

ನಾಲ್ಕು ಚಮಚ ಕೊತ್ತಂಬರಿ ಬೀಜವನ್ನು ಕುಟ್ಟಿ ಪುಡಿ ಮಾಡಿ ಒಂದು ಲೋಟ ನೀರಿಗೆ ಹಾಕಿ ಕಷಾಯ ತಯಾರಿಸಿ ಹಾಲು ಬೆಲ್ಲ ಬೆರೆಸಿ ಕುಡಿದರೆ ಆಸಿಡಿಟಿ ನಿವಾರಣೆಯಾಗುತ್ತದೆ.
ಹತ್ತು ಗ್ರಾಂ ಕೊತ್ತಂಬರಿ ಬೀಜವನ್ನು ಕುಟ್ಟಿ ಅರ್ಧ ಲೀಟರ್ ನೀರಿನಲ್ಲಿ ಹಾಕಿ ಕುದಿಸಿ ತಣ್ಣಗಾದ ಮೇಲೆ ಶೋಧಿಸಿ ಅದರಿಂದ ಬಾಯಿ ಮುಕ್ಕಳಿಸಿದರೆ ಬಾಯಿಹುಣ್ಣು ವಾಸಿಯಾಗುತ್ತದೆ.
ಕೊತ್ತಂಬರಿ ಬೀಜ ಮತ್ತು ಒಣಶುಂಠಿ ಎರಡನ್ನೂ ಐದು ಗ್ರಾಂನಷ್ಟು ತೆಗೆದುಕೊಂಡು ಕುಟ್ಟಿ ಪುಡಿ ಮಾಡಿ, ನಾಲ್ಉಕ ಲೋಟ ನೀರಿನಲ್ಇ ಹಾಕಿ ಸಣ್ಣ ಉರಿಸಯಲ್ಲಿ ಕುದಿಸಿ, ಒಂದು ಲೋಟದಷ್ಟಾದಾಗ ಇಳಿಸಿ ಶೋಧಿಸಿ ಅರ್ಧ ಲೋಟ ಹಾಲಿನಲ್ಲಿ ಹಾಕಿಕೊಂಡು ಎರಡು ವಾರಗಳ ಕಾಲ ರಾತ್ರಿ ಹೊತ್ತು ಕುಡಿದರೆ ಕೀಲುನೋವು ಗುಣವಾಗುತ್ತದೆ.
ಇಪ್ಪತ್ತು ಗ್ರಾಮ ಕೊತ್ತಂಬರಿ ಬೀಜವನ್ನು ಪುಡಿ ಮಾಡಿ ನಾಲ್ಕು ಲೋಟ ನೀರಿನಲ್ಲಿ ಹಾಕಿ ಕುದಿಸಿ, ಒಂದು ಲೋಟದಷ್ಟದಾಗ ಇಳಿಸಿ ಶೋಧಿಸಿ ಹಾಲು ಸಕ್ಕರೆ ಸೇರಿಸಿ ದಿನಕ್ಕೆ ಎರಡು ಬಾರಿ ಕುಡಿದರೆ ಮೂಲವ್ಯಾಧಿ ನಿವಾರಣೆಯಾಗುತ್ತದೆ.
ಸಕ್ಕರೆ ಬೆರೆಸಿದ ಕೊತ್ತಂಬರಿ ಬೀಜದ ಕಷಾಯ ಸೇವಿಸುವುದರಿಂದ ಪಿತ್ತ ಶಮನವಾಗುತ್ತದೆ.
ಒಂದು ಚಮಚ ಕೊತ್ತಂಬರಿ ಬೀಜದ ಪುಡಿಯನ್ನು ನೀರಿನಲ್ಲಿ ಕದಡಿ ಸಕ್ಕರೆ ಸೇರಿಸಿ ಸೇವಿಸುವುದರಿಂದ ಗರ್ಭಿಣಿಯಲ್ಲಿ ಉಂಟಾಗುವ ವಾಕರಿಕೆ, ವಾಂತಿ ಉಪಶಮನ ಆಗುವುದು.
ಕೊತ್ತಂಬರಿ ಬೀಜದ ಚೂರ್ಣವನ್ನು ಜೇನುತುಪ್ಪದಲ್ಲಿ ಕಲಸಿ ನಾಲಿಗೆಯ ಮೇಲೆ ಹಚ್ಚಿ ಚಪ್ಪರಿಸುತ್ತಿದ್ದರೆ ಬಾಯಿಹುಣ್ಣು ವಾಸಿಯಾಗುವುದು.
ಕೊತ್ತಂಬರಿ ಮತ್ತು ಜೀರಿಗೆ ಪುಡಿಯನ್ನು ಸಮಪ್ರಮಾಣದಲ್ಲಿ ಮಿಶ್ರ ಮಾಡಿ ಕಷಾಯ ತಯಾರಿಸಿ ಅದಕ್ಕೆ ಸಕ್ಕರೆ ಸೇರಿಸಿ ಸೇವಿಸುವುದರಿಂದ ಪಚನ ಕ್ರಿಯೆ ಸುಲಭವಾಗು ಆಗುವುದು.
ಒಂದು ಬಟ್ಟಲು ಎಳನೀರಿಗೆ ಸ್ವಲ್ಪ ಬೆಲ್ಲ ಮತ್ತು ಅರ್ಧ ಚಮಚ ಕೊತ್ತಂಬರಿ ಬೀಜದ ಚೂರ್ಣ ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸಿದರೆ ಉರಿಮೂತ್ರ ಗುಣವಾಗುವುದು.
ಸುಧಾ ಎಚ್.ಎಸ್