ಸಂಬಂಧದಲ್ಲಿ ಮಾತೇ ಮಾಣಿಕ್ಯವಾಗಿರುತ್ತದೆ. ಆದರೆ ದಂಪತಿಗಳು ಪರಸ್ಪರ ಮಾತನ್ನೇ ಆಡುವುದಿಲ್ಲ ಎನ್ನುವುದು ವಿಚ್ಛೇದನಕ್ಕೆ ಪ್ರಮುಖ ಕಾರಣಗಳಲ್ಲೊಂದು. ತಮ್ಮ ಭಾವನೆ, ನೋವು, ಆಶೆ–ನಿರಾಶೆಗಳನ್ನು ಪರಸ್ಪರ ಹಂಚಿಕೊಳ್ಳದಿದ್ದಾಗ ಮನಸ್ತಾಪ ಶುರುವಾಗುತ್ತದೆ. ಸಮಸ್ಯೆಗಳನ್ನು ಚರ್ಚಿಸಲು ಆಗದೇ ಹೋದಾಗ ಕಾಲಕ್ರಮೇಣ , ಸಂಬಂಧ ದುರ್ಬಲಗೊಳ್ಳುತ್ತದೆ ಇದು ವಿಚ್ಛೇದನಕ್ಕೆ ದಾರಿ ಮಾಡಿಕೊಡುತ್ತದೆ.