ಈ ನೀರು ಅಮೃತಕ್ಕಿಂತ ಶಕ್ತಿಶಾಲಿ; ಪ್ರತಿದಿನ ಒಂದು ಲೋಟ ಕುಡಿದರೆ ನಿಮ್ಮ ದೇಹದಲ್ಲಿನ ಯಾವೆಲ್ಲಾ ಸಮಸ್ಯೆ ಮಾಯವಾಗುತ್ತವೆ ಗೊತ್ತಾ? barley

barly water
Published on

barley | ಬಾರ್ಲಿ ಅಥವಾ ಜವೆ ಗೋಧಿ ಪ್ರಪಂಚದಲ್ಲಿ ಪುರಾತನ ಕಾಲದಿಂದಲೂ ಬೆಳೆದುಕೊಂಡು ಬಂದಿರುವ ಅತಿ ಹಳೆಯ ಧಾನ್ಯ. ಬಾರ್ಲಿಯಲ್ಲಿ ಹಲವು ಪೋಷಕಾಂಶಗಳಿವೆ. ಹಾಗಾಗಿ ಬಾರ್ಲಿಗೆ ಗರಿಬೊಳ್ಳ ಸಂಜೀವನಿ ಎಂದು ಕರೆಯುತ್ತಾರೆ. ಆಯುರ್ವೇದದಲ್ಲಿ ಇದನ್ನು ಅದ್ಭುತ ಔಷಧವೆಂದು ಪರಿಗಣಿಸಲಾಗಿದೆ. ಬಾರ್ಲಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹಕ್ಕೆ ಅನೇಕ ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ದೇಹವನ್ನು ತಂಪಾಗಿಡುತ್ತದೆ. ಬಾರ್ಲಿ ನೀರು ಕುಡಿಯುವುದರಿಂದಾಗುವ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.

ವಿಶೇಷವಾಗಿ ಬೇಸಿಗೆಯ ತಿಂಗಳುಗಳಲ್ಲಿ ಬಾರ್ಲಿ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದು ದೇಹವನ್ನು ತಂಪಾಗಿಡುವುದಲ್ಲದೆ, ದೇಹದ ಆರೋಗ್ಯಕ್ಕೂ ಸಹಾಯ ಮಾಡುತ್ತದೆ. ಪ್ರತಿದಿನ ಬೆಳಗ್ಗೆ ಈ ಬಾರ್ಲಿ ಪಾನೀಯವನ್ನು ಕುಡಿಯುವುದರಿಂದ ಹಲವು ಪ್ರಯೋಜನವನ್ನು ಪಡೆಯಬಹುದು.

ಬಾರ್ಲಿ ನೀರಿನಿಂದಾಗುವ ಪ್ರಯೋಜನಗಳೇನು.?

ಮೂತ್ರಪಿಂಡಗಳು ಶುದ್ಧಿ: ಬಾರ್ಲಿ ನೀರು ಕುಡಿಯುವುದರಿಂದ ದೇಹದಿಂದ ಎಲ್ಲಾ ಹಾನಿಕಾರಕ ವಸ್ತುಗಳು ಹೊರಬರುತ್ತವೆ. ಇದು ಮೂತ್ರಪಿಂಡಗಳಲ್ಲಿ ಯಾವುದೇ ಹಾನಿಕಾರಕ ಪದಾರ್ಥಗಳು ಸಂಗ್ರಹವಾಗುವುದನ್ನು ತಡೆಯುತ್ತದೆ. ಇದು ಮೂತ್ರಪಿಂಡದ ಕಲ್ಲುಗಳು ಮತ್ತು ಸೋಂಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಬಾರ್ಲಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹವನ್ನು ವಿವಿಧ ಕಾಯಿಲೆಗಳಿಂದ ರಕ್ಷಿಸುತ್ತವೆ.

ತೂಕ ಇಳಿಕೆ: ತೂಕ ಇಳಿಸಿಕೊಳ್ಳಲು ಬೆಳಿಗ್ಗೆ ಮತ್ತು ಮಧ್ಯಾಹ್ನ ಜಿಮ್‌ಗೆ ಹೋಗುವವರು ಈಗ ನಿಯಮಿತವಾಗಿ ಬಾರ್ಲಿ ನೀರನ್ನು ಕುಡಿಯಬಹುದು. ಬಾರ್ಲಿಯು ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳನ್ನು ಹೀರಿಕೊಳ್ಳುತ್ತದೆ. ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆ ಸುಧಾರಣೆ : ಬಾರ್ಲಿ ನೀರು ಫೈಬರ್, ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳಿಂದ ತುಂಬಿರುತ್ತದೆ. ಗ್ಯಾಸ್ ಮತ್ತು ಎದೆಯುರಿಯಿಂದ ಬಳಲುತ್ತಿರುವ ಜನರು ಈ ಬಾರ್ಲಿ ನೀರನ್ನು ನಿಯಮಿತವಾಗಿ ಕುಡಿಯಬಹುದು. ಇದರಲ್ಲಿ ಫೈಬರ್ ಇರುತ್ತದೆ. ಇದು ಜೀರ್ಣಕ್ರಿಯೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಮಲಬದ್ಧತೆಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನಿರ್ಜಲೀಕರಣ ಸಮಸ್ಯೆ ನಿವಾರಣೆ: ಬೇಸಿಗೆಯಲ್ಲಿ ನಿರ್ಜಲೀಕರಣದ ಅಪಾಯ ಹೆಚ್ಚು. ಈ ಸಮಯದಲ್ಲಿ ಬಾರ್ಲಿ ನೀರನ್ನು ಕುಡಿಯುವುದರಿಂದ ನೀವು ಈ ಸಮಸ್ಯೆಯನ್ನು ತಪ್ಪಿಸಬಹುದು. ಜೊತೆಗೆ ಈ ಪಾನೀಯವು ಬಿಸಿ ವಾತಾವರಣದಲ್ಲಿಯೂ ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ಜೊತೆಗೆ ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿರುವವರೂ ಸಹ ಈ ನೀರನ್ನು ಕುಡಿಯಬಹುದು ಎಂದು ಹೇಳಲಾಗಿದೆ.

ಯಾವ ಸಮಯದಲ್ಲಿ ಕುಡಿಯಬೇಕು?

(ಏಜೆನ್ಸೀಸ್)

ಬಾರ್ಲಿ ನೀರನ್ನು ಕುಡಿಯಲು ನಿಮಗೆ ಇಂತಹದೇ ಸಮಯ ಎಂಬ ಅಡೆತಡೆ ಇಲ್ಲ. ದಿನದಲ್ಲಿ ಯಾವಾಗ ಬೇಕಾದರೂ ನೀವು ಇಷ್ಟಪಟ್ಟು ಬಾರ್ಲಿ ನೀರನ್ನು ಕುಡಿಯಬಹುದು. ಬೆಳಗಿನ ಉಪಹಾರದ ಮುಂಚೆ ಬಾರ್ಲಿ ನೀರನ್ನು ಕುಡಿಯುವುದರಿಂದ ಅದರಲ್ಲಿರುವ ಪೌಷ್ಟಿಕ ಸತ್ವಗಳು ನಿಮ್ಮ ದೇಹವನ್ನು ಬಹಳ ಬೇಗನೆ ಸೇರಿ ನಿಮ್ಮ ಆರೋಗ್ಯವನ್ನು ವೃದ್ಧಿಗೊಳಿಸುತ್ತದೆ. ಮಧ್ಯಾಹ್ನದ ಊಟದ ಸಮಯದಲ್ಲಿ ಬಾರ್ಲಿ ನೀರನ್ನು ಸೂಪ್ ರೀತಿಯಲ್ಲಿ ತಯಾರಿಸಿಕೊಂಡು ಕೂಡ ಕುಡಿಯಬಹುದು. ಮತ್ತು ನೀವು ಬಾರ್ಲಿ ಕಾಳುಗಳನ್ನು ಬೇಕಾದರೂ ನುಣ್ಣಗೆ ಬೇಯಿಸಿಕೊಂಡು ತಿಂದರೂ ಸಹ ನಿಮ್ಮ ಹೊಟ್ಟೆಯ ಹಸಿವು ಬಹುಬೇಗನೆ ನಿವಾರಣೆಯಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net