ರಸಪುರಿ, ಬಾದಾಮಿ, ಮಲಗೋವ, ಅಲ್ಫೋನ್ಸೋ, ಕೇಸರ್, ದಶೆಹರಿ ಮತ್ತು ಬಂಗನಪಲ್ಲಿ ಮಾವುಗಳು ಭಾರತೀಯ ಮಾರುಕಟ್ಟೆಗಳಲ್ಲಿ ಹೆಚ್ಚಾಗಿ ಮಾರಾಟವಾಗುವ ರುಚಿ ಭರಿತ ಹಣ್ಣುಗಳು. ಈ ಹಣ್ಣುಗಳನ್ನು ಸವಿಯುವ ಧಾವಂತದಲ್ಲಿ ಮಾರುಕಟ್ಟೆಗೂ ಮುಗಿಬೀಳುವ ನಮ್ಮ ಜನ, ಕೆಮಿಕಲ್ನಿಂದ ಸಿಂಪಡಿಸಿದ ಮಾವುಗಳನ್ನೇ ಅಸಲಿ ಎಂದು ತಪ್ಪಾಗಿ ಭಾವಿಸಿ ತಿನ್ನುತ್ತಾರೆ. ನೈಸರ್ಗಿಕವಾಗಿ ಹಣ್ಣಾದ ಮಾವಿಗಿಂತ ಕೆಮಿಕಲ್ ಬಳಕೆಯ ಫ್ರೂಟ್ಗಳನ್ನೇ ಲಾಭದ ಆಸೆಗೆ ಜನರಿಗೆ ತಿನ್ನಿಸುವ ಪ್ರವೃತ್ತಿಯನ್ನು ಮಾರಾಟಗಾರರು ರೂಢಿಸಿಕೊಂಡಿರುವುದು ದುರಂತವೇ ಸರಿ.