತಲೆಯಾಸರೆಯ ಸದುಪಯೋಗ ಪಡಿಸಿಕೊಳ್ಳಿ.

ಭುಜಂಗಾಸನ
ಭುಜಂಗ ಎಂದರೆ ಹೆಡೆಎತ್ತಿದ ಸರ್ಪ. ಈ ಆಸನವನ್ನು ನಾಲ್ಕು ಪ್ರಕಾರಗಳಲ್ಲಿ ಅಭ್ಯಾಸ ಮಾಡಬಹುದು.
ಪ್ರಕಾರ 1: ಉದ್ದಂಡ ಮಲಗಿಕೊಳ್ಳಿ. ಎರಡೂ ಕೈಗಳನ್ನು ಮಡಚಿ ಭುಜದ ಪಕ್ಕ ಹಸ್ತ ನೆಲಕ್ಕೆ ಮುಖವಾಗುವಂತೆ ಇರಿಸಿಕೊಳ್ಳೋಣ. ಕೈಗಳ ಮೇಲೆ ಭಾರವಿಲ್ಲದೆ, ಕೈಗಳನ್ನು ಮೇಲೆತ್ತದೆ, ಶ್ವಾಸ ತೆಗೆದುಕೊಳ್ಳುತ್ತಾ ತಲೆ, ಕುತ್ತಿಗೆ, ಎದೆಯ ಭಾಗವನ್ನು ನಾಭಿಯವರೆಗೆ ಮೇಲೆತ್ತುತ್ತಾ ಬರೋಣ. ಸೊಂಟದಿಂದ ಕೆಳಭಾಗಕ್ಕೆ ಚಲನೆಯಿಲ್ಲ. ಐದು ಬಾರಿ ದೀರ್ ಶ್ವಾಸೋಚ್ಛಾ$ ್ವಸ ನಡೆಸೋಣ.

ಪ್ರಕಾರ 2: ಕೈಗಳನ್ನು ಭುಜದ ಸ್ವಲ್ಪ ಕೆಳಗೆ, ಹೊಟ್ಟೆಯಿಂದ ತುಸು ದೂರ ಇಟ್ಟು ಶ್ವಾಸ ತೆಗೆದುಕೊಳ್ಳುತ್ತಾ, ಇಡೀ ಹಸ್ತದ ಮೇಲೆ ಕೈಗಳ ಮೇಲೆ ಭಾರ ಹಾಕುತ್ತಾ ತಲೆ, ಕುತ್ತಿಗೆ, ಎದೆಯ ಭಾಗವನ್ನು ಮೇಲೆತ್ತುತ್ತಾ ಬರೋಣ. ಎದೆಯನ್ನು ವಿಸ್ತಾರಮಾಡಿ ಕುತ್ತಿಗೆಯನ್ನು ಹಿಂದಕ್ಕೆ ಚಾಚೋಣ, ಶ್ವಾಸ ಬಿಡುತ್ತಾ, ಇಳಿಸುತ್ತಾ ಬರೋಣ.

ಪ್ರಕಾರ 3: ಕೈಗಳನ್ನು ಬೆನ್ನಹಿಂದೆ ಕಟ್ಟಿ ಮುಷ್ಠಿಯಿಂದ ಬೆನ್ನನ್ನು ಒತ್ತುತ್ತಾ, ತಲೆ ಕುತ್ತಿಗೆ, ಎದೆಯ ಭಾಗವನ್ನು ಮೇಲೆತ್ತುತ್ತಾ ಬರೋಣ, ಶ್ವಾಸ ಬಿಡುತ್ತಾ ಹಿಂದಕ್ಕೆ.

ಪ್ರಕಾರ 4:ಶ್ವಾಸ ತೆಗೆದುಕೊಳ್ಳುತ್ತಾ, ತಲೆ ಕುತ್ತಿಗೆ ಎದೆಯ ಜತೆಗೆ ಎರಡೂ ಕೈಗಳನ್ನು ಮೇಲೆತ್ತುತ್ತೇವೆ, ಬೆನ್ನನ್ನು ಕಮಾನಿನ ರೀತಿಯಲ್ಲಿ ಹಿಂದೆ ಬಾಗಿಸುತ್ತೇವೆ. ಶ್ವಾಸ ಬಿಡುತ್ತಾ ಕೆಳಗೆ ಬರುತ್ತೇವೆ.

ಲಾಭಗಳು: ಟೆಕ್​ನೆಕ್​ ನೋವಿನ ನಿವಾರಣೆಗೆ ಪೂರಕ. ಬೆನ್ನು ಮೂಳೆಯ ಭಾಗದ ಸ್ಥಿತಿಸ್ಥಾಪಕ ಗುಣವನ್ನು ವರ್ಧಿಸುತ್ತದೆ. ಕುತ್ತಿಗೆ, ಎದೆಯ ಭಾಗ ವಿಸ್ತಾರಗೊಳ್ಳುವುದರಿಂದ ಥೈರಾಯಿಡ್​ ಗ್ರಂಥಿಗಳ ಸಮರ್ಪಕ ಕಾರ್ಯ ನಿರ್ವಹಣೆ. ಅಸ್ತಮಾ ಉಬ್ಬಸ ಉಸಿರಾಟ ತೊಂದರೆಗಳ ನಿವಾರಣೆಯಾಗುತ್ತದೆ. ಹೊಟ್ಟೆಯ ಭಾಗದ ಕೊಬ್ಬು ಕರಗಲು ಮಧುಮೇಹ ನಿಯಂತ್ರಣಕ್ಕೆ ಸಹಕಾರಿ.

(ಪ್ರತಿಕ್ರಿಯಿಸಿ: vvsudina@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net