

ಈಗಿನ ಸಮಯದಲ್ಲಿ ಎಲ್ಲರೂ ಮನೆಯಲರ್ಲೕ ಉಳಿಯುವ ಸ್ಥಿತಿ ನಿರ್ವಣವಾಗಿದೆ. ನಮ್ಮ ಆರೋಗ್ಯವನ್ನು ವೃದ್ಧಿಸುವ ದಿನನಿತ್ಯದ ವ್ಯಾಯಾಮದ ಹವ್ಯಾಸವನ್ನು ರೂಡಿಸಿಕೊಳ್ಳಲು ಈ ಸಮಯವನ್ನು ಬಳಸಬಹುದಲ್ಲವೇ? ವ್ಯಾಯಾಮವು ದೈಹಿಕ-ಮಾನಸಿಕ ಆರೋಗ್ಯವನ್ನು ವೃದ್ಧಿಸುವ ಔಷಧದಂತೆ ಕೆಲಸಮಾಡುತ್ತದೆ.
ಈ ಮೊದಲು ಕೆಲಸದ ಒತ್ತಡದಿಂದ ವ್ಯಾಯಾಮಕ್ಕೆ ಸಮಯವಿಲ್ಲ ಎಂದು ಅನೇಕರು ಹೇಳುತ್ತಿದ್ದರು. ಆದರೆ ಈಗ ಸಮಯವೂ ಇದೆ, ದೃಢಸಂಕಲ್ಪವೊಂದೇ ಬೇಕಾಗಿರುವುದು. ಸತತ ಮೂರು ವಾರ ವ್ಯಾಯಾಮ ಮಾಡಿದರೆ ಅದು ಹವ್ಯಾಸವಾಗಿಬಿಡುತ್ತದೆ. ನಂತರ ಪ್ರತಿನಿತ್ಯ ಮುಂದುವರಿಸಲು ಸಾಧ್ಯವಾಗುತ್ತದೆ. ನಮ್ಮ ಶರೀರವು ಜೀವಕೋಶಗಳು, ಮೂಳೆ, ಅಂಗಾಂಗಗಳಿಂದ ರಚನೆಯಾಗಿದೆ. ಇವೆಲ್ಲದರ ಸರಿಯಾದ ಚಟುವಟಿಕೆಗೆ ವ್ಯಾಯಾಮ ಬಹು ಮುಖ್ಯ. ಇತ್ತೀಚಿನ ದಿನಗಳಲ್ಲಿ ನಾವು ಆಹಾರವನ್ನು ಸೇವಿಸುತ್ತಿದ್ದೇವೆಯೇ ಹೊರತು ಅದಕ್ಕೆ ತಕ್ಕಂತೆ ದೈಹಿಕವಾಗಿ ಶ್ರಮಿಸುತ್ತಿಲ್ಲ. ಇದರಿಂದಾಗಿ ನಾವು ಸೇವಿಸುವ ಆಹಾರದಲ್ಲಿನ ಗ್ಲುಕೋಸ್ ಅಂಶವು ಕೊಬ್ಬಿನಾಂಶವಾಗಿ ಪರಿವರ್ತನೆಗೊಂಡು ದೇಹದಲ್ಲಿ ಶೇಖರಣೆಯಾಗಿ ಹೃದಯ ಸಮಸ್ಯೆ, ಅಧಿಕ ರಕ್ತದೊತ್ತಡ ಮುಂತಾದ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ.
* ಪ್ರತಿನಿತ್ಯ ವ್ಯಾಯಾಮದ ಅಭ್ಯಾಸವು ನಮ್ಮ ಹೃದಯದ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ರಕ್ತಸಂಚಾರವಾಗುವಂತೆ ಮಾಡಿ ದೇಹದ ಅರೋಗ್ಯವನ್ನು ವೃದ್ಧಿಸುತ್ತದೆ. ಹೃದಯದ ಉತ್ತಮ ಆರೋಗ್ಯಕ್ಕೆ ಪ್ರತಿನಿತ್ಯ ಕನಿಷ್ಠ 30 ನಿಮಿಷಗಳ ವ್ಯಾಯಾಮದ ಅಭ್ಯಾಸ ಅವಶ್ಯ ಎಂದು ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ತಿಳಿಸಿದೆ. ್ಝ ಇಂದು ಅನೇಕರಲ್ಲಿ ಸಾಮಾನ್ಯವಾಗಿರುವ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡವನ್ನು ಇದರಿಂದ ಹತೋಟಿ ಮಾಡಬಹುದು.
* ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ಮಾಂಸಖಂಡ ಹಾಗೂ ಮೂಳೆಗಳು ಬಲಿಷ್ಠವಾಗುತ್ತವೆ. ಇದರಿಂದ ಬೆನ್ನುನೋವು, ಸೊಂಟನೋವು, ಕೀಲುನೋವನ್ನು ಕಡಿಮೆ ಮಾಡಬಹುದು ಹಾಗೂ ನಮ್ಮ ಮೂಳೆಗಳ ಸಾಂದ್ರತೆಯೂ ಹೆಚ್ಚಾಗುತ್ತದೆ. ್ಝ ವ್ಯಾಯಾಮವು ಬ್ರೖೆನ್ ಡಿರೈವಡ್ ಪ್ರೋಟಿನ್ನ ಮಟ್ಟವನ್ನು ಜಾಸ್ತಿ ಮಾಡುತ್ತದೆ. ಇದರಿಂದ ಯೋಚನಾಶಕ್ತಿ, ಕಲಿಯುವಿಕೆ ಹಾಗೂ ದೃಢತೆ ಹೆಚ್ಚುತ್ತದೆ. ್ಝ ಪರಿಪೂರ್ಣ ಅರೋಗ್ಯಕ್ಕೆ ದೇಹದ ಹಾಗೂ ಮನಸ್ಸಿನ ಉತ್ತಮ ಸ್ಥಿತಿ ಆವಶ್ಯಕ. ವ್ಯಾಯಾಮದ ಅಭ್ಯಾಸದಿಂದ ಮಿದುಳಿನ ಭಾಗಕ್ಕೆ ರಕ್ತಸಂಚಾರ ಹೆಚ್ಚಿ ಎಂಡಾಫಿರ್‚ನ್ ಎಂಬ ಹಾಮೋನ್ ಬಿಡುಗಡೆಗೊಂಡು ಮನಸ್ಸನ್ನು ಶಾಂತರೀತಿಯಲ್ಲಿಡಲು ನೆರವಾಗುತ್ತದೆ. ವ್ಯಾಯಾಮದ ಅಭ್ಯಾಸವು ಮಾನಸಿಕ ಒತ್ತಡ ಹಾಗೂ ಖಿನ್ನತೆಯನ್ನು ಕಡಿಮೆ ಮಾಡಬಹುದು ಎಂಬ ಸಂಶೋಧನೆಯೊಂದು ಫ್ರಂಟಿಯರ್ಸ್ ಇನ್ ಸೈಕ್ಯಾಟ್ರಿ ಎಂಬ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.
ವ್ಯಾಯಾಮ ಮಾಡಲು ಜಿಮ್ ಅಥವಾ ಹೊರಗಡೆ ಹೋಗುವ ಅಗತ್ಯವಿಲ್ಲ. ಮನೆಯಲ್ಲೇ ಅವರವರ ಶಕ್ತ್ಯಾನುಸಾರ, ವಯಸ್ಸಿಗೆ ಅನುಗುಣವಾಗಿ ಆರೋಗ್ಯ ಸಮಸ್ಯೆಗೆ ತಕ್ಕಂತೆ ಸರಳ ವ್ಯಾಯಾಮ ಮಾಡಬಹುದು. ಕುರ್ಚಿ, ಮೆಟ್ಟಿಲಿನ ಸಹಾಯದಿಂದ ಮಾಡುವ ವ್ಯಾಯಾಮ, ಬೆನ್ನಿನ ಮೇಲೆ ಮಲಗಿ ಕಾಲನ್ನು 90 ಡಿಗ್ರಿಗೆ ಎತ್ತುವುದು, ಈ ಸ್ಥಿತಿಯಲ್ಲೇ ಸೈಕ್ಲಿಂಗ್ ಮಾಡುವುದು ಉಪಯುಕ್ತ.