

ಮೈಗ್ರೇನ್ ಮೆದುಳಿಗೆ ಸಂಬಂಧಿಸಿದ ಸಮಸ್ಯೆಯಾಗಿದೆ. ಈ ನೋವಿನಿಂದ ಬಳಲುವ ಜನರು ತಮ್ಮ ತಲೆಯ ಒಂದು ಭಾಗದಲ್ಲಿ ತೀವ್ರ ನೋವನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ಅನೇಕ ಸಮಯದಲ್ಲಿ ತಲೆನೋವಿನ ಜತೆಗೆ ವಾಕರಿಕೆ, ವಾಂತಿ, ಅತಿಸಾರದ ಸಮಸ್ಯೆಯು ಎದುರಾಗುತ್ತದೆ. ಇದು ದೈನಂದಿನ ಜೀವನಶೈಲಿಗೂ ಪ್ರತಿಕೂಲ ಪರಿಣಾಮ ಬೀರುತ್ತದೆ. ಮೈಗ್ರೇನ್ ಬರುವ ಮುನ್ನ ನಮಗೆ ಕೆಲವು ಮುನ್ಸೂಚನೆಯೂ ಸಿಗುತ್ತದೆ. ಅದನ್ನು ತಿಳಿದು ವೈದ್ಯರನ್ನು ಸಂಪರ್ಕಿಸಿದರೆ ಪರಿಹಾರ ಬೇಗ ಸಿಗುತ್ತದೆ. ಹಾಗಾದ್ರೆ ನಮ್ಮಲ್ಲಾಗುವ ಯಾವೆಲ್ಲಾ ಬದಲಾವಣೆಗಳು ಮೈಗ್ರೇನ್ ಅನ್ನು ಸೂಚಿಸುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಮೈಗ್ರೇನ್ ಬರಲು ನಿಖರವಾದ ಕಾರಣವನ್ನು ಸಂಶೋಧಕರು ಇನ್ನೂ ಖಚಿತವಾಗಿ ತಿಳಿಸಿಲ್ಲ. ನಿಮ್ಮ ರಕ್ತನಾಳಗಳಲ್ಲಿನ ನಿರ್ದಿಷ್ಟ ನರಗಳು ನಿಮ್ಮ ಮೆದುಳಿಗೆ ನೋವಿನ ಸಂಕೇತ ಕಳುಹಿಸುತ್ತವೆ . ಇದು ನಿಮ್ಮ ತಲೆಯ ನರಗಳು ಮತ್ತು ರಕ್ತನಾಳಗಳಲ್ಲಿ ಉರಿಯೂತದ ವಸ್ತುಗಳನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಮೈಗ್ರೇನ್ ಬರುತ್ತದೆ ಎನ್ನಲಾಗಿದೆ.