ರಂಗು-ರಂಗಿನ ಬಣ್ಣಗಳಿಂದ ಚರ್ಮ, ಕೂದಲಿನ ಹಾನಿ ತಡೆಯಲು ಈ ಎರಡು ವಸ್ತು ಬಳಸಿ; ಕಲರ್​ಫುಲ್​ ಓಕುಳಿಯಲ್ಲಿ ಮಿಂದೇಳಿ! | Celebrate Holi

dk - 2025-03-09T194155.862
Published on

Celebrate Holi: ಇದೇ ಮಾ.14ರಂದು ಹೋಳಿ ಹಬ್ಬ ಆಚರಣೆ ಆರಂಭವಾಗಲಿದೆ. ಈ ಹಬ್ಬಕ್ಕೆ ಬಣ್ಣ ಎರಚಲು ಯುವಕರು, ಯುವತಿಯರು ಸೇರಿದಂತೆ ಎಲ್ಲ ವರ್ಗದ ಜನರು ಹಬ್ಬವನ್ನು ಸಂಭ್ರಮಿಸಲು ಸಜ್ಜುಗೊಳ್ಳುತ್ತಿದ್ದಾರೆ. ಅಲ್ಲದೆ, ಬಾಲೂನ್​ ಗನ್​ಗಳು ಮತ್ತು ಬಣ್ಣಗಳ ಓಕಳಿ ಆಡಲು ದೇಶಾದ್ಯಂತ ಉತ್ಸಕತೆಯಿಂದ ಎದುರು ನೋಡುತ್ತಿದ್ದಾರೆ.

ಈ ಹಬ್ಬದ ಮೋಜಿನಲ್ಲಿ ನಾವು ನಮ್ಮ ಚರ್ಮದ ಮತ್ತು ಕೂದಲಿನ ಹಾರೈಕೆ ಬಗ್ಗೆ ಮರೆತು ಬೀಡುತ್ತೇವೆ. ಇದು ನಮ್ಮ ಚರ್ಮ ಹಾಗೂ ಕೂದಲಿನ ಆರೋಗ್ಯದ ಮೇಲೆ ಹಾನಿಯುಂಟು ಮಾಡಬಹುದು. ಹೀಗಾಗಿ, ಮುಂಚಿತವಾಗಿ ಕೆಲ ವಸ್ತುಗಳನ್ನು ಬಳಸುವುದರಿಂದ ಇದರಿಂದ ತಪ್ಪಿಸಿಕೊಳ್ಳಬಹುದು.

ಹೌದು, ನಾವು ಎರಚುವ ಬಣ್ಣಗಳಲ್ಲಿ ಬಹುತೇಕವಾಗಿ ರಾಸಾಯನಿಕ ಅಂಶಗಳು ಹೊಂದಿರುತ್ತದೆ. ಹೀಗಾಗಿ, ಬಣ್ಣಗಳಲ್ಲಿ ಮುಳುಗೆದ್ದ ಬಳಿಕ, ಚರ್ಮ ಮತ್ತು ಕೂದಲನ್ನು ಅವುಗಳ ಮೂಲ ಸ್ಥಿತಿಗೆ ಮರಳಿ ತರಲು ವಾರಗಳು ಮತ್ತು ಕೆಲವೊಮ್ಮೆ ತಿಂಗಳುಗಳು ಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ತೆಂಗಿನ ಎಣ್ಣೆ ಮತ್ತು ಸನ್‌ಸ್ಕ್ರೀನ್ ಉಪಯುಕ್ತವಾಗಬಹುದು. ಹೋಳಿ ಆಡಲು ತಯಾರಿ ನಡೆಸುವಾಗ ಈ ಎರಡೂ ವಸ್ತುಗಳನ್ನು ಬಳಸುವುದರಿಂದ ಚರ್ಮವನ್ನು ಹಾನಿಯಿಂದ ರಕ್ಷಿಸಬಹುದು ಮತ್ತು ಬಣ್ಣವನ್ನು ತ್ವರಿತವಾಗಿ ತೆಗೆದುಹಾಕಲು ಸಹಾಯ ಮಾಡುತ್ತದೆ ಎಂದು ಚರ್ಮರೋಗ ತಜ್ಞರು ಶಿಫಾರಸು ಮಾಡುತ್ತಾರೆ.

ತೆಂಗಿನ ಎಣ್ಣೆ

ತೆಂಗಿನ ಎಣ್ಣೆ ಕಲೆ ಮತ್ತು ಮೊಂಡುತನದ ಬಣ್ಣಗಳನ್ನು ತೆಗೆದುಹಾಕುವಲ್ಲಿ ಪರಿಣಾಕಾರಿಯಾಗಿದೆ. ಹೋಳಿ ಆಡುವ ಮೊದಲು ಅದನ್ನು ಮುಖಕ್ಕೆ ಮತ್ತು ಕೈ-ಕಾಲುಗಳಿಗೆ ಲಘುವಾಗಿ ಮಸ್ಸಾಜ್​ ಮಾಡಬೇಕು. ಇದರಿಂದ ಬಣ್ಣ ಸುಲಭವಾಗಿ ಮಾಯವಾಗುತ್ತದೆ. ಅಲ್ಲದೆ, ಈ ಎಣ್ಣೆಯನ್ನು ಕೂದಲಿಗೆ ಚೆನ್ನಾಗಿ ಹಚ್ಚಬೇಕು. ಇದರಿಂದ ಚರ್ಮಕ್ಕೆ ಮತ್ತು ಕೂದಲಿಗೆ ಬಣ್ಣದ ಹಾನಿಕಾರಕ ರಾಸಾಯನಿಕ ಅಂಶಗಳು ಚರ್ಮ ಮತ್ತು ಕೂದಲಿನ ಒಳಗೆ ಹೊಕ್ಕುವುದನ್ನು ತಡೆಯುತ್ತದೆ. ಅಲ್ಲದೆ, ಹೋಳಿ ಆಡಿದ ಬಳಿಕ ಬಣ್ಣವನ್ನು ಕ್ಲೀನ್​ ಮಾಡಿಕೊಳ್ಳುವುದು ಸುಲಭ.

ಸನ್‌ಸ್ಕ್ರೀನ್

ಸಾಮಾನ್ಯ ದಿನಗಳಲ್ಲಿ, ಹೆಚ್ಚಿನ ಜನರು ಸೂರ್ಯನಿಂದ ಉಂಟಾಗುವ ಹಾನಿಯನ್ನು ತಪ್ಪಿಸಲು ಸನ್‌ಸ್ಕ್ರೀನ್ ಅನ್ನು ಹೆಚ್ಚಿನ ಜನರು ಬಳಸುತ್ತಾರೆ. ಹೋಳಿ ಆಡುವ ಸುಮಾರು 20 ನಿಮಿಷಗಳ ಮೊದಲು ಸನ್‌ಸ್ಕ್ರೀನ್ ಹಚ್ಚುವುದರಿಂದ ಚರ್ಮವು ಹೆಚ್ಚಿನ ಪ್ರಮಾಣದಲ್ಲಿ ರಕ್ಷಿಸಲ್ಪಡುತ್ತದೆ. ಹೀಗಾಗಿ, ತಜ್ಞರು ಹೋಳಿ ಆಡುವ ಮೊದಲು ಇದನ್ನು ಹಚ್ಚಲು ಶಿಫಾರಸು ಮಾಡುತ್ತಾರೆ.(ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net