

Ex-Girlfriend: ನೀವು ಎಂದಾದರೂ ನಿಮ್ಮ ಹಳೆ ಪ್ರೇಯಸಿಯ ಬಗ್ಗೆ ಇದ್ದಕ್ಕಿದ್ದಂತೆ ಯೋಚಿಸಿದ್ದೀರಾ ಅಥವಾ ಅವರ ಬಗ್ಗೆ ಕನಸು ಕಂಡಿದ್ದೀರಾ, ನೀವು ಬೇರೆಡೆಗೆ ಹೋಗಿದ್ದೀರಿ ಎಂದು ಭಾವಿಸಿದ್ದೀರಾ? ಇದು ಗೊಂದಲ ಕೂಡಿರಬಹುದು. ಆದರೆ, ನಿಮ್ಮನ್ನು ದೋಷಿಸಿಕೊಳ್ಳಬೇಡಿ. ನಿಮ್ಮ ಗೆಳತಿ ನಿಮ್ಮ ಮನಸ್ಸಿನಲ್ಲಿ ಇನ್ನೂ ಉಳಿದುಕೊಂಡಿರುವುದಕ್ಕೆ ಕೆಲವು ಮಾನಸಿಕ ಕಾರಣಗಳಿವೆ.
ಮನುಷ್ಯರಾದ ನಾವು ನಮ್ಮ ಜತೆ ಬೇರೆಯುವ ಹಾಗೂ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರ ಜತೆಗೆ ಇರಲು ಬಯಸುತ್ತೇವೆ. ಅದರಿಂದ ನಮ್ಮ ಮನಸ್ಸು ನಾವು ಇಷ್ಟಪಡುವ ಜನರೊಂದಿಗೆ ಇರಲು ಇಚ್ಛಿಸುತ್ತದೆ. ಹಾಗಾಗಿ ನೀವು ಹತ್ತಿರವಾಗಿದ್ದವರು ಇದ್ದಕ್ಕಿದ್ದಂತೆ ನಿಮ್ಮ ಗೆಳತಿ ಆಥವಾ ಗೆಳೆಯ ದೂರವಾದರೆ ಮೆದುಳು ಸದಾ ಅವರನ್ನು ನೆನಪಿಸಿಕೊಳ್ಳುತ್ತದೆ.
ಬ್ರೇಕ್ ಆಪ್ ಆದರೆ ಒಬ್ಬ ವ್ಯಕ್ತಿಯನ್ನು ಕಳೆದುಕೊಳುವುದು ಎಂದಲ್ಲ. ಅವರು ನಿಮ್ಮೊಂದಿಗೆ ಕಳೆದ ಕ್ಷಣಗಳು, ನಿಮ್ಮ ಜತೆ ಮಾತನಾಡಿದ ರೀತಿ, ಹಸ್ಯಾಸ್ಪದವಾದ ಸಂಭಷಣೆಗಳು ಮತ್ತು ದಿನನಿತ್ಯದ ಮಾತುಕತೆಯನ್ನು ಬಿಟ್ಟು ಬಿಡುವುದು ಎಂದರ್ಥ. ನಿಮ್ಮ ಮಾಜಿ ಸಂಗಾತಿಯನ್ನು ಕಳೆದುಕೊಂಡರೆ ನೀವು ನಿಮ್ಮ ಜೀವನದ ಆ ಭಾಗವನ್ನು ದುಃಖಿಸುತ್ತಿದ್ದೀರಿ ಎಂದರ್ಥ.
ಪ್ರೀತಿಯಲ್ಲಿ ಬೀಳುವುದರಿಂದ ನಿಮ್ಮ ಮೆದುಳಿನಲ್ಲಿ ಡೋಪಮೈನ್, ಸಿರೊಟೋನಿನ್ ಮತ್ತು ಆಕ್ಸಿಟೋಸಿನ್‌ನಂತಹ ಸಂತೋಷ ರಾಸಾಯನಿಕ ಅಂಶಗಳು ಬಿಡುಗಡೆಯಾಗುತ್ತವೆ. ಈ ರಾಸಾಯನಿಕಗಳು ನಿಮ್ಮನ್ನು ಉತ್ಸುಕ, ಸುರಕ್ಷಿತ ಮತ್ತು ಸಂತೋಷದಾಯಕ ಭಾವನೆಯನ್ನು ಉಂಟುಮಾಡುತ್ತವೆ. ಬ್ರೇಕ್ ಆಪ್ ಆದ ನಂತರ ನಿಮ್ಮ ಮೆದುಳು ಆ ವ್ಯಕ್ತಿಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿರುತ್ತದೆ. ಆ ವ್ಯಕ್ತಿಯ ಭಾವನೆಗಳಿಗೆ ಹಂಬಲಿಸಬಹುದು.
ನಿಮ್ಮ ಸಂಬಂಧವು ಮುಕ್ತಾಯ ಅಥವಾ ಸರಿಯಾದ ಸಂವಹನವಿಲ್ಲದೆ ಕೊನೆಗೊಂಡಿದ್ದರೂ ಸಹ ನಿಮ್ಮ ಮನಸ್ಸು ಇನ್ನೂ ಉತ್ತರಗಳನ್ನು ಹುಡುಕುತ್ತಿರುತ್ತದೆ. ನಿಮಗೆ ಅರಿವಿಲ್ಲದಯೇ, ನಿಮಗೆ ಅಪರಾಧಿ ಭಾವನೆ, ದುಃಖ, ವಿಷಾದವನ್ನು ಅನುಭವಿಸಬಹುದು. ಈ ಬಗೆಹರಿಯದ ಭಾವನೆಗಳು ನಿಮ್ಮ ಮಾಜಿ ಸಂಗಾತಿಯನ್ನು ನಿಮ್ಮ ಮನಸ್ಸಿನಲ್ಲಿಯೇ ಶಾಶ್ವತವಾಗಿ ಇರಿಸಬಹುದು.
ಕೆಲವು ಸಂದರ್ಭಗಳಲ್ಲಿ, ಜನರು ಪ್ರೀತಿಯಲ್ಲಿ ತಮ್ಮನ್ನು ತಾವು ಕಳೆದುಕೊಳ್ಳುತ್ತಾರೆ. ನೀವು, ನಿಮ್ಮ ಮಾಜಿ ಗೆಳತಿಯ ಜೊತೆ ತುಂಬಾ ಬಂಧಿತವಾಗಿದ್ದರೆ, ಆ ಘಟನೆಗಳು ನಿಮ್ಮನ್ನು ಪದೇಪದೆ ಗೊಂದಲಕ್ಕಿಡು ಮಾಡುತ್ತವೆ. ಇದು ನೀವು ಬೇರೆಯವರಿಂದ ಸ್ವತಂತ್ರವಾಗಿ ಬದುಕು ಪ್ರಾರಂಭಿಸುವ ಸಂಕೇತವಾಗಿದೆ.
ನಿಮ್ಮ ಮೇಲೆ ಕೇಂದ್ರೀಕರಿಸುವ ಬದಲು ಅವರ ಬಗ್ಗೆ ಯೋಚಿಸುವುದರಲ್ಲಿ ನೀವು ಹೆಚ್ಚು ಸಮಯ ಕಳೆಯುತ್ತಿದ್ದೀರಾ? ನಿಮ್ಮ ಸ್ವಂತ ಗುರಿಗಳು, ಸ್ನೇಹ ಅಥವಾ ಹವ್ಯಾಸಗಳನ್ನು ನೀವು ನಿರ್ಲಕ್ಷಿಸುತ್ತಿದ್ದರೆ, ಅದು ವೈಯಕ್ತಿಕ ಬೆಳವಣಿಗೆಯನ್ನು ತಪ್ಪಿಸುವ ಒಂದು ಮಾರ್ಗವಾಗಿರಬಹುದು. ಆ ಘಟನೆಗಳು ನೋವಿನಿಂದ ಕೂಡಿರಬಹುದು, ಆದರೆ ಅವು ನೀವು ಯಾರೆಂದು ಮರುಶೋಧಿಸಲು ಒಂದು ಅವಕಾಶವೂ ಕೊಡುತ್ತದೆ.