ಕ್ಯಾನ್ಸರ್​ ಗೆಲ್ಲೋಣ: ಧ್ವನಿ ಪೆಟ್ಟಿಗೆಯಲ್ಲಿ ಉಂಟಾಗುವ ಓಕಲ್​ ಕ್ಯಾನ್ಸರ್​ಗೆ ಇದೆ ಚಿಕಿತ್ಸೆ

1
Published on
ಕ್ಯಾನ್ಸರ್​ ಬಂದ ಮೇಲೆ ಒದ್ದಾಡುವುದಕ್ಕಿಂತ ಮುನ್ನೆಚ್ಚರಿಕೆ ವಹಿಸಿ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಬದಲಿಸಿಕೊಂಡರೆ ಕ್ಯಾನ್ಸರ್​ ಗೆಲ್ಲಬಹುದು ಎಂಬುದು ಹಲವು ವೈದ್ಯರ ಸಲಹೆ. ಇಂದು ಕ್ಯಾನ್ಸರ್​ ಜಾಗೃತಿ ದಿನದ ಸಂದರ್ಭದಲ್ಲಿ ಫೋರ್ಟಿಸ್ ಆಸ್ಪತ್ರೆಯ ಇಎನ್​ಟಿ, ಶಿರ ಮತ್ತು ಕುತ್ತಿಗೆ ಕ್ಯಾನ್ಸರ್ ತಜ್ಞೆ  ಡಾ.ಅತ್ರಿಯಾ ರಾಮಕೃಷ್ಣನ್  ಓಕಲ್​ ಕ್ಯಾನ್ಸರ್​ ಬಗೆಗೊಂದಿಷ್ಟು ಮಾಹಿತಿ ನೀಡಿದ್ದಾರೆ...

ಧೂಮಪಾನದಿಂದ ಸಂಭವಿಸುವ ಕ್ಯಾನ್ಸರ್​ಗಳಲ್ಲಿ ಓಕಲ್ ಕ್ಯಾನ್ಸರ್ ಸಹ ಒಂದಾಗಿದ್ದು, ಗಂಟಲಿನ ಧ್ವನಿ ಪೆಟ್ಟಿಗೆಯಲ್ಲಿ ಉಂಟಾಗುವ ಈ ಕ್ಯಾನ್ಸರ್ ಬಾರದಂತೆ ತಡೆಯಲು ಧೂಮಪಾನ ಹಾಗೂ ಧೂಮಪಾನ ಮಾಡುವವರಿಂದ ದೂರ ಇರಬೇಕು.

ಆರಂಭದಲ್ಲಿ ಧ್ವನಿಯಲ್ಲಿ ಬದಲಾವಣೆ ಉಂಟು ಮಾಡುವ ಈ ಕ್ಯಾನ್ಸರ್ ನಂತರದಲ್ಲಿ ತೀವ್ರ ಕೆಮ್ಮು ಕಾಣಿಸಿಕೊಳ್ಳುತ್ತದೆ. ಗಂಟಲಿನ ನಾಳ ವಿಂಡ್ ಪೈಪ್ ಅನ್ನು ಬ್ಲಾಕ್ ಮಾಡುತ್ತದೆ. ಇದರಿಂದ ಆಹಾರ ಸೇವನೆ ಹಾಗೂ ಉಸಿರಾಟಕ್ಕೆ ತೀವ್ರ ಕಷ್ಟವಾಗುತ್ತದೆ. ಹೀಗಾಗಿ ಧ್ವನಿಯಲ್ಲಿ ಬದಲಾವಣೆ (ಕರ್ಕಶ ಧ್ವನಿ) ಕಾಣಿಸಿಕೊಂಡು ಅದು ಎರಡು ವಾರಗಳ ಕಾಲ ಹಾಗೇ ಮುಂದುವರಿದರೆ ಕೂಡಲೇ ಇಎನ್​ಟಿ ತಜ್ಞರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು.

ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನ ಬಹಳಷ್ಟು ಮುಂದುವರಿದಿದೆ. ಹೀಗಾಗಿ ಓಕಲ್ ಕ್ಯಾನ್ಸರ್ ಆರಂಭಿಕ ಹಂತದಲ್ಲೇ ಪತ್ತೆಯಾದರೆ ಚಿಕಿತ್ಸೆ ಮೂಲಕ ಸಂಪೂರ್ಣ ಗುಣಪಡಿಸಬಹುದಾಗಿದೆ. ಪ್ರಾರಂಭದಲ್ಲಿ ಇದಕ್ಕೆ ಕೇವಲ ರೇಡಿಯೋಥೆರಪಿ ಹಾಗೂ ಔಷಧಗಳನ್ನು ನೀಡಿ ಗುಣಪಡಿಸಬಹುದು. ಇದಕ್ಕೂ ವಾಸಿಯಾಗದಿದ್ದರೆ, ಕೆಲವೊಮ್ಮೆ ಶಸ್ತ್ರಚಿಕಿತ್ಸೆ ನಡೆಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net