ಎಷ್ಟೇ ಓದಿದ್ರು ಒಂದು ಅಕ್ಷರವೂ ತಲೆಗೆ ಹೋಗ್ತಿಲ್ವಾ?; ಇಂದಿನಿಂದಲೇ ಇದನ್ನು ಅಭ್ಯಾಸ ಮಾಡಿಕೊಳ್ಳಿ..Typing VS Handwriting

Typing VS Handwriting
Typing VS Handwriting
Published on

ಪ್ರಮುಖ ಮುಖ್ಯಾಂಶಗಳು

  • ಬರೆಯುವಾಗ ನಾನಾ ವಿಧದಲ್ಲಿ ಕೈ ಬೆರಳು ಚಲಿಸುವುದು ಮೆದುಳನ್ನು ಕ್ರಿಯಾಶೀಲತೆಯಿಂದ ಇರಿಸುತ್ತದೆ
  • ಕೀ ಬೋರ್ಡ್​​ ಒತ್ತಿ ಟೈಪ್ ಮಾಡುವುದರಿಂದ ಮೆದುಳಿಗೆ ಸಿಗುವ ಪ್ರಚೋದನೆ ತೀರಾ ಕಡಿಮೆ
  • ಕಲಿಕೆ ಮತ್ತು ಉತ್ತಮ ಜ್ಞಾಪಕ ಶಕ್ತಿಗಾಗಿ ವಿದ್ಯಾರ್ಥಿಗಳಿಗೆ ಟೈಪಿಂಗ್​ಗಿಂತ, ಕೈ ಬರಹ ಉತ್ತಮ ಎನ್ನುತ್ತಾರೆ ತಜ್ಞರು
Typing VS Handwriting: ಇದು ಸ್ಮಾರ್ಟ್​ಫೋನ್​, ಎಐ, ಟಚ್​ ಸ್ಕ್ರೀನ್​, ಟ್ಯಾಬ್​​ ಹಾಗೂ ಲ್ಯಾಪ್​ಟಾಪ್​ ಸೇರಿಂದತೆ ನಾನಾ ಎಲೆಕ್ಟ್ರಿಕ್ ಸಾಧನಗಳು ಬಂದು ಬರವಣಿಗೆಗಿಂತ ಎಲ್ಲವೂ ಟೈಪಿಂಗ್​​ನಲ್ಲೇ ವಿಷಯ ಮುಟ್ಟಿಸಲಾಗುತ್ತದೆ. ಹೀಗಾಗಿ ಬರುಬರುತ್ತಾ ಕೈ ಬರಹ ಕಡಿಮೆಯಾಗುತ್ತಿದೆ. ಇದು ಅಭಿವೃದ್ಧಿ ಒಂದು ಭಾಗ ಎಂದು ಹೇಳಬಹುದು. ಆದರೆ ನಿಜವಾಗಿಯೂ ಬರವಣಿಗೆ ನಿಮ್ಮ ಮೆದುಳಿಗೆ ಕಲಿಯಲು ಸಹಾಯ ಮಾಡಿದಷ್ಟು ಮತ್ಯಾರು ಮಾಡೋದೆ ಇಲ್ಲ. ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸಲು ಬರವಣಿಗೆ ಸಹಾಯ ಮಾಡುತ್ತದೆ ಎನ್ನುತ್ತಾರೆ ತಜ್ಞರು.
ಟೈಪಿಂಗ್​ ಮತ್ತು ಬರವಣಿಗೆಗೆ ಇರುವ ವ್ಯತ್ಯಾಸವೇನು, ಬೆಳೆಯುವ ಮಕ್ಕಳಿಗೆ ಹಿರಿಯರಿಗೆ ಇದೆಷ್ಟು ಸಹಕಾರಿ ಎನ್ನುವುದನ್ನು ತಿಳಿದುಕೊಳ್ಳೋಣ
ಕೀ ಬೋರ್ಡ್​, ಟಚ್​ ಸ್ಕ್ರೀನ್​ ಬಳಕೆ ಮಾಡಿ ಟೈಪ್​ ಮಾಡುವುದಕ್ಕಿಂತ..ಈ ಹಿಂದೆಯಿದ್ದ ವಾಡಿಕೆಯಾದ ಬರವಣಿಗೆ ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಮನಷ್ಯನ ನೆನಪಿನ ಶಕ್ತಿ, ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ವೈಜ್ಞಾನಿಕ ಅಧ್ಯಯನವೊಂದರಿಂದ ತಿಳಿದುಬಂದಿದೆ.

ಅಧ್ಯಯನಗಳು ಏನನ್ನು ಹೇಳುತ್ತದೆ?

ನಾರ್ವೇಜಿಯನ್ ನರವಿಜ್ಞಾನಿ ಆಡ್ರೆ ಎಲ್.ಎಚ್. ​​ವ್ಯಾನ್ ಡೆರ್ ಮೀರ್ ಅವರು 2024ರಲ್ಲಿ ಬರೆದ ಪ್ರಬಂಧದ ಪ್ರಕಾರ ಕೀಬೋರ್ಡ್​ ಹಿಡಿದು ಟೈಪ್​ ಮಾಡುವುದಕ್ಕಿಂತ ಕೈಬರಹವು ಮೆದುಳನ್ನು ಹೆಚ್ಚು ಸಕ್ರಿಯಗೊಳಿಸುತ್ತದೆ ಎನ್ನುವುದನ್ನು ಉಲ್ಲೇಖಿಸಿದ್ದರು. ಮೆದುಳಿನ ಸ್ಮರಣಶಕ್ತಿ, ಕಲಿಕೆ, ಹೊಸ ಮಾಹಿತಿಯನ್ನು ಕಲೆ ಹಾಕುವ ವಿಧಾನವು ಇದಕ್ಕೆ ಸಂಬಂಧಿಸುತ್ತದೆ ಎಂದು ಫ್ರಾಂಟಿಯರ್ಸ್ ಇನ್ ಸೈಕಾಲಜಿಯಲ್ಲಿ ಪ್ರಕಟವಾದ ಅಧ್ಯಯನವೊಂದು ಈ ವಿಚಾರವನ್ನು ಉಲ್ಲೇಖಿಸುತ್ತದೆ.
36 ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಬಳಸಿಕೊಂಡು ಅವರು ಟೈಪ್​ ಮಾಡುವಾಗ, ಬರೆಯುವಾಗ ಮೆದುಳಿನಲ್ಲಿ ಉಂಟಾಗುವ ಬದಲಾವಣೆಯನ್ನು ಹೈ-ಡೆನ್ಸಿಟಿ ಇಇಜಿ ಸಾಧನಗಳನ್ನು ಅಳವಡಿಸಿ ಮಾಹಿತಿ ದಾಖಲಿಸಿಕೊಂಡು ಮಾಹಿತಿಯನ್ನು ಕಲೆ ಹಾಕಲಾಗಿತ್ತು.

ಬರೆಯುವುದರಿಂದಾಗುವ ಪ್ರಯೋಜನವೇನು?

ಅಧ್ಯಯನದ ಫಲಿತಾಂಶವನ್ನು ಕಲೆ ಹಾಕಿದಾಗ ಅದರ ಪ್ರಕಾರ, ಪೆನ್​ ಬಳಕೆ ಮಾಡಿ ಬರೆಯುವಾಗ ಮೆದುಳಿನ ಪ್ಯಾರಿಯಲ್​ ಮತ್ತು ಕೇಂದ್ರ ಭಾಗಗಳು ದೃಶ್ಯ, ಸಂವೇದನಾ ಮತ್ತು ಚಲನಶೀಲ ನಿಯಂತ್ರಣಕ್ಕೆ ಸಂಬಂಧಿಸಿದ ಭಾಗಗಳ ನಡುವೆ ಸಂವಹನವಿತ್ತು. ಅಕ್ಷರವನ್ನು ಬರೆಯುವಾಗ ಕೈ ಬೆರಳು ನಾನಾ ರೀತಿಯಲ್ಲಿ ಚಲಿಸುತ್ತದೆ. ಈ ಕಾರಣದಿಂದಾಗಿ ಮೆದುಳಿಗೆ ಹೆಚ್ಚಿನ ಪ್ರಚೋದನೆಯನ್ನು ನೀಡುತ್ತದೆ, ಇದರಿಂದಾಗಿ ಕಲಿತ ವಿಷಯಗಳು ಮನಸ್ಸಿನಲ್ಲಿ ದೀರ್ಘಕಾಲ ಉಳಿಯಲು ಸಾಧ್ಯವಾಗುತ್ತದೆ.

ಟೈಪಿಂಗ್​ನಿಂದ ಬೀರುವ ಪರಿಣಾಮ

ಟೈಪಿಂಗ್​ ಮಾಡುವ ಸಂದರ್ಭದಲ್ಲಿ ಒಂದೇ ಕೀಲಿಯ ಮೇಲೆ ಕೈ ಬೆರಳನ್ನು ಇಟ್ಟು ಟೈಪ್​ ಮಾಡುವುದು ತೀರಾ ಸರಳ ಪ್ರತಿ ಬಾರಿಯು ಕೀಲಿಯ ಮೇಲಿನ ಅಕ್ಷರಗಳನ್ನು ಒತ್ತಿ ಕೈ ಚಲಿಸುತ್ತದೆ ಅಷ್ಟೇ. ಇದು ಮೆದುಳಿಗೆ ವಿಶೇಷವಾದ ಸವಾಲನ್ನು ನೀಡೋದಿಲ್ಲ. ಯಾವುದೇ ರೀತಿಯ ಪ್ರಚೋದನೆಯೂ ಕೊಡೋದಿಲ್ಲ. ಕೈಯಾರೆ ಬರೆದು ವಿಚಾರಗಳು ನಿಮ್ಮ ಮನಸ್ಸಿನಲ್ಲಿ ಹಾಗೆಯೇ ಉಳಿಯುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ಡಿಜಿಟಲ್​ ಸಾಧನೆಗಳು ಅಭಿವೃದ್ಧಿಯನ್ನು ಉಲ್ಲೇಖಿಸುತ್ತದೆ. ಅಲ್ಲದೆ ಬೇಕಾದದನ್ನು ಶೀಘ್ರವಾಗಿ ನೀಡಲು ಸಹಾಯ ಮಾಡುತ್ತದೆ, ಆದರೆ, ಲಿಕೆಯ ಗುಣಮಟ್ಟ ಸರಿಯಾಗ ಬೇಕಾದರೆ, ಬರೆದ ವಿಚಾರವು ತಲೆಯಲ್ಲಿ ಉಳಿಯ ಬೇಕು ಎಂದರೆ, ಟೈಪಿಂಗ್ ಮಾಡೋದನ್ನು ಬಿಟ್ಟು ಕೈಯಲ್ಲಿ ಬರೆಯುವುದನ್ನು ಶುರು ಮಾಡಬೇಕು. ಇದು ಗ್ರಹಿಕಾ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ ಎನ್ನುತ್ತಾರೆ ತಜ್ಞರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net