ಇವೇ ನೋಡಿ ಪ್ರಪಂಚದ 5 ಅತ್ಯಂತ ಅಪಾಯಕಾರಿ ಹಾವುಗಳು| Deadliest Snakes

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Deadliest Snakes : ಹಾವು(Snake) ಎಂದು ತಕ್ಷಣ ಎಂಥವನ ಎದೆ ಸಹ ಒಂದು ಸಲ ನಡಗುತ್ತದೆ. ಮೊದಲೊಂದು ಕಾಲವಿತ್ತು ಹಾವು ವಿಷಕಾರಿ ಹಾವೇನಾದರೂ ಕಚ್ಚಿದರೆ ಅದಕ್ಕೆ ಮದ್ದಿಲ್ಲ, ಅವನ ಸಾವು ಖಚಿತವೆಂದೆ ಹೇಳುತ್ತಿದ್ದರು. ಕೆಲವೊಂದು ಸನ್ನಿವೇಶಗಳಲ್ಲಿ ಹಾವು ಕಚ್ಚಿದ ಜಾಗಕ್ಕೆ ಮಣ್ಣು, ಸುಣ್ಣ ಇವುಗಳನ್ನು ಹಾಕಿ ಬದಕುವ ಸಾಧ್ಯತೆ ಇದ್ದವನನ್ನು ಸಯುವಂತೆ ಮಾಡಲಾಗುತ್ತಿತ್ತು.
ಆದರೆ ಈಗ ಕಾಲ ಬದಲಾಗಿದೆ. ವಿಷಕಾರಿ ಹಾವು ಕಡಿದಾಗ ಸರಿಯಾದ ಸಮಯಕ್ಕೆ ವೈದ್ಯರ ಬಳಿ ಹೋದರೆ ವ್ಯಕ್ತಿ ಖಂಡಿತವಾಗಿ ಬದುಕುಳಿಯುತ್ತಾನೆ. ಆದರೂ ಕೆಲವೊಂದಿಷ್ಟು ಅಪಾಯಕಾರಿ ಹಾವು ಕಡಿದಾಗ ಆ ವ್ಯಕ್ತಿಯನ್ನು ಉಳಿಸುವುದು ತುಂಬಾ ಕಷ್ಟವಾಗುತ್ತದೆ ಕಾರಣ ಆ ಹಾವುಗಳ ವಿಷ ಅತ್ಯಂತ ಅಪಾಯಕಾರಿ ಆಗಿರುತ್ತದೆ. ಆದ್ದರಿಂದ ಅಂತಹ ಹಾವುಗಳಿಂದ ದೂರವಿರುವುದೇ ಉತ್ತಮವೆಂದು ಹೇಳಲಾಗುತ್ತದೆ.
1. ಕಾಳಿಂಗ ಸರ್ಪ
ಕಾಳಿಂಗ ಸರ್ಪ ಅಥವಾ ಕಿಂಗ್​ ಕೋಬ್ರಾ ಹಾವನ್ನು ಹಾವುಗಳ ರಾಜನೆಂದು ಕರೆಯಲಾಗುತ್ತದೆ. ಈ ಹಾವು ಹೆಚ್ಚಾಗಿ ಕರ್ನಾಟಕದ ಮಲೆನಾಡು, ಪಶ್ಚಿಮ ಬಂಗಾಳ ಮತ್ತು ಆಸ್ಸಾಂ ರಾಜ್ಯಗಳಲ್ಲಿ ಕಂಡುಬರುತ್ತದೆ. ಇದು ಸಾಮಾನ್ಯವಾಗಿ 10 - 15 ಅಡಿ ಉದ್ದ, 6 - 8 ಕೀಲೊ ತೂಕ ಮತ್ತು ಸುಮಾರು 20 ರಿಂದ 25 ವರ್ಷಗಳ ಕಾಲ ಬದಕುತ್ತದೆ. ಹಾವುಗಳನ್ನೇ ತಿಂದು ಬದುಕುವ ಈ ಹಾವನ್ನು ಪ್ರಪಂಚದ ಉದ್ದನೆಯ ಅಪಾಯಕಾರಿ ಹಾವೆಂದು ಕೆರೆಯುತ್ತಾರೆ.
ಕಿಂಗ್ ಕೋಬ್ರಾದ ವಿಷವು ನ್ಯೂರೋಟಾಕ್ಸಿಕ್ (Neurotoxic) ಆಗಿದ್ದು, ಇದು ನರ, ಮೆದುಳು ಮತ್ತು ಹೃದಯದ ಕ್ರಿಯೆಯನ್ನು ನಿಲ್ಲಿಸುತ್ತದೆ. ಈ ಹಾವು ಒಂದು ಬಾರಿ ಕಚ್ಚಿದರೆ 30–45 ನಿಮಿಷಗಳಲ್ಲಿ ಸಾವು ಖಚಿತ.
2. ಸಾ–ಸ್ಕೇಲ್ಡ್ ವೈಪರ್ (ಗರಗಸ ಮಂಡಲ)
ಈ ಹಾವು ಗರಗಸದಂತೆ ಶಬ್ದ ಮಾಡುವುದರಿಂದ ಇದನ್ನು ಸಾ–ಸ್ಕೇಲ್ಡ್ ವೈಪರ್ ಅಥವಾ ಗತಗಸ ಮಂಡಲ ಎಂದು ಕರೆಯುತ್ತಾರೆ. ಈ ಹಾವು ಸಾಮಾನ್ಯವಾಗಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ನೇಪಾಳ ಮತ್ತು ಆಫ್ರಿಕಾದ ಕೆಲ ಭಾಗದಲ್ಲಿ ಕಂಡುಬರುತ್ತದೆ. ಇದು ಸಾಮಾನ್ಯವಾಗಿ 80 ಸೆಂ.ಮೀ ಉದ್ದವಿದ್ದು, 8 ರಿಂದ 12 ವರ್ಷಗಳ ವರೆಗೆ ಬದುಕುತ್ತದೆ. ಈ ಹಾವು ಅತ್ಯಂತ ಬುದ್ಧಿವಂತ ಹಾವುಗಳಲ್ಲಿ ಒಂದಾಗಿದ್ದು, ಸದಾ ದಾಳಿಗೆ ಸಿದ್ಧವಾಗಿರುತ್ತದೆ. ಈ ಹಾವು ಕಡಿದಾಗ ಹೆಮೋಟಾಕ್ಸಿಕ್ (Hemotoxic) ವಿಷ ಬಿಡುಗಡೆಯಾಗಿ ರಕ್ತ ಹೆಪ್ಪುಗಟ್ಟಿ, ಕಿಡ್ನಿ ವೈಪಲ್ಯವಾಗುವ ಮೂಲಕ ಸಾವು ಸಂಭವಿಸುತ್ತದೆ.
3. ಬ್ಲಾಕ್​ ಮಾಂಬಾ
ಬ್ಲಾಕ್ ಮಾಂಬಾ ಹಾವನ್ನು ವಿಶ್ವದ ಅತ್ಯಂತ ವೇಗದ, ಅತ್ಯಂತ ಆಕ್ರಮಣಕಾರಿ, ಮತ್ತು ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದೆಂದು ಹೆಸರಿಸಲಾಗಿದೆ. ಈ ಹಾವಿನ ಒಳಭಾಗಗಳು ಕಪ್ಪಾಗಿರುವುದರಿಂದ ಇದನ್ನು ಬ್ಲಾಕ್​ ಮಾಂಬಾ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ 2 - 4 ಮೀಟರ್ ಉದ್ದವಿದ್ದು, 15 ರಿಂದ 20 ವರ್ಷಗಳ ಕಾಲ ಬದುಕುವ ಈ ಹಾವನ್ನು ಆಫ್ರಿಕಾದ ಅತ್ಯಂತ ಅಪಾಯಕಾರಿ ಹಾವೆಂದು ಕರೆಯುತ್ತಾರೆ. ಈ ಹಾವಿನಲ್ಲಿ ನ್ಯೂರೋಟಾಕ್ಸಿಕ್ (Neurotoxic) ವಿಷವಿರುವ ಕಾರಣ ಈ ಹಾವು ಕಡಿದಾಗ ನರಮಂಡಲ ತನ್ನ ಕೆಲಸವನ್ನು ನಿಲ್ಲಿಸುವ ಮೂಲಕ 30 ನಿಮಿಷದ ಒಳಗೆ ಸಾವು ಸಂಭವಿಸುತ್ತದೆ.
4. ಇನ್‌ಲ್ಯಾಂಡ್ ಟೈಪಾನ್
ಇನ್​ಲ್ಯಾಂಡ್ ಟೈಪಾನ್​ ಹಾವನ್ನು ಭೂಮಿಯ ಮೇಲೆ ಇರುವ ಎಲ್ಲ ಹಾವುಗಳಲ್ಲಿ ಅತಿ ಹೆಚ್ಚು ವಿಷಕಾರಿ ಹಾವೆಂದು ಹುರುತಿಸಲಾಗಿದೆ. ಈ ಹಾವು ಹೆಚ್ಚಾಗಿ ಆಸ್ಟ್ರೇಲಿಯಾದ ಮರುಭೂಮಿ ಪ್ರದೇಶದಲ್ಲಿ ಕಂಡು ಬರುತ್ತದೆ. ಇದು ಸಾಮಾನ್ಯವಾಗಿ 1.8 ಮೀ – 2.5 ಮೀ ಉದ್ದವಿದ್ದು, 15 ರಿಂದ 20 ವರ್ಷಗಳ ಕಾಲ ಇದು ಬದುಕಬಲ್ಲದು. ಇಲಿ, ಮೊಲ ಮತ್ತು ಸಣ್ಣ ಪಕ್ಷಿಗಳು ಇದರ ಆಹಾರವಾಗಿದೆ. ಈ ಹಾವು ನ್ಯೂರೋಟಾಕ್ಸಿಕ್ (Neurotoxic) ವಿಷವನ್ನು ಹೊಂದಿರುವ ಕಾರಣ ಇದು ಕಚ್ಚಿದಾಗ ತಲೆ ಸುತ್ತು ಬರುವುದು, ಮೂತ್ರದಲ್ಲಿ ರಕ್ತ ಬರುವ ಮೂಲಕ ಸಾವುಂಟಾಗುತ್ತದೆ.
5. ರಾಟಲ್​ ಸ್ನೇಕ್​
ಇದನ್ನು ಪಿಟ್​ ವೈಪರ್​ ಅಥವಾ ರಾಟಲ್​ ಸ್ನೇಕ್​ ಎಂದು ಕರೆಯಲಾಗುತ್ತದೆ. ಇದರ ಬಾಲದ ತುದಿ ಗೆಜ್ಜೆಯಂತೆ ಶಬ್ದ ಮಾಡುವುದರಿಂದ ಇದನ್ನು ರಾಟಲ್​ ಸ್ನೇಕ್​ ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ 50 ಸೆಂ.ಮೀ ಇಂದ 1 ಮೀ. ಉದ್ದವಿದ್ದು, 20 ರಿಂದ 25 ವರ್ಷಗಳ ಕಾಲ ಬದುಕಿರುತ್ತದೆ. ಈ ಹಾವುಗಳು ಸಾಮಾನ್ಯವಾಗಿ ಉತ್ತರ ಮತ್ತು ದಕ್ಷಿಣ ಅಮೇರಿಕಾ ಖಂಡಗಳಲ್ಲಿ ಕಂಡುಬರುತ್ತದೆ. ಈ ಹಾವಿನ ವಿಷ ಹೀಮೋಟಾಕ್ಸಿಕ್ (Hemotoxic) ಆಗಿದ್ದು, ಕಡಿದ ನಂತರ ಅಧಿಕ ರಕ್ತಸ್ರಾವವಾಗುವ ಮೂಲಕ ಸಾವು ಸಂಭವಿಸುತ್ತದೆ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net