ಚರ್ಮದ ಸೌಂದರ್ಯ ಹೊಳೆಯಲು ಈ ಮಸಾಜ್ ಟಿಪ್ಸ್!| Beauty tips

Beauty Tips
Published on

Beauty tips : ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ತಾವು ಅಂದವಾಗಿರಲು ಮತ್ತು ತ್ವಚೆಯನ್ನು ಕಾಯ್ದುಕೊಳ್ಳಲು ಹಲವಾರು ರೀತಿಯ ಚಿಕಿತ್ಸೆಗಾಗಿ ಮೊರೆ ಹೋಗುತ್ತಿದ್ದಾರೆ. ಅಂದಹಾಗೆ, ಈ ಆರೈಕೆಯಲ್ಲಿ ರಕ್ತ ಸಂಚಾರವನ್ನು ಸುಧಾರಿಸಲು ತ್ವಚೆಯ ಆರೋಗ್ಯಕರ ವಿಧಾನವು ಸಹಾಯ ಮಾಡುತ್ತದೆ. ಹಾಗೆಯೇ ನೀವು ಅಂದವನ್ನು ಹೆಚ್ಚಿಸಲು ಈ ರೀತಿಯ ಮಸಾಜ್​ಗಳನ್ನು ಮಾಡಿ. ಇದು ನಿಮ್ಮ ಆಯಾಸವನ್ನು ಕಡಿಮೆ ಮಾಡಿ ಸುಂದರವಾಗಿ ಕಾಣುವಂತೆ ಮಾಡುತ್ತದೆ.

1. ಮುಖದ ಸುತ್ತ ಮಸಾಜ್​ ಮಾಡಿ

ಸರ್ಕ್ಯುಲರ್ ಫೇಶಿಯಲ್ ಮಸಾಜ್ ಒಂದು ಸರಳ ಮತ್ತು ಪರಿಣಾಮಕಾರಿ ತಂತ್ರವಾಗಿದ್ದು, ಇದು ಮುಖದ ರಕ್ತ ಸಂಚಾರವನ್ನು ಸುಧಾರಿಸಿ, ಚರ್ಮವನ್ನು ಆರೋಗ್ಯವಾಗಿರುವಂತೆ ಸಹಾಯ ಮಾಡುತ್ತದೆ. ಮೊದಲು ಮುಖಬವನ್ನು ಚೆನ್ನಾಗಿ ತೊಳೆದು ಒರೆಸಿಕೊಂಡು ಬಬಾಮಿ ಎಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ನಂತರ, ನಿಮ್ಮ ಮುಖದ ಮಧ್ಯಭಾಗದಿಂದ ಮುಖದ ಸುತ್ತಲೂ 5 ನಿಮಿಷ ಮಸಾಜ್​ ಮಾಡಿ. ಇದು ರಕ್ತ ಸಂಚಾರವನ್ನು ಸುಗಮಗೊಳಿಸಿ, ಚರ್ಮವನ್ನು ತಾಜತನದಿಂದ ಇರುವಂತೆ ಮಾಡುತ್ತದೆ.

2. ಜಾವ್‌ಲೈನ್ ಮಸಾಜ್​

ಜಾವ್‌ಲೈನ್ ಮಸಾಜ್ ಮುಖದ ಆಕಾರವನ್ನು ಸುಧಾರಿಸಿ, ಸಡಿಲತೆಯನ್ನು ಕಡಿಮೆ ಮಾಡುತ್ತದೆ. ಒಲಿವ್ ಎಣ್ಣೆಯನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಎರಡೂ ಕೈಗಳಿಂದ ಚೀಕ್​​ಬೋನ್​ನ್ನು ಎರಡೂ ಕೈಗಳಿಂದ ಸೌಮ್ಯವಾಗಿ 5 -7 ನಿಮಿಷಗಳಷ್ಟು ಒತ್ತಿ ಮಸಾಜ್​ ಮಾಡಿ. ತಣ್ಣಿರಿನಂದ ಮುಖವನ್ನು ತೊಳೆಯಿರಿ. ಇದರಿಂದ ನಿಮ್ಮ ಮುಖವು ಅಂದವಾಗಿ ಕಾಣುವಂತೆ ಮಾಡುತ್ತದೆ.

3. ಕಣ್ಣಿನ ಭಾಗದಲ್ಲಿ ಮಸಾಜ್​

ಮುಖವನ್ನು ತೊಳೆದು ನಂತರ ಮುಖದ ಸುತ್ತಲೂ ಎಣ್ಣೆಯನ್ನು ಹಚ್ಚಿರಿ. ನಂತರ ಕಣ್ಣಿನ ಕೆಳಭಾಗದಲ್ಲಿರುವ ಮೂಲೆಗಳನ್ನು ಚೆನ್ನಾಗಿ ಮಸಾಜ್​ ಮಾಡಿ.ನಂತರ ನಿಧಾನಕ್ಕೆ ಒತ್ತಿರಿ. ಇದು ಸಂಕುಚಿತಗೊಂಡ ಕಣ್ಣಿನ ಕೆಳಗಿನ ಪದರಗಳನ್ನು ಆರಾಮದಾಯಕವಾಗಿರುವಂತೆ ಮಾಡುತ್ತವೆ.

4. ಹಣೆಯ ಮೇಲೆ ಮಸಾಜ್​

ಮೊದಲು ಮುಖವನ್ನು ತಣ್ಣಿರಿನಲ್ಲಿ ತೊಳೆದು ಒರೆಸಿಕೊಂಡ ನಂತರ, ಬಾದಾಮಿ ಎಣ್ಣೆ ಅಥವಾ ನಿಮಗೆ ಬೇಕಾದ ಎಣ್ಣೆಯನ್ನು ಹಚ್ಚಿ 5 ನಿಮಿಷಗಳ ಕಾಲ ಹಣೆಯ ಮೇಲೆ ಮಸಾಜ್​ ಮಾಡಿ. ಇದು ತಲೆನೋವನ್ನು ಒತ್ತಡವನ್ನು ಕಡಿಮೆ ಮಾಡಿ ಅಂದವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಒಟ್ಟಾರೆಯಾಗಿ ಮಸಾಜ್‌ಗಳು ಸಹಜವಾಗಿ ಮುಖದ ಅಂದವನ್ನು ಹೆಚ್ಚಿಸಿ, ಚರ್ಮವನ್ನು ತಾಜಾಗಿ ಇರಿಸುತ್ತವೆ. ಹಾಗೆಯೇ ಇದು ಚರ್ಮದ ಆರೋಗ್ಯ ಮತ್ತು ಸೌಂದರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net