

ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆ ಮಾತನ್ನು ಬದಿಗಿಟ್ಟು ಹಿತ್ತಲ ಗಿಡವೇ ಮದ್ದು ಎಂಬ ಸತ್ಯವನ್ನು ಜನಸಾಮಾನ್ಯರು ಸ್ವತ@ ಅನುಭವಿಸಿದ ಕಾಲಟ್ಟವಿದು. ಕರೊನಾ ವಿಶ್ವದಾದ್ಯಂತ ಪಸರಿಸಿದ ಸಂದರ್ಭದಲ್ಲಿ ವೈರಾಣು ಹುಟ್ಟಿಕೊಂಡ ಚೀನಾದಲ್ಲಿ ಬೇರೆಲ್ಲ ದೇಶಗಳಲ್ಲಿ ಹಬ್ಬಿದಷ್ಟು ಹಬ್ಬದೆ ಕರೋನಾದ ಹೆಡೆಮುರಿ ಕಟ್ಟಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಮೂಡಿರಬಹುದು. ಚೀನಾದಲ್ಲಿ ನಡೆಯುವ ಅನೇಕ ವಿಚಾರಗಳು ಬಹಳ ಸಲ ಗುಪ್ತವಾಗಿಯೇ ಇರುತ್ತವೆ. ಸೋಂಕು ವಿಪರೀತಕ್ಕೇರಿದಾಗ ಕಣ್ಣಿಗೆ ಕಾಣಿಸದ ವೈರಾಣುವನ್ನು ಕಟ್ಟಿಹಾಕಬೇಕೆಂದರೆ ಅದು ತಂತ್ರಗಾರಿಕೆಯ ಮಹಿಮೆಯಂತೂ ಖಂಡಿತವಾಗಿ ಅಲ್ಲ. ಅಂದಮೇಲೆ ಬೇರೆ ದೇಶಗಳಲ್ಲಿ ಇದ್ದಿರದ ಚಿಕಿತ್ಸಾ ವಿಶೇಷ ಅಲ್ಲೇನು ಇತ್ತು ಎಂಬುದರ ಸಂಪೂರ್ಣ ಮಾಹಿತಿ ಹೊರಬೀಳದಿದ್ದರೂ ಗುಟ್ಟು ಪೂರ್ತಿ
ಅಲ್ಲಿಯ ಸಾಂಪ್ರದಾಯಿಕ ಚಿಕಿತ್ಸಾ ವಿಧಾನವು ಜಗತ್ತಿನಾದ್ಯಂತ ತಲುಪುವಂತೆ ಹಾಗೂ ವಿಶ್ವಮಾನ್ಯತೆ ಪ್ರಾಪ್ತವಾಗುವಂತೆ ಮಾಡುವಲ್ಲಿ ಚೀನಾದೇಶ ವಹಿಸಿದ ಮುತುವರ್ಜಿಯನ್ನು ಪ್ರಶಂಸಿಸಲೇಬೇಕು. ಕರೊನಾ ಚಿಕಿತ್ಸೆಯಲ್ಲಿ ಅನೇಕ ಸಾಂಪ್ರದಾಯಿಕ ಔಷಧಗಳನ್ನು ರಾಷ್ಟ್ರೀಯ ಚಿಕಿತ್ಸಾ ಮಾನದಂಡದಲ್ಲೇ ಅದು ಸೇರಿಸಿದ್ದೂ ಗಮನಾರ್ಹ ಸಂಗತಿ. ದುರದೃಷ್ಟವಶಾತ್ ಭಾರತದಲ್ಲಿ ಹಾಗಾಗಲಿಲ್ಲ. ಸ್ವಾತಂತ್ರ$್ಯ ಬಂದು ಏಳು ದಶಕಗಳೇ ಕಳೆದಿದ್ದರೂ ಅನ್ಯರ್ ರತ್ನವಾದ ಆಯುರ್ವೇದ ನಮ್ಮ ಬತ್ತಳಿಕೆಯಲ್ಲಿದ್ದರೂ ವಿಶ್ವದೆಲ್ಲೆಡೆಗೆ ಪರಿಣಾಮಕಾರಿಯಾಗಿ ತಲುಪಿಲ್ಲ. ಪರಿಶ್ರಮದ ಕೊರತೆ ಹಾಗೂ ತಾತ್ಸಾರ ಮನೋಭಾವ ಇದಕ್ಕೆ ಕಾರಣ. ಇದೇಕೆ ಎಂಬುದು ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ.
ಜಗತ್ತಿನಾದ್ಯಂತ ಸುಮಾರು ಹದಿನೆಂಟು ಕೋಟಿಗೂ ಹೆಚ್ಚುಮಂದಿಗೆ ಕರೊನಾ ಸೋಂಕು ತಗುಲಿದೆ. ಮುಂದುವರಿದ ದೇಶಗಳೆಂದು ಹಣೆಪಟ್ಟಿ ಅಂಟಿಸಿಕೊಂಡಿ ರುವ ದೇಶಗಳಲ್ಲಿ ಭಾರತಕ್ಕಿಂತ ಐದಾರು ಪಟ್ಟು ಹೆಚ್ಚು ಜನರಲ್ಲಿ ಕಾಣಿಸಿಕೊಂಡಿದೆ. ಉದಾಹರಣೆಗೆ ಅಮೆರಿಕದಲ್ಲಿ ಜನಸಂಖ್ಯೆಯ ಪ್ರತಿಶತ ಹತ್ತು ಜನರು ಬಾಧಿತರಾದರೆ ಭಾರತದಲ್ಲಿ ನೂರಕ್ಕೆ ಎರಡು ಜನರಿಗೆ ಮಾತ್ರ ಬಂತು! ಇಂಗ್ಲೆಂಡ್ನಲ್ಲಿ ನೂರರಲ್ಲಿ ಏಳಕ್ಕೂ ಹೆಚ್ಚು ಮಂದಿಯಲ್ಲಿ ಕಾಣಿಸಿಕೊಂಡಿತು! ಮರಣ ಪ್ರಮಾಣವನ್ನು ನೋಡುವುದಾದರೆ ಅಂತರ ಇನ್ನೂ ಹೆಚ್ಚಿದೆ. ಅಮೆರಿಕ, ಇಂಗ್ಲೆಂಡ್, ಇಟಲಿಗಳ ಜನಸಂಖ್ಯೆಯಲ್ಲಿ ಸಾವಿರಕ್ಕೆ ಇಬ್ಬರು ಮರಣಿಸಿದರೆ ಭಾರತದಲ್ಲಿ ಪ್ರಾಣ ಕಳೆದುಕೊಂಡವರು ಹತ್ತುಸಾವಿರಕ್ಕೆ ಮೂವರು! ಕರೊನಾ ಪರೀೆಯನ್ನು ಭಾರತದಲ್ಲಿ ಇನ್ನೂ ಹೆಚ್ಚು ಜನರಲ್ಲಿ ಮಾಡಿದ್ದರೆ ಸೋಂಕಿಗೆ ಬಳಲಿದವರ ಸಂಖ್ಯೆ ಹೆಚ್ಚಿರುತ್ತಿತ್ತು ಎಂಬುದೇನೋ ನಿಜ. ಹಾಗಾದಲ್ಲಿ ಮರಣ ಪ್ರಮಾಣ ಇನ್ನೂ ಗಣನೀಯವಾಗಿ ತಗ್ಗುತ್ತಿತ್ತು! ಏಕೆಂದರೆ ಅಸುನೀಗಿದವರ ಸಂಖ್ಯೆಯಲ್ಲಿ ಹೆಚ್ಚೇನೂ ವ್ಯತ್ಯಾಸವಾಗುವುದಿಲ್ಲ, ತುಸು ಬದಲಾವಣೆ ಮಾತ್ರ ಸಾಧ್ಯ.
ಮಾಸ್ಕ್ ಬಳಕೆ, ಸ್ಯಾನಿಟೈಸರ್ ಉಪಯೋಗ ಹಾಗೂ ಸಾಮಾಜಿಕ ಅಂತರದಂಥ ರೋಗ ತಡೆಯುವ ವಿಧಾನಗಳು ಅಮೆರಿಕ, ಯುರೋಪಿನ ದೇಶಗಳಲ್ಲಿ ನಮ್ಮಲ್ಲಿಗಿಂತ ಹೆಚ್ಚು ಅನುಷ್ಠಾನಗೊಂಡಿವೆ. ಅದಕ್ಕಿರುವ ಕಾರಣಗಳು ಅನೇಕ. ಹಾಗಿದ್ದರೂ ಇಷ್ಟೊಂದು ಜನಸಂಖ್ಯೆಯಿರುವ ನಮ್ಮ ರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಯಾಕೆ ಅಷ್ಟೊಂದು ಕಡಿಮೆ? ಇನ್ನು
ಚಿಕಿತ್ಸೆಯ ದೃಷ್ಟಿಯಿಂದ ವೈದ್ಯಕಿಯ ಸೌಲಭ್ಯಗಳನ್ನು ಪರಿಗಣಿಸುವುದಾದರೆ ಭಾರತಕ್ಕಿಂತ ಎಷ್ಟೋ ಉನ್ನತ ದರ್ಜೆಯ ಸೌಕರ್ಯ, ತ ವೈದ್ಯರ ಹಾಗೂ ವೈದ್ಯಕಿಯ ಸಿಬ್ಬಂದಿ ಉಪಸ್ಥಿತಿ, ಸುವ್ಯವಸ್ಥಿತ ತಂತ್ರಜ್ಞಾನದ ಆಸ್ಪತ್ರೆಗಳು&ಹೀಗೆ ಎಲ್ಲವೂ ಮುಂದುವರಿದ ದೇಶಗಳಲ್ಲಿವೆ. ಹಾಗಿದ್ದೂ ಮರಣ ಪ್ರಮಾಣ ಯಾಕೆ ಭಾರತದಲ್ಲಿ ತೀರಾ ಕಡಿಮೆ?
ಏಕೆಂದರೆ ಭಾರತದಲ್ಲಿ ಸಮಗ್ರವಾಗಿ ಜನರೊಂದಿಗೆ ಬೆಸೆದಿರುವ ಆಯುರ್ವೇದವಿದೆ. ಚೀನಾದಲ್ಲಿ ಸಾಂಪ್ರದಾಯಿಕ ಚೈನೀಸ್ ಮೆಡಿಸಿನ್ ಇದೆ. ಇದುವೆ ಭಾರತ&ಚೀನಾ ಹಾಗೂ ಉಳಿದ ದೇಶಗಳಿರುವ ದೊಡ್ಡ ವ್ಯತ್ಯಾಸ. ಚೀನಾದಲ್ಲಿನ ಮಾಹಿತಿಗಳು ವಾಸ್ತವ ಅಲ್ಲದಿರಬಹುದು. ಆದರೆ ಭಾರತದಲ್ಲಂತೂ ಮೂರು ಮುಖ್ಯ ಅಂಶಗಳು ಈ ವ್ಯತ್ಯಾಸಕ್ಕೆ ಕಾರಣವಾಯಿತು. ಮೊದಲನೆಯದು ಭಾರತೀಯ ಆಹಾರ ಪದ್ಧತಿ, ಎರಡನೆಯದು ಭಾರತೀಯ ಆರೋಗ್ಯ ಪದ್ಧತಿ, ಮೂರನೆಯದು ಭಾರತೀಯ ಜೀವನ ಪದ್ಧತಿ!