

ಬೆಂಗಳೂರು:ವಾತಾವರಣದ ಕಾರಣದಿಂದಾಗಿ ಕೆಮ್ಮು, ಜ್ವರ, ನೆಗಡಿ ಕಾಣಿಸಿಕೊಳ್ಳುತ್ತವೆ. ಋತು ಬದಲಾದಾಗ ಜ್ವರ ಮತ್ತು ಶೀತಗಳು ಸಾಮಾನ್ಯವಾಗಿದೆ. ಶೀತ ಗಾಳಿಯಿಂದಾಗಿ ಒಣ ಕೆಮ್ಮು ಮತ್ತು ಶೀತವು ಕಿರಿಕಿರಿಯುಂಟುಮಾಡುತ್ತದೆ. ಸಮಯಕ್ಕೆ ಶೀತವನ್ನು ತಡೆಗಟ್ಟಲು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಕೆಮ್ಮು ಮತ್ತು ನೆಗಡಿಗೆ ವೈದ್ಯರ ಬಳಿ ಹೋಗುವ ಮೊದಲು ಮನೆಯಲ್ಲಿರುವ ಕೆಲವು ವಸ್ತುಗಳನ್ನು ಬಳಸಿಕೊಂಡು ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
1) ಅರಿಶಿನ ಬೆರೆಸಿದ ಹಾಲನ್ನು ದಿನವೂ ಕುಡಿಯಬೇಕು. ರಾತ್ರಿ ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ಅರಿಶಿನ ಹಾಲನ್ನು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
2) ಒಂದು ಲೋಟ ನೀರನ್ನು ಚೆನ್ನಾಗಿ ಕುದಿಸಿ, ಅದಕ್ಕೆ ಚಹಾ ಪುಡಿಯನ್ನು ಸೇರಿಸಿ. ನಂತರ ಸೋಸಿಕೊಂಡು, ಜೇನುತುಪ್ಪವನ್ನು ಮಿಶ್ರಣ ಮಾಡಿ ಕುಡಿಯಿರಿ. ಕೆಮ್ಮು ಶಮವಾಗುತ್ತದೆ.
3) ಒಂದು ಲೋಟ ನೀರಿಗೆ ತಾಜಾ ಶುಂಠಿಯ ಚೂರುಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಜೇನುತುಪ್ಪವನ್ನು ನೀವು ಸೇರಿಸಿ ಕುಡಿಯಬಹುದು. ಕೆಮ್ಮನ್ನು ತಕ್ಷಣ ಹೊಡೆದೋಡಿಸಲು ಸಹಾಯ ಮಾಡುತ್ತದೆ.
4) ಉಪ್ಪು ನೀರಿಗೆ ಸ್ವಲ್ಪ ಅರಿಶಿಣವನ್ನು ಮಿಶ್ರಣ ಮಾಡಿ ಮುಕ್ಕಳಿಸುವುದರಿಂದ ಗಂಟಲಿನಲ್ಲಿರುವ ಕಫ ಕಡಿಮೆ ಮಾಡುತ್ತದೆ.
5) ಒಂದು ಲೋಟ ನೀರಿಗೆ ಚಹಾ ಪುಡಿ, ಒಂದು ಚಿಟಿಕೆ ದಾಲ್ಚಿನ್ನಿ ಪುಡಿ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಜೇನುತುಪ್ಪ ಸೇರಿಸಿ ಕುಡಿದರೆ ಇದು ನೆಗಡಿಯಿಂದ ಉಪಶಮನವನ್ನು ನೀಡುವುದು ಮಾತ್ರವಲ್ಲದೆ ಗಂಟಲಿನ ನೋವಿಗೆ ಕೂಡ ಉತ್ತಮವಾಗಿದೆ.
6) ಬಿಸಿ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.