ರಕ್ತನಾಳ ಆರೋಗ್ಯವಾಗಿದ್ದರೆ ಹೃದಯ ಸೇಫ್​​​; ನಿಮ್ಮ ಆಹಾರದಲ್ಲಿ ಈ ಪದಾರ್ಥಗಳು ಇರಲಿ

Untitled-design-2024-07-27T193258.308
Published on

ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿ ಹಾಗೂ ಆಹಾರಪದ್ಧತಿ ಅನೇಕ ಸಮಸ್ಯೆಗಳನ್ನುಉಂಟುಮಾಡುತ್ತಿವೆ. ಅದರಲ್ಲಿ ಹೃದಯಾಘಾತದಂತಹ ಗಂಭೀರ ಕಾಯಿಲೆ ಹೆಚ್ಚಾಗುತ್ತಿದೆ. ಹೃದಯವನ್ನು ಆರೋಗ್ಯವಾಗಿಡುವುದು ಬಹಳ ಮುಖ್ಯ. ರಕ್ತನಾಳಗಳಲ್ಲಿ ಹೆಚ್ಚುವರಿ ಕೊಬ್ಬು ಸಂಗ್ರಹಗೊಳ್ಳದಂತೆ ನೋಡಿಕೊಳ್ಳಬೇಕು. ಏಕೆಂದರೆ ರಕ್ತನಾಳದಲ್ಲಿ ಕೊಬ್ಬ ಸಂಗ್ರಹವಾದಂತೆ ರಕ್ತದ ಹರಿವು ಕಡಿಮೆಯಾಗುತ್ತದೆ. ಇದರಿಂದ ರಕ್ತದೊತ್ತಡ ಹೆಚ್ಚಾಗಲು ಪ್ರಾರಂಭವಾಗಿ, ಹೃದಯದ ಕಾರ್ಯವು ಹದಗೆಡುತ್ತದೆ. ಈ ಸಮಸ್ಯೆಗಳನ್ನು ತಪ್ಪಿಸಲು ಇಲ್ಲಿ ತಿಳಿಸಿರುವ ಆಹಾರಗಳನ್ನು ಸೇವಿಸಿ. ರಕ್ತನಾಳದಲ್ಲಿ ಕೊಬ್ಬು ಸಂಗ್ರಹವಾಗದಂತೆ ಹೃದಯದ ಆರೋಗ್ಯವನ್ನು ಸದೃಢವಾಗಿಡಲು ಸಹಾಯ ಮಾಡುವಂತಹ ಆಹಾರದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಬೆಳ್ಳುಳ್ಳಿ: ಇದು ನಮ್ಮ ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಇದು ಆರ್ಗೋಸಲ್ಫರ್ ಸಂಯುಕ್ತದಲ್ಲಿ ಸಮೃದ್ಧವಾಗಿದೆ. ಇದು ಕೊಲೆಸ್ಟ್ರಾಲ್, ಉರಿಯೂತ ಮತ್ತು ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರೊಂದಿಗೆ ರಕ್ತನಾಳಗಳಲ್ಲಿ ಸಂಗ್ರಹವಾದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಓಟ್ಸ್: ಓಟ್ಸ್ ಎಲ್‌ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ಪ್ರಕಾರ, ಓಟ್ಸ್‌ನಲ್ಲಿ ಸಮೃದ್ಧವಾಗಿರುವ ಆಹಾರವು ಒಟ್ಟು ಕೊಲೆಸ್ಟ್ರಾಲ್ ಅನ್ನು ಸುಮಾರು 6.5 ಅಂಕಗಳಿಂದ ಕಡಿಮೆ ಮಾಡುತ್ತದೆ.

ವಾಲ್ನಟ್ : ವಾಲ್ನಟ್​​ ಅನ್ನು ಮೆದುಳಿಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದು ಆರೋಗ್ಯಕರ ಕೊಬ್ಬು, ಫೈಬರ್ ಮತ್ತು ಪ್ರೋಟೀನ್ ಅನ್ನು ಹೊಂದಿರುತ್ತದೆ. ಈ ಎಲ್ಲಾ ಅಂಶಗಳು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯಕವಾಗಿವೆ.

ಟೊಮೆಟೊ: ಲೈಕೋಪೀನ್ ಸಮೃದ್ಧವಾಗಿರುವ ಟೊಮೆಟೊಗಳು ದೇಹಕ್ಕೆ ಉತ್ತಮ ಕೊಲೆಸ್ಟ್ರಾಲ್ ಅನ್ನು ಒದಗಿಸುತ್ತವೆ. ಇದು ಮುಚ್ಚಿಹೋಗಿರುವ ರಕ್ತನಾಳಗಳನ್ನು ತೆರೆಯಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ಒಂದು ಟೊಮೇಟೊ ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಯನ್ನು ತಡೆಯಬಹುದು.

ಅರಿಶಿನ: ಅರಿಶಿನದಲ್ಲಿರುವ ಕರ್ಕ್ಯುಮಿನ್ ಎಂಬ ಪೋಷಕಾಂಶವು ಉರಿಯೂತದ ಅಂಶವಾಗಿದೆ. ಇದು ರಕ್ತನಾಳಗಳ ಊತ ಮತ್ತು ಗಟ್ಟಿಯಾಗುತ್ತಿರುವಾಗ ನಮ್ಮ ದೇಹವನ್ನು ಮತ್ತೆ ಸಾಮಾನ್ಯಗೊಳಿಸಲು ಕೆಲಸ ಮಾಡುತ್ತದೆ.

ಬಾದಾಮಿ: ಎಲ್​​ಡಿಎಲ್ ಕೊಲೆಸ್ಟ್ರಾಲ್ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಬಾದಾಮಿ ಪರಿಣಾಮಕಾರಿಯಾಗಿದೆ. ಇದರಿಂದಾಗಿ ಹೃದಯವು ಹೆಚ್ಚು ಆರೋಗ್ಯಕರವಾಗಿರುತ್ತದೆ ಮತ್ತು ರಕ್ತನಾಳಗಳಲ್ಲಿ ಯಾವುದೇ ಅಡೆತಡೆಯಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net