

ಬೆಂಗಳೂರು: ಸಾಮಾನ್ಯವಾಗಿ ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಅಧಿಕವಾಗಿರುತ್ತದೆ. ಮಳೆಗಾಲದ ಆರ್ದ್ರ ವಾತಾವರಣವು ಸೊಳ್ಳೆಗಳ ಹುಟ್ಟು, ಬೆಳವಣಿಗೆಯನ್ನು ಬೆಂಬಲಿಸುತ್ತದೆ. ಅವುಗಳನ್ನು ಮನೆ ಒಳಗೆ ಬಾರದಂತೆ ತಡೆಯುವುದೇ ದೊಡ್ಡ ಸಮಸ್ಯೆಯಾಗಿರುತ್ತದೆ. ಈ ಅವಧಿಯಲ್ಲಿ ಸೊಳ್ಳೆಗಳ ಕಡಿತದಿಂದ ಡೆಂಗ್ಯೂ, ಮಲೇರಿಯಾ ಮತ್ತು ಚಿಕೂನ್‌ಗುನ್ಯಾದಂತಹ ಸೊಳ್ಳೆಗಳಿಂದ ಹರಡುವ ರೋಗಗಳು ಈ ಋತುವಿನಲ್ಲಿ ಸಾಮಾನ್ಯವಾಗಿದೆ.
ಇದನ್ನೂ ಓದಿ: ನೋಡು ನೋಡುತ್ತಿದ್ದಂತೆಯೇ ನಡುರಸ್ತೆಯಲ್ಲಿ ನರ್ಸ್ಗೆ ಇರಿದ ದುಷ್ಕರ್ಮಿ
ಸೊಳ್ಳೆಗಳ ಕಡಿತದಿಂದ ಕೆಂಪು ಉಬ್ಬು, ತುರಿಕೆಯು ಕೆಲವೊಂದು ವೇಳೆ ನಮಗೆ ಕಿರಿಕಿರಿ ಉಂಟುಮಾಡುತ್ತದೆ. ಸೊಳ್ಳೆ ಕಡಿತದಿಂದ ಉಂಟಾಗುವ ಕಿರಿಕಿರಿ, ತುರಿಕೆ, ಉಬ್ಬರವನ್ನು ಕಡಿಮೆ ಹಲವಾರು ಮನೆಮದ್ದುಗಳನ್ನು ಬಳಸಬಹುದಾಗಿದೆ. ಮಂಜುಗಡ್ಡೆಯುನ್ನು ಸೊಳ್ಳೆ ಕಡಿದ ಜಾಗಕ್ಕೆ ಇಟ್ಟುಕೊಂಡರೆ ಇದು ತುರಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಮರಗಟ್ಟುವಿಕೆಗೆ ಕಾರಣವಾಗುವುದರೆ ಜತೆಗೆ ಸ್ವಲ್ಪ ಸಮಯದವರೆಗೆ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ಆದರೆ ಚರ್ಮಕ್ಕೆ ಮಂಜುಗಡ್ಡೆಯಿಂದ ಹಾನಿಯಾಗುವುದರಿಂದ ಇದನ್ನು ಬಳಸುವಾಗ ಎಚ್ಚರದಿಂದ ಇರಬೇಕು.
ಅಲೋವೆರಾವು ಔಷಧಿಯ ಗುಣಗಳನ್ನು ಹೊಂದಿದ್ದು, ಸೊಳ್ಳೆ ಕಡಿತದಿಂದ ಉಂಟಾಗುವ ಕಿರಿಕಿರಿ ವಿರುದ್ಧ ಹೋರಾಡಲು ಇದು ನಿಮಗೆ ಸಹಾಯ ಮಾಡುತ್ತದೆ. ಅಲೋವೆರಾ ಜೆಲ್ನ್ನು ಸಹ ಬಳಸಬಹುದಾಗಿದೆ. ಜೇನುತುಪ್ಪವು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಸೊಳ್ಳೆ ಕಡಿದ ಜಾಗಕ್ಕೆ ಜೇನುತುಪ್ಪವನ್ನು ಅನ್ವಯಿಸಬಹುದಾಗಿದ್ದು, ಇದು ಉರಿಯೂತವನ್ನು ಕಡಿಮೆ ಮಾಡಿ ಸ್ವಲ್ಪಮಟ್ಟಿಗೆ ಪರಿಹಾರವನ್ನು ನೀಡುತ್ತದೆ.
ಇದನ್ನೂ ಓದಿ: ಹೆಲ್ಮೆಟ್ ಧರಿಸಿ ಹಗಲು ಹೊತ್ತಿನಲ್ಲಿ ಬ್ಯಾಂಕ್ ಲೂಟಿ ಮಾಡಿದ ಶಸ್ತ್ರಸಜ್ಜಿತ ದರೋಡೆಕೋರರು
ತುಳಸಿ ಪ್ರತಿ ಮನೆಯೊಬ್ಬರ ಮನೆಯಲ್ಲಿಯೂ ಲಭ್ಯವಿದ್ದು, ಇದು ಸೊಳ್ಳೆ ಕಡಿತವನ್ನು ಶಮನಗೊಳಿಸುವ ಸಂಯುಕ್ತವನ್ನು ಒಳಗೊಂಡಿದೆ. ಸೊಳ್ಳೆ ಕಡಿತಕ್ಕೆ ತುಳಸಿಯನ್ನು ಬಳಸಲು, ನೀವು ಕೆಲವು ತಾಜಾ ತುಳಸಿ ಎಲೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇವುಗಳನ್ನು ಒಂದು ಕಪ್ ನೀರಿನಲ್ಲಿ ಕೆಲವು ನಿಮಿಷಗಳ ಕಾಲ ಕುದಿಸಿ ಆರಿಸಿ ನಂತರ ಹತ್ತಿಯ ಸಹಾಯದಿಂದ ಇದನ್ನು ನಿಮ್ಮ ಚರ್ಮದ ಮೇಲೆ ಅನ್ವಯಿಸಬಹುದಾಗಿದೆ.
ಸೊಳ್ಳೆ ಕಡಿತಕ್ಕಾಗಿ ಈರುಳ್ಳಿಯನ್ನು ಬಳಸಬಹುದಾಗಿದ್ದು, ತಾಜಾ ಈರುಳ್ಳಿಯ ಸ್ಲೈಸ್ ಅನ್ನು ತೆಗೆದುಕೊಂಡು ನೇರವಾಗಿ ಅನ್ವಯಿಸಬಹುದಾಗಿದೆ. ಸ್ವಲ್ಪ ಸಮಯದ ನಂತರ ನೀರಿನಿಂದ ತೊಳೆದರೆ ಸೊಳ್ಳೆ ಕಡಿತದ ಉರಿಯೂತ ಕಡಿಮೆಯಾಗುತ್ತದೆ. ಈ ವಿಷಯವು ಸಾಮಾನ್ಯ ಮಾಹಿತಿ ಮತ್ತು ಸಲಹೆಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ಸ್ವಂತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.(ಏಜೆನ್ಸೀಸ್)