ಊಟ-ತಿಂಡಿಗಳಲ್ಲಿ ಉಪ್ಪು ಕಡಿಮೆ ಮಾಡಿದರೆ, ಈ ಕಾಯಿಲೆಗಳು ದೂರವಾಗುತ್ತವೆ!

s mix
Published on

ಸೋಡಿಯಂ ಮತ್ತು ಪೊಟ್ಯಾಶಿಯಂ ಒಂದಕ್ಕೊಂದು ತದ್ವಿರುದ್ಧ. ನಾವು ಸೇವಿಸುವ ಆಹಾರ ಪದ್ಧತಿಯಲ್ಲಿ ಸೋಡಿಯಂ ಜಾಸ್ತಿಯಾದರೆ ಅದರಿಂದ ರಕ್ತದ ಒತ್ತಡ ಮತ್ತು ಹೃದಯದ ಕಾಯಿಲೆ ಜೊತೆಗೆ ಪಾರ್ಶ್ವವಾಯು ಕೂಡ ಸಂಭವಿಸುತ್ತದೆ. ನಾವು ತಿನ್ನುವ ವಿವಿಧ ಬಗೆಯ ಆಹಾರಗಳಲ್ಲಿ ನಮಗೆ ಹಲವು ಬಗೆಯ ಪೌಷ್ಟಿಕ ಸತ್ವಗಳು ಸಿಗುತ್ತವೆ. ಅದರಲ್ಲಿ ಸೋಡಿಯಂ ಮತ್ತು ಪೊಟಾಸಿಯಂ ಕೂಡ ಒಂದು.


ಪ್ರತಿದಿನ ಆಹಾರ ಪದ್ಧತಿಯಲ್ಲಿ ಉಪ್ಪಿನ ಅಂಶವನ್ನು ಕಡಿಮೆ ಮಾಡಿಕೊಳ್ಳುವುದರಿಂದ ಕೂಡ ನಾವು ರಕ್ತದ ಒತ್ತಡವನ್ನು ನಿಯಂತ್ರಣ ಮಾಡಿಕೊಳ್ಳಬಹುದು. ಹೇಗೆ ಅಂತೀರಾ? ಪೊಟಾಸಿಯಂ ಇರುವಂತಹ ಆಹಾರಗಳನ್ನು ಸೇವಿಸಿದರೆ ದೇಹದಲ್ಲಿ ಸೋಡಿಯಂ ಪ್ರಭಾವ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ. ಅಂದರೆ ರಕ್ತದ ಒತ್ತಡ, ಹೃದಯ ರಕ್ತನಾಳದ ಸಮಸ್ಯೆಗಳು ಇನ್ನಿತರ ಸಮಸ್ಯೆಗಳು ಇರುವುದಿಲ್ಲ.


ಉಪ್ಪಿನ ಸೇವನೆ ಹೆಚ್ಚಾದರೆ ಈ ರೋಗಗಳು ಬರಬಹುದು!
ರಕ್ತದ ಒತ್ತಡ ಕಡಿಮೆಯಾಗುತ್ತದೆ
ಯಾವಾಗಲೂ ತಯಾರು ಮಾಡುವ ಆಹಾರ ಪದಾರ್ಥಗಳಲ್ಲಿ ಉಪ್ಪಿನ ಅಂಶವನ್ನು ಹೆಚ್ಚಾಗಿ ಬಳಸುತ್ತಿದ್ದರೆ, ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕಾಣಿಸುತ್ತವೆ ಮತ್ತು ಪಾರ್ಶ್ವ ವಾಯು ಕೂಡ ಎದುರಾಗಬಹುದು. ಹೀಗಾಗಿ ಹೃದಯ ರಕ್ತನಾಳದ ಕಾಯಿಲೆಗಳು ದೂರ ಉಳಿಯ ಬೇಕು ಎಂದರೆ ನೀವು ಸಹ ನಿಮ್ಮ ಆಹಾರ ಪದ್ಧತಿಯಲ್ಲಿ ಉಪ್ಪಿನ ಬಳಕೆ ಯನ್ನು ಕಡಿಮೆ ಮಾಡಿಕೊಳ್ಳಿ. ಸೋಡಿಯಂ ಕಡಿಮೆಯಾಗುವುದರಿಂದ ನಿಮಗೆ ಸಾಕಷ್ಟು ಉಪಯೋಗವಿದೆ.​


ಹೆಚ್ಚಿನ ಪ್ರಮಾಣದಲ್ಲಿ ಉಪ್ಪಿನ ಅಂಶವನ್ನು ಸೇವನೆ ಮಾಡುವು ದರಿಂದ ದೇಹದ ವಿವಿಧ ಭಾಗಗಳಲ್ಲಿ ನೀರು ತುಂಬಿಕೊಳ್ಳುತ್ತದೆ.
ಏಕೆಂದರೆ ನಮ್ಮ ಕಿಡ್ನಿಗಳು ಸರಿಯಾದ ರೀತಿಯಲ್ಲಿ ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ಹೊಂದಿರುವ ದ್ರವವನ್ನು ಹೊರಹಾಕಲು ಸಾಧ್ಯವಾಗುವುದಿಲ್ಲ.


ಇದರಿಂದ ಹೊಟ್ಟೆಯ ಭಾಗದಲ್ಲಿ ಕೂಡ ನೀರು ತುಂಬಿಕೊಂಡು ಹೊಟ್ಟೆ ಉಬ್ಬರ ಕಾಣಿಸುತ್ತದೆ. ಕಡಿಮೆ ಉಪ್ಪಿನ ಪ್ರಮಾಣ ಸೇವಿಸುವವರಿಗೆ ಈ ಸಮಸ್ಯೆ ಇರುವುದಿಲ್ಲ.

ಕಡಿಮೆ ಸೋಡಿಯಂ ಪ್ರಮಾಣ ನಮ್ಮ ದೇಹ ಸೇರುವುದರಿಂದ ಕಿಡ್ನಿ ಗಳಿಗೆ ಸಾಕಷ್ಟು ಅನುಕೂಲವಾಗುತ್ತದೆ. ಕಿಡ್ನಿಗಳು ತಮ್ಮ ಕಾರ್ಯ ಚಟುವಟಿಕೆ ಉತ್ತಮವಾಗಿ ಮಾಡಲು ನೆರವಾಗುತ್ತದೆ.


ಕಿಡ್ನಿಗಳ ಮೇಲಿನ ಒತ್ತಡ ಕಡಿಮೆಯಾಗುವುದರಿಂದ ನಮ್ಮ ದೇಹದಲ್ಲಿನ ವಿಷಕಾರಿ ಅಂಶಗಳು ಹೊರ ಹೋಗಲು ಸಾಧ್ಯವಾಗುತ್ತದೆ. ಇದು ರಕ್ತದ ಒತ್ತಡವನ್ನು ಸಹ ನಿಯಂತ್ರಣಕ್ಕೆ ತರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net