ಮಕ್ಕಳಿಗೆ ಮಾಡಿ ಕೊಡಿ ರುಚಿಯಾದ ವೆಜ್ ಪ್ಯಾನ್‌ಕೇಕ್‌

pancake
Published on

ಬೆಂಗಳೂರು: ಮಕ್ಕಳು ಸಾಮಾನ್ಯವಾಗಿ ಏನಾದರೂ ಹೊಸ ತಿಂಡಿ ತಿನ್ನಲು ಇಷ್ಟಪಡುತ್ತಾರೆ. ಆಗ ಮಕ್ಕಳಿಗೆ ಎಂಥಹ ತಿಂಡಿ ಮಾಡಿಕೊಡಬೇಕು ಎಂದು ಪ್ರತಿಯೊಬ್ಬ ತಾಯಿಯೂ ಯೋಚಿಸುತ್ತಿರುತ್ತಾರೆ. ಒಂದು ವೇಳೆ ನಿಮ್ಮ ಮಕ್ಕಳಿಗೆ ವಿಭಿನ್ನವಾದ ಮತ್ತು ಆರೋಗ್ಯಕರವಾದ ರೆಸಿಪಿ ಮಾಡಿಕೊಡಲು ಬಯಸಿದರೆ, ಟೇಸ್ಟಿ ಪ್ಯಾನ್‌ಕೇಕ್‌ಗಳನ್ನು ಮಾಡಬಹುದು. ಇದು ತಯಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಇದನ್ನು ಬೆಳಗ್ಗೆ ಮತ್ತು ಸಂಜೆ ಎರಡೂ ಸಮಯದಲ್ಲಿ ಉಪಹಾರವಾಗಿ ಸೇವಿಸುವುದು ಒಳ್ಳೆಯದು. ಅಲ್ಲದೆ, ನೀವು ಇದನ್ನು ಟಿಫಿನ್​​​ಗೂ ಮಾಡಬಹುದು. ಹಾಗಾದರೆ ರುಚಿಕರವಾದ ಪ್ಯಾನ್‌ಕೇಕ್‌ ಹೇಗೆ ಮಾಡಬೇಕೆಂದು ತಿಳಿಯೋಣ ಬನ್ನಿ...

ಬೇಕಾಗುವ ಪದಾರ್ಥಗಳು
- 1 ಕಪ್ ಕಡಲೆ ಹಿಟ್ಟು
- ಅರ್ಧ ಕಪ್ ರವೆ
- 2 ತುರಿದ ಕ್ಯಾರೆಟ್
- 1 ಸಣ್ಣದಾಗಿ ಹೆಚ್ಚಿದ ಈರುಳ್ಳಿ
- ನುಣ್ಣಗೆ ಕತ್ತರಿಸಿದ ಎಲೆಕೋಸು
- ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು
-ಪುದೀನಾ ಎಲೆಗಳು
-2-3 ಸಣ್ಣದಾಗಿ ಹೆಚ್ಚಿದ ಹಸಿರು ಮೆಣಸಿನಕಾಯಿ
- 1 ಚಮಚ ಕಾರದಪುಡಿ
- ಕರಿ ಮೆಣಸು
- ಅರ್ಧ ಚಮಚ ಕೇರಂ ಬೀಜಗಳು
- ಒಂದು ಚಿಟಿಕೆ ಇಂಗು
- ರುಚಿಗೆ ತಕ್ಕಂತೆ ಉಪ್ಪು

ಮಾಡುವುದು ಹೇಗೆ?
ಮೇಲೆ ಹೇಳಿದ ಅಥವಾ ನಿಮಗಿಷ್ಟವಾದ ತರಕಾರಿಗಳನ್ನು ನೀವು ನುಣ್ಣಗೆ ಕತ್ತರಿಸಿಟ್ಟುಕೊಳ್ಳಿ. ನಂತರ ಕಡಲೆ ಹಿಟ್ಟು ಮತ್ತು ರವೆ ಮಿಶ್ರಣವನ್ನು ನೀರಿನಲ್ಲಿ ಕಲಸಿಟ್ಟುಕೊಳ್ಳಿ. ಆದರೆ ಈ ಮಿಶ್ರಣ ಥಿಕ್ ಆಗಿರಲಿ. ರುಚಿಗೆ ತಕ್ಕಂತೆ ಉಪ್ಪು, ಪುಡಿಮಾಡಿದ ಕರಿಮೆಣಸು, ಕೇರಂ ಬೀಜಗಳು ಮತ್ತು ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿಗಳನ್ನು ಸೇರಿಸಿ. ಕೊನೆಯಲ್ಲಿ ನುಣ್ಣಗೆ ಕತ್ತರಿಸಿಕೊಂಡ ತರಕಾರಿ ಹಾಗೂ ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ಕೆಲವು ಪುದೀನ ಎಲೆಗಳನ್ನು ಸೇರಿಸಿ, ಕೈಯಿಂದ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವನ್ನು ದಪ್ಪಗಿರುವಂತೆ ನೋಡಿಕೊಳ್ಳಿ. ಗ್ರಿಲ್ ಬಿಸಿ ಮಾಡಿ ಚಿತ್ರದಲ್ಲಿ ತೋರಿಸಿರುವಂತೆ ಸಮತಟ್ಟಾದ ಆಕಾರದಲ್ಲಿ ಮಿಶ್ರಣವನ್ನು ಒತ್ತಿ, ಎಣ್ಣೆಯನ್ನು ಹಚ್ಚಿ ಎರಡೂ ಕಡೆಯಿಂದ ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ. ಕೆಚಪ್ ಅಥವಾ ಹಸಿರು ಚಟ್ನಿಯೊಂದಿಗೆ ಬಿಸಿ ಬಿಸಿಯಾಗಿ ಸೇವಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net