ಮೂಳೆಗಳನ್ನು ಬಲಪಡಿಸಲು ಬೇಕಾದ ಕ್ಯಾಲ್ಸಿಯಂ ಪಡೆಯಲು ಈ ಟೇಸ್ಟಿ ಆಯ್ಕೆ ನಿಮ್ಮದಾಗಿರಲಿ

Untitled-design-31
Published on

ದೇಹವನ್ನು ಆರೋಗ್ಯಕರವಾಗಿ ಮತ್ತು ಸದೃಢವಾಗಿಡಲು ಪ್ರೋಟೀನ್ ಮತ್ತು ಇತರ ಪೋಷಕಾಂಶಗಳ ಅವಶ್ಯಕತೆ ಎಷ್ಟಿದೆಯೋ ಅಷ್ಟೇ ಕ್ಯಾಲ್ಸಿಯಂ ಸಹ ಅಗತ್ಯವಿದೆ. ಕ್ಯಾಲ್ಸಿಯಂ ಒಂದು ಖನಿಜವಾಗಿದ್ದು ಅದು ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ಇದಷ್ಟೇ ಅಲ್ಲದೆ ಕ್ಯಾಲ್ಸಿಯಂ ರಕ್ತ ಹೆಪ್ಪುಗಟ್ಟುವಿಕೆಯ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಕ್ಯಾಲ್ಸಿಯಂ ಸೇವನೆಯು ಅಧಿಕ ಬಿಪಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗಾದ್ರೆ ಕ್ಯಾಲ್ಸಿಯಂ ಅನ್ನು ಪಡೆಯುವ ಮಾರ್ಗ ಹೇಗೆ? ಇಲ್ಲಿದೆ ಮಾಹಿತಿ

  • ಒಣಗಿದ ಅಂಜೂರದ ಹಣ್ಣುಗಳು ಸುಮಾರು 65 ಮಿಗ್ರಾಂ ಕ್ಯಾಲ್ಸಿಯಂ ಅನ್ನು ಹೊಂದಿರುತ್ತವೆ. ನೀವು ಅವುಗಳನ್ನು ಸ್ಮೂಥಿಗಳಲ್ಲಿ ಬೆರೆಸಿ ತಿನ್ನಬಹುದು.
  • ಹಸುವಿನ ಹಾಲನ್ನು ಕ್ಯಾಲ್ಸಿಯಂನ ಉತ್ತಮ ಮೂಲವೆಂದು ಭಾವಿಸುತ್ತೀರಿ. ಆದರೆ ಬಾದಾಮಿ, ಅಕ್ಕಿ ಅಥವಾ ಸೋಯಾದಿಂದ ಮಾಡಿದ ಹಾಲು ಬಲವರ್ಧಿತವಾಗಿದೆ.
  • ಅರ್ಧ ಕಪ್ ಬಾದಾಮಿಯಲ್ಲಿ 190 ಮಿಗ್ರಾಂ ಕ್ಯಾಲ್ಸಿಯಂ ಇದ್ದರೆ, 2 ಚಮಚ ಬಾದಾಮಿ ಬೆಣ್ಣೆಯಲ್ಲಿ 111 ಮಿಗ್ರಾಂ ಕ್ಯಾಲ್ಸಿಯಂ ಇರುತ್ತದೆ. ಇದು ಪ್ರೋಟೀನ್‌ನ ಪ್ರಬಲ ಮೂಲವೂ ಆಗಿದೆ.
  • ಕಿತ್ತಳೆ ರಸವನ್ನು ಕುಡಿಯುವುದು ನಿಮ್ಮ ಕ್ಯಾಲ್ಸಿಯಂ ಅಗತ್ಯಗಳನ್ನು ಪೂರೈಸಲು ಇರುವ ಮತ್ತೊಂದು ಆಯ್ಕೆಯಾಗಿದೆ. 1 ಕಪ್ ಕಿತ್ತಳೆ ರಸವು 347 ಮಿಗ್ರಾಂ ಕ್ಯಾಲ್ಸಿಯಂ ಅನ್ನು ಹೊಂದಿದೆ.
  • ಹಾಲಿನಂತೆ ಮೊಸರು ಕೂಡ ಅತ್ಯುತ್ತಮ ಕ್ಯಾಲ್ಸಿಯಂ ಮೂಲವಾಗಿದೆ. ಮೊಸರಿನೊಂದಿಗೆ ಹಣ್ಣುಗಳನ್ನು ಸೇರಿಸಿ ತಿನ್ನುವುದರಿಂದ 434 ಮಿಗ್ರಾಂ ಕ್ಯಾಲ್ಸಿಯಂ ಸುಲಭವಾಗಿ ಪಡೆದುಕೊಳ್ಳಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net