

ಪ್ರತಿಯೊಬ್ಬರಿಗೂ ಫಿಟ್ನೆಸ್ ಮತ್ತು ಆರೋಗ್ಯದ ಬಗ್ಗೆ ಬಹಳ ಕಾಳಜಿ ಇರುತ್ತದೆ. ತೂಕವನ್ನು ನಿಯಂತ್ರಣದಲ್ಲಿಡಲು ಹರಸಾಹಸ ಪಡುವುದನ್ನು ನಾವು ನೋಡುತ್ತೇವೆ. ತಮ್ಮ ದೇಹವನ್ನು ಸದೃಢವಾಗಿಡಲು ಒಂದಲ್ಲ ಒಂದು ಪ್ರಯತ್ನ ಮಾಡುತ್ತಿರುತ್ತಾರೆ. ಅದಕ್ಕಾಗಿಯೇ ನಮ್ಮ ದೈನಂದಿನ ಜೀವನದಲ್ಲಿ ಜಿಮ್, ವಾಕ್, ಮನೆಯಲ್ಲಿ ವ್ಯಾಯಾಮ,ಯೋಗ ಹೀಗೆ ಹಲವು ಅಭ್ಯಾಸಗಳನ್ನು ಫಾಲೋ ಮಾಡುತ್ತೇವೆ. ದೈಹಿಕವಾಗಿ ಮಾತ್ರವಲ್ಲ ಹೊಟ್ಟೆಯನ್ನು ಕಟ್ಟುತ್ತಾರೆ. ಅಂದರೆ ತಿನ್ನಲು ಆಸೆಯಿದ್ದರೂ ಡಯಟ್ ಮಾಡುವುದರಿಂದ ಎಲ್ಲಾ ತಿನಿಸುಗಳಿಗೂ ಬ್ರೇಕ್ ಹಾಕುತ್ತಾರೆ.
ಆದ್ರೆ ತೂಕ ಇಳಿಸಿಕೊಳ್ಳು ಈ ಎಲ್ಲವನ್ನು ಅನುಸರಿಸಬೇಕು ಎಂಬುದೇನು ಇಲ್ಲ. ನಾವು ಮಾಡುವ ಕೆಲಸವನ್ನೆ ಸರಿಯಾಗಿ ಅನುಸರಿಸಿದರೆ ಉತ್ತಮ ಫಲಿತಾಂಶ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ನೀವು ದಿನನಿತ್ಯ ಮಾಡುವ ವ್ಯಾಯಾಮದಲ್ಲಿ ಕೆಲವು ತಪ್ಪುಗಳಿರುತ್ತವೆ. ಅದನ್ನು ತಪ್ಪಿಸಿದ್ರೆ ಸಾಕು ನಿಮ್ಮ ಹೆಲ್ತಿ ಲೈಫ್ ಜತೆಗೆ ಫಿಟ್ನೆಸ್ ಕೂಡ ಇರುತ್ತೆ. ನಾವು ಮಾಡುವ ಸಾಧಾರಣ ತಪ್ಪುಗಳು ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.