ಇಲಿಗಳಿಂದ ಬರುವ ವಿವಿಧ ಕಾಯಿಲೆಗಳಿಗೆ ರಕ್ಷಣೆ ನೀಡುವ ಟೊಮ್ಯಾಟೊ

tomato
Published on

ಟೊಮ್ಯಾಟೊ ಎಂದರೆ ಇಷ್ಟಪಡದವರೇ ಇಲ್ಲ. ಇದರ ವಿವಿಧ ಅಡುಗೆಗಳು ಎಲ್ಲರ ಬಾಯಿಯಲ್ಲೂ ನೀರೂರಿಸುತ್ತವೆ. ಇದು ಹಲವು ಆರೋಗ್ಯಕರ ಲಾಭಗಳನ್ನೂ ನೀಡುವಂಥ ತರಕಾರಿ. ದಕ್ಷಿಣ ಅಮೆರಿಕ ಮೂಲದ ಟೊಮ್ಯಾಟೊದ ಸಸ್ಯಶಾಸ್ತ್ರದ ಪ್ರಕಾರ ಹಣ್ಣೇ ಆಗಿದ್ದರೂ ಇದನ್ನು ತರಕಾರಿಯಾಗಿಯೇ ಹೆಚ್ಚು ಬಳಸಲಾಗುತ್ತದೆ. ಸಾಮಾನ್ಯವಾಗಿ ಕೆಂಪಾಗಿರುವ ಟೊಮ್ಯಾಟೊ ಹಳದಿ, ಹಸಿರು, ನೇರಳೆ, ಕೇಸರಿ ಬಣ್ಣಗಳಲ್ಲೂ ಲಭ್ಯ. ವಿಭಿನ್ನ ಆಕಾರ, ಪರಿಮಳವನ್ನು ಹೊಂದಿರುವ ಹಲವು ಉಪಜಾತಿಗಳ ಟೊಮ್ಯಾಟೊಗಳೂ ಇವೆ.

ಟೊಮ್ಯಾಟೊದಲ್ಲಿ ಶೇ. 95ರಷ್ಟು ನೀರಿನ ಅಂಶವಿದೆ. ಶೇ. 5ರಷ್ಟು ಕಾಬೋಹೈಡ್ರೇಟ್ಸ್ ಮತ್ತು ಫೈಬರ್​ಗಳಿವೆ. ಟೊಮ್ಯಾಟೊ 1.5 ಗ್ರಾಂನಷ್ಟು ಫೈಬರ್ ನೀಡುತ್ತದೆ. ಟೊಮ್ಯಾಟೊದಲ್ಲಿರುವ ಹೆಮಿಸೆಲ್ಯುಲೋಸ್, ಸೆಲ್ಯುಲೋಸ್ ಮತ್ತು ಲಿಗ್ನಿನ್ ರೂಪದಲ್ಲಿರುವ ಶೇ. 87ರಷ್ಟು ಫೈಬರ್​ಗಳು ಕರಗದವು. ಟೊಮ್ಯಾಟೊ ಆಂಟಿಆಕ್ಸಿಡೆಂಟ್​ಗಳಿಗೆ ಪ್ರಮುಖ ಮೂಲವಾಗಿದೆ. ರಕ್ತದೊತ್ತಡದ ನಿಯಂತ್ರಣ ಮತ್ತು ಹೃದಯದ ಕಾಯಿಲೆಯ ನಿಯಂತ್ರಣಕ್ಕೆ ಅನುಕೂಲಕಾರಿಯಾದ ಪೊಟ್ಯಾಶಿಯಂ; ರಕ್ತ ಹೆಪ್ಪುಗಟ್ಟುವಿಕೆ ತಡೆ ಮತ್ತು ಮೂಳೆಯ ಆರೋಗ್ಯಕ್ಕಾಗಿ ಅಗತ್ಯವಾದ ವಿಟಮಿನ್ ಕೆ1; ಸಾಮಾನ್ಯ ಅಂಗಾಂಶಗಳ ಬೆಳವಣಿಗೆ ಮತ್ತು ಕೋಶಗಳ ಕಾರ್ಯಕ್ಕಾಗಿ ಮತ್ತು ಮುಖ್ಯವಾಗಿ ಗರ್ಭಿಣಿಯರಿಗೆ ಅಗತ್ಯವಿರುವ ಫೊಲೇಟ್ (ಜೀವಸತ್ವ ಬಿ9); ಉರಿಯೂತ ನಿಯಂತ್ರಕ ಮತ್ತು ಇಲಿಗಳಿಂದ ಬರುವ ವಿವಿಧ ಕಾಯಿಲೆಗಳಿಂದ ರಕ್ಷಣೆ ನೀಡುವ ಫ್ಲೇವನಾಯ್್ಡ ರಕ್ತದೊತ್ತಡವನ್ನು ಕಡಿಮೆ ಮಾಡುವ ಕ್ಲೋರೋಜನಿಕ್ ಆಮ್ಲ - ಇವೆಲ್ಲ ಟೊಮ್ಯಾಟೊದಲ್ಲಿವೆ. ಹೃದಯದ ಸಮಸ್ಯೆ ಮತ್ತು ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡ ನಿಯಂತ್ರಣಕ್ಕಾಗಿ ದೈನಂದಿನ ಡಯಟ್​ನಲ್ಲಿ ನಿಯತವಾಗಿ ಟೊಮ್ಯಾಟೊ ಸೇವಿಸುವ ರೂಢಿ ಇಟ್ಟುಕೊಳ್ಳುವುದು ಒಳ್ಳೆಯದು. ಚರ್ಮದ ಆರೋಗ್ಯ ಹೆಚ್ಚಿಸುವುದಕ್ಕೆ ಟೊಮ್ಯಾಟೊ ಬಹಳ ಪ್ರಯೋಜನಕಾರಿ. ಸೂರ್ಯನ ಕಿರಣಗಳಿಂದಾಗುವ ಹಾನಿಯನ್ನು ಟೊಮ್ಯಾಟೊ ಪರಿಣಾಮಕಾರಿಯಾಗಿ ತಡೆಯುತ್ತದೆ. ಎಲ್ಲ ರೀತಿಯ ದೇಹಪ್ರಕೃತಿಯವರಿಗೂ ಟೊಮ್ಯಾಟೊ ಹೊಂದುತ್ತದೆ. ಇದರಿಂದ ಅಲರ್ಜಿಯಾಗುವುದು ಬಹಳ ಕಡಿಮೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net