ವಿಶ್ವದಲ್ಲೇ ಅತಿ ಹೆಚ್ಚು ಯುಟಿಐ ಪ್ರಕರಣಗಳು ಭಾರತದಲ್ಲಿ ದಾಖಲಾಗುತ್ತಿವೆ. ಇಲ್ಲಿ ಆತಂಕಕಾರಿ ವಿಷಯವೆಂದರೆ, ಈ ಸೋಂಕುಗಳ ಬಲಿಪಶುಗಳು ಹೆಚ್ಚಾಗಿ ನಗರ ಪ್ರದೇಶದ ಸುಶಿಕ್ಷಿತ, ಐಟಿ-ಬಿಟಿ ಮತ್ತು ವಿವಿಧ ವಲಯಗಳಲ್ಲಿ ದುಡಿಯುವ ಯುವ ಮಹಿಳೆಯರೇ ಆಗಿದ್ದಾರೆ. ಇವರು ಸಾಮಾನ್ಯವಾಗಿ ತಮ್ಮ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಬಹಳ ಜಾಗೃತರಾಗಿರುತ್ತಾರೆ, ಆದಾಗ್ಯೂ ಇವರಲ್ಲೇ ಈ ಸೋಂಕುಗಳು ಮರುಕಳಿಸುತ್ತಿವೆ. ಹಾಗಿದ್ದರೆ, ಸೋಂಕು ಹೆಚ್ಚಾಗಲು ಕಾರಣವೇನು ಎಂದು ನೋಡೋಣ ಬನ್ನಿ...