

world Malaria Day | ವಿಶ್ವ ಮಲೇರಿಯಾ ದಿನವನ್ನು ಏಪ್ರಿಲ್ 25 ರಂದು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮಲೇರಿಯಾವು ಮಾರಕ ಕಾಯಿಲೆಯಾಗಿದ್ದು, ಇದು ಸೋಂಕಿತ ಹೆಣ್ಣು ಅನಾಫಿಲಿಸ್ ಸೊಳ್ಳೆಗಳ ಕಡಿತದ ಮೂಲಕ ಹರಡುತ್ತದೆ. ಸಾಮಾನ್ಯವಾಗಿ ಮಲೇರಿಯಾ ರೋಗವು ಪರಿಸರದಲ್ಲಿ ನೀರು ನಿಲ್ಲುವುದರಿಂದ ಉಂಟಾಗುತ್ತದೆ. ಜ್ವರ, ತಲೆನೋವು, ವಾಂತಿ, ಶೀತ, ಆಯಾಸ, ತಲೆತಿರುಗುವಿಕೆ ಮತ್ತು ಹೊಟ್ಟೆ ನೋವು ಮಲೇರಿಯಾ ಸೊಳ್ಳೆ ಕಡಿತದ ಕೆಲವು ಸಾಮಾನ್ಯ ಲಕ್ಷಣಗಳಾಗಿವೆ.
ಮಲೇರಿಯಾವು ವಿಶ್ವದ ಅತ್ಯಂತ ಮಾರಕ ಪರಾವಲಂಬಿ ಕಾಯಿಲೆಗಳಲ್ಲಿ ಒಂದಾಗಿದೆ. 2017 ರಲ್ಲಿ ಜಾಗತಿಕವಾಗಿ 21.9 ಕೋಟಿಗೂ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿದ್ದವು. ಮತ್ತು 4.35 ಲಕ್ಷ ಜನರು ಈ ಕಾಯಿಲೆಗೆ ಬಲಿಯಾಗಿದ್ದಾರೆ. ಈ ರೋಗವನ್ನು ತಡೆಗಟ್ಟುವಿಕೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.
ಅಂದಹಾಗೆ ಮಲೇರಿಯಾ ಚಿಕಿತ್ಸೆ ಪಡೆದ ನಂತರವೂ ನಿಮ್ಮ ದೇಹದಲ್ಲಿ ಆಯಾಸ ಕಾಣಿಸಿಕೊಂಡರೆ ನೀವು ಕೆಲ ಯೋಗಾಸನಗಳನ್ನು ಅಭ್ಯಾಸ ಮಾಡುವ ಮೂಲಕ ನಿಮ್ಮ ದೇಹಕ್ಕೆ ಶಕ್ತಿ ತಂದುಕೊಳ್ಳಬಹುದು. ಹಾಗಾದ್ರೆ ಮಲೇರಿಯಾದಿಂದ ಚೇತರಿಸಿಕೊಳ್ಳುತ್ತಿರುವ ರೋಗಿಗಳಿಗೆ ಯಾವ ಯೋಗಾಸನ ಬಹಳ ಪ್ರಯೋಜನಕಾರಿಯಾಗಿದೆ ಎಂಬುದನ್ನು ತಿಳಿಯೋಣ.
ಈ ಆಸನವನ್ನು ಅಭ್ಯಾಸ ಮಾಡುವುದರಿಂದ ಜೀರ್ಣಕ್ರಿಯೆ ಸುಧಾರಣೆಯಾಗುತ್ತದೆ. ಈ ಆಸನವು ದೇಹವನ್ನು ವಿಶ್ರಾಂತಿ ಮಾಡುತ್ತದೆ ಮತ್ತು ಔಷಧಿಗಳಿಂದ ಉಂಟಾಗುವ ಅಜೀರ್ಣವನ್ನು ತೆಗೆದುಹಾಕುತ್ತದೆ. ವಜ್ರಾಸನವನ್ನು ಅಭ್ಯಾಸ ಮಾಡಲು ನಿಮ್ಮ ಮೊಣಕಾಲುಗಳ ಮೇಲೆ ಕುಳಿತು ನಿಮ್ಮ ಕಾಲುಗಳನ್ನು ಹಿಂದಕ್ಕೆ ಬಗ್ಗಿಸಿ. ನಿಮ್ಮ ಬೆನ್ನನ್ನು ನೇರವಾಗಿ ಇರಿಸಿ ಮತ್ತು ನಿಮ್ಮ ಕೈಗಳನ್ನು ನಿಮ್ಮ ಮೊಣಕಾಲುಗಳ ಮೇಲೆ ಇರಿಸಿ. ಆಳವಾಗಿ ಉಸಿರಾಡುತ್ತಾ 5 ರಿಂದ 10 ನಿಮಿಷಗಳ ಕಾಲ ಈ ಸ್ಥಾನದಲ್ಲಿ ಕುಳಿತುಕೊಳ್ಳಬೇಕು.
ಈ ಆಸನ ದೇಹವನ್ನು ವಿಶ್ರಾಂತಿ ಪಡಿಸುವ ಮೂಲಕ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮಾನಸಿಕ ಶಕ್ತಿಯನ್ನು ಪುನಃಸ್ಥಾಪಿಸುತ್ತದೆ. ಇದನ್ನು ಅಭ್ಯಾಸ ಮಾಡಲು, ನಿಮ್ಮ ಮೊಣಕಾಲುಗಳ ಮೇಲೆ ಕುಳಿತುಕೊಳ್ಳಿ, ನಿಮ್ಮ ತಲೆಯನ್ನು ನೆಲದ ಮೇಲೆ ಇರಿಸಿ ಮತ್ತು ನಿಮ್ಮ ತೋಳುಗಳನ್ನು ಮುಂದಕ್ಕೆ ಚಾಚಬೇಕು.
5. ಮಲಗುವ ಮುನ್ನ, ಮಲಗುವ ಕೋಣೆಯಲ್ಲಿ ಪೈರೆಥ್ರಿನ್ ಅಥವಾ ಅದಕ್ಕೆ ಸಂಬಂಧಿಸಿದ ಕೀಟನಾಶಕವನ್ನು ಸಿಂಪಡಿಸುವುದು
4. ರಾತ್ರಿಯಲ್ಲಿ ಹಾಸಿಗೆಯ ಮೇಲೆ ಸೊಳ್ಳೆ ಪರದೆಗಳನ್ನು ಬಳಸಬೇಕು
3. ರಾತ್ರಿಯಲ್ಲಿ ಹೊರಗೆ ಹೋಗುವಾಗ, ಉದ್ದ ತೋಳುಗಳು ಮತ್ತು ಉದ್ದ ಪ್ಯಾಂಟ್ಗಳಿರುವ ಉಡುಪನ್ನು ಧರಿಸಬೇಕು
2. ನೀರಿನ ಟಬ್ಗಳನ್ನು ಯಾವಾಗಲೂ ಮುಚ್ಚಳದಿಂದ ಮುಚ್ಚಿಡುವುದು
1. ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು
(ಏಜೆನ್ಸೀಸ್)
ಸೂಚನೆ: ಈ ಲೇಖನವನ್ನು ಯೋಗ ಗುರುಗಳ ಸಲಹೆಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಆಸನದ ಸರಿಯಾದ ಸ್ಥಾನದ ಬಗ್ಗೆ ತಿಳಿಯಲು ನೀವು ತಜ್ಞರನ್ನು ಸಂಪರ್ಕಿಸುವುದು ಉತ್ತಮ.