ವಯಸ್ಸಾದಂತೆ ಈ ಹಣ್ಣುಗಳನ್ನು ತಿನ್ನಬೇಡಿ! ಇವು ನಿಮ್ಮ ದೇಹದಲ್ಲಿ ವಿಷಕಾರಿಯಾಗುತ್ತವೆ..Old people

fruits
Published on

Old people: ಯಾವುದೇ ವ್ಯಕ್ತಿಯು ಆರೋಗ್ಯವಾಗಿರಲು ದಿನನಿತ್ಯ ಒಳ್ಳೆಯ ಆಹಾರ, ವ್ಯಾಯಾಮ ಸಾಕಷ್ಟು ನಿದ್ರೆಯನ್ನು ಮಾಡಬೇಕಾಗುತ್ತದೆ. ಇದನ್ನೆಲ್ಲವನ್ನೂ ಪ್ರತಿನಿತ್ಯ ಪಾಲಿಸಿದರೂ ಅನೇಕ ಜನರು ಆಯಾಸ, ಕಾಲುಗಳಲ್ಲಿ ನೋವು, ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆಯಂತಹ ಸಮಸ್ಯೆಗಳನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ಇದು ವಯಸ್ಸಿಗೆ ಸಂಬಂಧಿಸಿದ ತೊಂದರೆ ಎಂದು ನಾವು ಭಾವಿಸುತ್ತೇವೆ. ಆದರೆ, ನಾವು ದಿನನಿತ್ಯ ಸೇವಿಸುವ ಕೆಲವೊಂದು ಆಹಾರಗಳು ವಯಸ್ಸಾದಂತೆ ಕ್ರಮೇಣ ವಿಷವಾಗಲು ಪ್ರಾರಂಭಿಸಿ ಅವುಗಳಿಂದ ನಮ್ಮ ದೇಹದಲ್ಲಿ ತೊಂದರೆ ಅನುಭವಿಸುವಂತೆ ಮಾಡುತ್ತದೆ.

ಅಧ್ಯಾಯಗಳ ಪ್ರಕಾರ, ವಯಸ್ಸಾದಂತೆ ಇನ್ಸುಲಿನ್‌ಗೆ ದೇಹದ ಸೂಕ್ಷ್ಮತೆ ಕಡಿಮೆಯಾಗುತ್ತದೆ. ರಕ್ತ ಪರಿಚಲನೆ ನಿಧಾನವಾಗುತ್ತದೆ ಮತ್ತು ಚಯಾಪಚಯ ಕ್ರಿಯೆಯು ಮೊದಲಿನಷ್ಟು ವೇಗವಾಗಿ ನಡೆಯುವುದಿಲ್ಲ. ಅಂತಹ ಸಮಯದಲ್ಲಿ, ತುಂಬಾ ಸಿಹಿಯಾಗಿರುವ, ತುಂಬಾ ಆಮ್ಲೀಯವಾಗಿರುವ ಅಥವಾ ಫ್ರಕ್ಟೋಸ್‌ನಿಂದ ತುಂಬಿರುವ ಹಣ್ಣುಗಳು ಕೀಲುಗಳಲ್ಲಿ ಉರಿಯೂತವನ್ನು ಹೆಚ್ಚಿಸಿ, ಕಾಲುಗಳನ್ನು ದುರ್ಬಲಗೊಳಿಸುತ್ತವೆ. ಹಾಗಾಗಿ ವೃದ್ಧಾಪ್ಯದಲ್ಲಿ ಈ ಹಣ್ಣುಗಳನ್ನು ಸೇವಿಸಬೇಡಿ.

1. ಅನಾನಸ್​

ಅನಾನಸ್​ ಹಣ್ಣಿನಲ್ಲಿ ಬ್ರೋಮೆಲಿನ್ ಎಂಬ ಕಿಣ್ವವಿದ್ದು , ಇದು ಯುವಜನರಿಗೆ ಉರಿಯೂತ ನಿವಾರಕ ಎಂದು ಪರಿಗಣಿಸಲಾಗುತ್ತದೆ. ಆದರೆ, ವಯಸ್ಸಾದಂತೆ, ಇದರ ಅತಿಯಾದ ಸೇವನೆಯು ಹೆಚ್ಚಿನ ಆಮ್ಲೀಯತೆ, ಮೊಣಕಾಲು, ಸೊಂಟಗಳಲ್ಲಿ ಹೆಚ್ಚಿನ ಊತವನ್ನು ಮಾಡುವಂತೆ ಮಾಡುತ್ತದೆ. ಇದು ಸಂಧಿವಾತ ಇರುವವರಿಗೆ ನೋವು ಹೆಚ್ಚಾಗುವಂತೆ ಮಾಡುತ್ತದೆ. ಹಾಗಾಗಿ ವಯಸ್ಸಾದವರು ಈ ಹಣ್ಣನ್ನು ನಿಯಮಿತವಾಗಿ ಸೇವಿಸಬೇಕು.

2. ಬಾಳೆಹಣ್ಣು

ಬಾಳೆಹಣ್ಣುಗಳ ಸೇವನೆಯು ಶಕ್ತಿ ಪಡೆಯುವಲ್ಲಿ ಉಪಯುಕ್ತವಾಗಿವೆ. ಆದರೆ, ವಯಸ್ಸಾದವರಿಗೆ ಈ ಹಣ್ಣು ಹೆಚ್ಚು ಉಪಯುಕ್ತವಲ್ಲ. ಈ ಹಣ್ಣುಗಳಲ್ಲಿನ ಕಾರ್ಬೋಹೈಡ್ರೇಟ್‌ಗಳು ಮತ್ತು ಸಕ್ಕರೆ ಅಂಶವು ದೇಹದಲ್ಲಿ ನೀರಿನ ಧಾರಣವನ್ನು ಉಂಟುಮಾಡುತ್ತದೆ. ಇದರಿಂದ ಕಾಲಿನ ಊತ, ಕಾಲುಗಳಲ್ಲಿ ಭಾರ ನಡೆಯಲು ತೊಂದರೆ ಉಂಟಾಗಬಹುದು. ಹಾಗೆಯೇ ರಕ್ತದೊತ್ತಡ ಹಾಗೂ ಹೃದಯೀ ಸಂಬಂಧಿ ಕಾಯಿಲೆ ಇರುವಂತವರು ಯಾವುದೇ ಕಾರಣಕ್ಕೂ ಎಥೇಚ್ಛವಾಗಿ ಈ ಹಣ್ಣನ್ನು ಸೇವಿಸಬೇಡಿ. ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ.

3. ಕಿತ್ತಳೆ

ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಇದು ದೇಹವು ವಿಟಮಿನ್ ಬಿ 12 ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಕಿತ್ತಳೆಯಲ್ಲಿರುವ ಸಿಟ್ರಿಕ್ ಆಮ್ಲವು ವಯಸ್ಸಾದವರ ಕೀಲುಗಳಿಗೆ ತೊಂದರೆ ಉಂಟು ಮಾಡುತ್ತದೆ. ಇದು ಮೊಣಕಾಲುಗಳಲ್ಲಿ ಬಿಗಿತ, ಬೆನ್ನಿನ ಕೆಳಭಾಗದಲ್ಲಿ ನೋವು ಮತ್ತು ಕುಳಿತ ನಂತರ ಏಳಲು ಸಾಧ್ಯವಾಗದ ರೀತಿಯ ಸಮಸ್ಯೆಯನ್ನು ಉಂಟುಮಾಡುತ್ತದೆ.

4. ದ್ರಾಕ್ಷಿ

ದ್ರಾಕ್ಷಿಹಣ್ಣು ಒಂದು ಹಗುರವಾದ ಹಣ್ಣಾಗಿದ್ದು, ಇದರಲ್ಲಿರುವ ಫ್ರಕ್ಟೋಸ್ ದೇಹದಲ್ಲಿ ಯೂರಿಕ್ ಆಮ್ಲವಾಗಿ ಪರಿವರ್ತನೆಗೊಳ್ಳುತ್ತದೆ. ಈ ಆಮ್ಲವು ಕ್ರಮೇಣ ಕೀಲುಗಳಲ್ಲಿ ಸಂಗ್ರಹವಾಗಿ ಇವು ಸಂಧಿವಾತದ ನೋವನ್ನು ಹೆಚ್ಚಿಸುತ್ತದೆ. ದ್ರಾಕ್ಷಿಯನ್ನು ಒಂದೇ ಬಾರಿಗೆ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮತ್ತು ಯೂರಿಕ್ ಆಮ್ಲವು ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. ಆದರಿಂದ ಕಾಲಿನಲ್ಲಿ ನೋವು, ಊತ ಸಮಸ್ಯೆಗಳು ಪ್ರಾರಂಭಿಸುತ್ತವೆ.

5. ಕಲ್ಲಂಗಡಿ

ಕಲ್ಲಂಗಡಿ ಹಣ್ಣಿನಲ್ಲಿ ನೀರು ಸಮೃದ್ಧವಾಗಿದ್ದರೂ, ಇದು ಹೆಚ್ಚಿನ ಗ್ಲೈಸೆಮಿಕ್​ ಸೂಚಿಯನ್ನು ಹೊಂದಿರುತ್ತದೆ. ಅಧ್ಯಯನಗಳ ಪ್ರಕಾರ ಕಲ್ಲಂಗಡಿ ಹಣ್ಣು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಬಹಳಬೇಗನೆ ಹೆಚ್ಚಿಸುತ್ತದೆ. ಆದರಿಂದ ಮಧುಮೇಹ ಹಾಗೂ ವಯಸ್ಸಾದವರು ಇದನ್ನು ಸೇವಿಸುವುದರಿಂದ ಪಾದಗಳು ಊದಿಕೊಳ್ಳುವುದು, ಆಯಾಸಕ್ಕೆ ಕಾರಣವಾಗುತ್ತದೆ. ಹಾಗಾಗಿ ಇದನ್ನು ಸೇವಿಸುವುದನ್ನು ಕಡಿಮೆ ಮಾಡಿ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net