ಜಿಮ್ನಂತಹ ಹೆವಿ ವರ್ಕೌಟ್ ಮಾಡಲು ಇಷ್ಟವಿಲ್ಲದೆ, ನೈಸರ್ಗಿಕವಾಗಿ ದೇಹವನ್ನು ದಂಡಿಸಲು ಇಷ್ಟಪಡುವವರು ಇತ್ತೀಚಗೆ ಪ್ರಚಲಿತದಲ್ಲಿರುವ '6-6-6' ವಾಕಿಂಗ್ ತಂತ್ರವನ್ನು ಪಾಲಿಸಿ. ಆರೋಗ್ಯವಾಗಿರಲು ಅತ್ಯುತ್ತಮ ನೈಸರ್ಗಿಕ ವಿಧಾನ ಇದಾಗಿದೆ.
ಏನಿದು 6-6-6' ವಾಕಿಂಗ್ ತಂತ್ರ?
6-6-6' ವಾಕಿಂಗ್ ತಂತ್ರವು ಸರಳವಾಗಿದ್ದು ಮೂರು ಪ್ರಮುಖ ಅಂಶವನ್ನು ಹೊಂದಿದೆ.
- ಮೊದಲನೇಯ ಆರು ಏನು?
- ವಾಕಿಂಗ್ ಮಾಡುವ ಸಂದರ್ಭದಲ್ಲಿ ನಮ್ಮ ಸ್ನಾಯುಗಳನ್ನು ಸಡಿಲಗೊಳಿಸಲು ಆರು ನಿಮಿಷಗಳ ಕಾಲ ನಿಧಾನವಾಗಿ ನಡೆದು, ಸ್ಟ್ರೆಚ್ನಂತಹ ವ್ಯಾಯಾಮವವನ್ನು ಮಾಡಿ.
- 2ನೇ 6 ಏನನ್ನು ಸೂಚಿಸುತ್ತದೆ?
- ಮತ್ತೊಂದು ಆರು 60 ನಿಮಿಷಗಳ ವೇಗದ ನಡಿಗೆಯಾಗಿದೆ. ಇದು ನಿಮ್ಮ ಹೃದಯ ಬಡಿತ ಹೆಚ್ಚಿಸಲು, ಕ್ಯಾಲೋರಿ ಬರ್ನ್ ಮಾಡಲು ಸಹಾಯ ಮಾಡುತ್ತದೆ. ಹೀಗಾಗಿ ನಿಧಾನವಾಗಿ ವಾಕಿಂಗ್ ಮಾಡಿದ ನಂತರ 60 ನಿಮಿಷ ವೇಗದ ವಾಕಿಂಗ್ ಮಾಡಿ
- 3ನೇ ಆರು ಏನನ್ನು ಹೇಳುತ್ತೆ?
- 6 ನಿಮಿಷ ಕೂಲ್ ಡೌನ್; ವ್ಯಾಯಾಮದ ನಂತರ ನಿಮ್ಮ ಹೃದಯ ಬಡಿತ, ಉಸಿರಾಟವನ್ನು ಸಾಮಾನ್ಯ ಸ್ಥಿತಿಗೆ ತರಲು ಮತ್ತೊಂದು ಆರು ನಿಮಿಷ ನಿಧಾನವಾಗಿ ನಡೆಯುವುದಾಗಿದೆ. ಇದು 6-6-6ತಂತ್ರವಾಗಿದೆ.
6-6-6' ವಾಕಿಂಗ್ ತಂತ್ರದಿಂದಾಗುವ ಪ್ರಯೋಜನವೇನು?
ನಿತ್ಯ ನೀವು ಫೋನ್ ನೋಡುವಂತೆ 6-6-6' ವಾಕಿಂಗ್ ತಂತ್ರವನ್ನು ಬಳಸಿಕೊಂಡರೆ, ನಿಮ್ಮ ದೇಹದಲ್ಲಿರುವ ಕೆಟ್ಟ ಕ್ಯಾಲೋರಿಯನ್ನು ಕಡಿಮೆ ಮಾಡುತ್ತದೆ. ಕೀಲುಗಳಿಗೆ ಹೆಚ್ಚು ಕೆಲಸ ನೀಡದೆ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹೃದಯಕ್ಕೆಷ್ಟು ಸ್ನೇಹಿ?
ನಿತ್ಯ ಬೆಳಿಗ್ಗೆ ಆರು ನಿಮಿಷ ಅಥವಾ ಸಂಜೆ ಆರು ನಿಮಿಷ ವಾಕ್ ಮಾಡುವುದರಿಂದ ಹೃದಯದ ರಕ್ತನಾಳಕ್ಕೆ ಸಹಕಾರಿ. ರಕ್ತದೊತ್ತಡ ನಿಯಂತ್ರಣಕ್ಕೆ ಬಂದು ಹಾರ್ಟ್ ಅಟ್ಯಾಕ್ನಂತಹ ಸಮಸ್ಯೆ ಕಾಡೋದು ಇಳಿಕೆಯಾಗುತ್ತದೆ.
ಹ್ಯಾಪಿ ಹಾರ್ಮೋನ್ ಉತ್ಪತ್ತಿಗೆ ಸಹಕಾರಿ
ಬೆಳಗ್ಗಿನ ಮತ್ತು ಸಂಜೆಯ ಶುದ್ಧಗಾಳಿಯೊಂದಿಗೆ ವಾಕಿಂಗ್ ಕೈಗೊಳ್ಳುವುದು ದಿನಪೂರ್ತಿಯ ಒತ್ತಡವನ್ನು ತೊಡೆದು ಹಾಕುತ್ತದೆ. ದೇಹದಲ್ಲಿ ಸಕರಾತ್ಮಕ ವಿಚಾರಗಳು ಮೂಡುವಂತೆ ಮಾಡುತ್ತದೆ. ಹ್ಯಾಪಿ ಹಾರ್ಮೋನ್ಗಳು ಉತ್ಪತ್ತಿ ಮಾಡಲು ಇವು ಸಹಕಾರಿ.
ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಮದ್ದು
ಊಟದ ನಂತರ ವಾಕ್ ಮಾಡುವುದು ದೇಹದ ರಕ್ತದ ಮಟ್ಟದಲ್ಲಿ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಎಲ್ಲಿ ವಾಕ್ ಮಾಡಬಹುದು, ಕಾರ್ಯರೂಪಕ್ಕೆ ತರೋದು ಹೇಗೆ
ಇತ್ತೀಚಿನ ದಿನಗಳಲ್ಲಿ ಕೆಲಸ, ಟ್ರಾಫಿಕ್ ಮಧ್ಯೆಯೇ ಸಮಯ ಕಳೆದು ಹೋಗುತ್ತದೆ. ಹೀಗಾಗಿ ಈ 6-6-6 ತಂತ್ರ ಬಳಕೆ ಮಾಡಿಕೊಳ್ಳುವುದರಿಂದ ಕಡಿಮೆ ಸಮಯದಲ್ಲಿ ನಮ್ಮ ಆರೋಗ್ಯವನ್ನು ಸಹ ಸುಧಾರಿಸುವಂತೆ ನೋಡಿಕೊಳ್ಳಬಹುದು.
ನಿತ್ಯ ಸಂಜೆ ಅಥವಾ ಬೆಳಿಗ್ಗೆ ನಿಮ್ಮ ಮನೆಯ ಸುತ್ತಮುತ್ತ ಇರುವ ಉದ್ಯಾನಕ್ಕೆ ಭೇಟಿ ಕೊಟ್ಟು ವಾಕ್ ಮಾಡಿ, ಈ ವೇಳೆ ನಿಮ್ಮ ಮೊಬೈಲ್ನಲ್ಲಿ ಟೈಮರ್ ಇಡಿ. ವಾಕ್ ಶುರು ಮಾಡುವ ಅರ್ಧ ಗಂಟೆ ಮೊದಲು ನೀರನ್ನು ಕುಡಿಯಿರಿ. ನಿಗದಿತ ಸಮಯಕ್ಕಿಂತ ಹೆಚ್ಚು ಹೊತ್ತು ವಾಕ್ ಮಾಡಬೇಕು ಎನಿಸಿದರೆ ಬಾಟಲ್ ಅನ್ನು ಕ್ಯಾರಿ ಮಾಡಿ, (ಏಜೆನ್ಸೀಸ್).