

Dream : ಕನಸುಗಳ ಪ್ರಪಂಚ ಸಾಮಾನ್ಯವಾಗಿ ನಿಗೂಢತೆಯಿಂದ ಕೂಡಿರುತ್ತದೆ. ನಾವೆಲ್ಲರೂ ಕೆಲವೊಮ್ಮೆ ಅರ್ಥವಿಲ್ಲದ ಕನಸುಗಳನ್ನು ಕಾಣುತ್ತೇವೆ. ಇವುಗಳಲ್ಲಿ ಒಂದು ನಾವು ಸಾಯುತ್ತಿರುವುದನ್ನು ಕಾಣುವ ಸಾಮಾನ್ಯ ಕನಸು. ಈ ಕನಸು ನಮ್ಮನ್ನು ಹೆಚ್ಚಾಗಿ ಭಯ ಪಡಿಸುತ್ತದೆ. ನಾವು ನಿಜವಾಗಿಯೂ ಬದುಕಿಲ್ಲ ಎಂಬ ರೀತಿಯ ಭಾವನೆಯನ್ನು ನಮ್ಮ ಮನಸ್ಸಿಗೆ ಮೂಡಿಸುತ್ತದೆ. ಹಾಗಾದ್ರೆ ಈ ಕನಸು ನಮಗೆ ಬೀಳುವುದಿಂದ ನಮ್ಮ ಮುಂದಿನ ಭವಿಷ್ಯದಲ್ಲಿ ಏನಾಗುತ್ತದೆ ಎಂದು ತಿಳಿಯೋಣ.
ಕನಸಿನಲ್ಲಿ ನೀವು ಸಾಯುವುದನ್ನು ನೋಡುವುದು ತುಂಬಾ ಸಾಮಾನ್ಯ ಅನುಭವ. ಇದರರ್ಥ ನಿಮ್ಮ ನಿಜ ಜೀವನದಲ್ಲಿ ಏನಾದರೂ ಕೆಟ್ಟದ್ದು ಸಂಭವಿಸಲಿದೆ ಎಂದಲ್ಲ. ಬದಲಿಗೆ ಇದು ವ್ಯಕ್ತಿಯ ವೈಯಕ್ತಿಕ ಅನುಭವಗಳು ಮತ್ತು ಭಾವನೆಗಳನ್ನು ಅವಲಂಬಿಸಿರುತ್ತದೆ.
ಈ ಕನಸು ನಿಮ್ಮ ಜೀವನದಲ್ಲಿ ಬರುವ ಪ್ರಮುಖ ಬದಲಾವಣೆಯ ಸೂಚನೆಯಾಗಿರಬಹುದು. ಈ ಬದಲಾವಣೆಯು ನಿಮ್ಮ ವೃತ್ತಿ, ಸಂಬಂಧಗಳು ಅಥವಾ ಜೀವನ ಶೈಲಿಗೆ ಸಂಬಂಧಿಸಿರಬಹುದು. ಈ ಕನಸು ನಿಮ್ಮ ಮನಸ್ಸಿಗೆ ಭಯ ಮತ್ತು ಆತಂಕವನ್ನು ಉಂಟು ಮಾಡುತ್ತದೆ. ನೀವು ಯಾವುದೋ ವಿಷಯದ ಬಗ್ಗೆ ತುಂಬಾ ಚಿಂತಿತರಾಗಿದ್ದಾಗ ಈ ಚಿಂತೆ ನಿಮ್ಮ ಕನಸಿನಲ್ಲಿ ಪ್ರತಿಫಲಿಸುವುದರಿಂದ ಈ ರೀತಿಯ ದೃಶ್ಯವನ್ನು ನೀವು ನಿದ್ರೆಯಲ್ಲಿ ಕಾಣುತ್ತೀರಿ.
ಕನಸಿನಲ್ಲಿ ನೀವು ಸಾಯುವುದನ್ನು ನೋಡುವುದೇಕೆ?
ಈ ಕನಸು ನಿಮ್ಮ ಜೀವನದಲ್ಲಿ ಕೆಲವು ಮುಗಿಯದ ಕೆಲಸವನ್ನು ಸೂಚಿಸುತ್ತದೆ. ಇನ್ನೂ ಅಪೂರ್ಣವಾಗಿರುವ ಕೆಲವು ಕೆಲಸವನ್ನು ಪೂರ್ಣಗೊಳಿಸಲು ನೀವು ಉತ್ಸುಕರಾಗಿದ್ದೀರ ಎಂಬುದನ್ನು ತಿಳಿಸುತ್ತದೆ ಹಾಗೂ ಹೊಸ ಅಧ್ಯಾಯದ ಆರಂಭವನ್ನು ಸಹ ಸೂಚಿಸುತ್ತದೆ. ನಿಮ್ಮ ಜೀವನದಲ್ಲಿ ಹೊಸದನ್ನು ಪ್ರಾರಂಭಿಸಲು ನೀವು ಸಿದ್ಧರಾಗಿರಬಹುದು. ಈ ಕನಸು ನಿಮ್ಮ ಜೀವನ ಮತ್ತು ನಿಮ್ಮ ಬಗ್ಗೆ ಆಳವಾಗಿ ಯೋಚಿಸುವಂತೆ ಮಾಡಬಹುದು. ಇದರಿಂದಾಗಿ ನಿಮ್ಮ ಜೀವನದಲ್ಲಿ ನೀವು ಏನನ್ನು ಬಯಸುತ್ತೀರಿ ಮತ್ತು ನೀವು ಎಲ್ಲಿಗೆ ಹೋಗುತ್ತಿದ್ದೀರಿ ಎಂಬುದನ್ನು ನೀವು ತಿಳಿಯಬಹುದು.
ಜೀವನದ ಹೊಸ ಆರಂಭ
ನಿಮ್ಮ ಭಾವನೆಗಳಿಗೆ ಗಮನ ಕೊಡುವ ಮೂಲಕ ಈ ಕನಸು ಬಿದ್ದಾಗ ನಿಮಗೆ ಹೇಗನಿಸುತ್ತದೆ ಎಂದು ಒಂದು ಬಾರಿ ಆಲೋಚನೆ ಮಾಡಿ. ನಿಮಗೆ ಭಯ, ದುಃಖ ಅಥವಾ ಶಾಂತತೆ ಅನಿಸುತ್ತಿದೆಯೇ ಎಂದು ನಿಮ್ಮ ಭಾವನೆಗಳು ಕನಸಿನ ಅರ್ಥವನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡಬಹುದು. ಕನಸು ಬಿದ್ದಾಗ ಅದು ಸ್ವಲ್ಪ ಸಮಯದ ನಂತರ ನಿಮ್ಮಿಂದ ಅಳಿಸಿ ಹೋಗುತ್ತದೆ. ಹಾಗಾಗಿ ನಿಮಗೆ ಕಾಣಿಸಿದ ಕನಸಿನ ಬಗ್ಗೆ ವಿವರಗಳನ್ನು ಬರೆಯಲು ಪ್ರಯತ್ನಿಸಿ. ಇದರಿಂದ ಕನಸನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯವಾಗುತ್ತದೆ.
ಕನಸನ್ನು ಅರ್ಥಮಾಡಿಕೊಳ್ಳಲು ಏನು ಮಾಡಬೇಕು?
ಕನಸುಗಳು ಹೆಚ್ಚಾಗಿ ನಮ್ಮ ನಿತ್ಯ ಜೀವನದಲ್ಲಿನ ಘಟನೆಗಳಿಂದ ಪ್ರಭಾವಿತವಾಗಿರುತ್ತವೆ. ನಿಮ್ಮ ಜೀವನದಲ್ಲಿ ಇತ್ತೀಚೆಗೆ ಏನಾಯಿತು ಎಂಬುದರ ಬಗ್ಗೆ ಗಮನ ಕೊಡಿ. ನಿಮ್ಮ ಕನಸಿನ ಅರ್ಥವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ನೀವು ಕನಸಿನ ತಜ್ಞರೊಂದಿಗೆ ಮಾತನಾಡಬಹುದು. ನಮಗೆ ಬೀಳುವ ಕನಸುಗಳು ವೈಯಕ್ತಿಕ ಎಂಬುದನ್ನು ಗಮನಿಸುವುದು ಮುಖ್ಯ. ನೀವು ಅಂತಹ ಕನಸುಗಳನ್ನು ಪದೇ ಪದೇ ಕಾಣುತ್ತಿದ್ದರೆ ಮತ್ತು ಅವು ನಿಮ್ಮನ್ನು ಕಾಡುತ್ತಿದ್ದರೆ, ಮನಶ್ಶಾಸ್ತ್ರಜ್ಞರನ್ನು ಸಂಪರ್ಕಿಸುವುದು ಉತ್ತಮ. ಕನಸುಗಳು ನಮ್ಮ ಸುಪ್ತ ಮನಸ್ಸಿನ ಪ್ರತಿಬಿಂಬಗಳಾಗಿವೆ. ಅವುಗಳನ್ನು ಅರ್ಥಮಾಡಿಕೊಳ್ಳುವ ಮೂಲಕ, ನಾವು ನಮ್ಮ ಬಗ್ಗೆ ಬಹಳಷ್ಟು ಕಲಿಯಬಹುದು.