

ಇದರ ಆರಂಭಿಕ ಡೌನ್‌ಲೋಡ್ ಸೈಜ್ ಕೇವಲ 1ಜಿಬಿ ಇರಲಿದ್ದು, ಫೋನ್‌ಗಳಲ್ಲಿ ಸುಲಭವಾಗಿ ಮತ್ತು ವೇಗವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ದಕ್ಷಿಣ ಕೊರಿಯಾ ಮೂಲದ ಕ್ರಾಫ್ಟನ್ ಜಾಗತಿಕ ಮಟ್ಟದ ಗೇಮಿಂಗ್ ಡೆವಲಪರ್ ಕಂಪನಿಯಾಗಿದ್ದು, ಭಾರತದಲ್ಲಿ ಬಿಡುಗಡೆಯಾಗಿರುವ ಇದರ ಜನಪ್ರಿಯ ಗೇಮ್ ಬಿಜಿಎಂಐ ಈಗಾಗಲೇ 26 ಕೋಟಿಗೂ ಹೆಚ್ಚು ಬಾರಿ ಡೌನ್‌ಲೋಡ್ ಆಗಿದೆ. ಇದಲ್ಲದೆ ಬುಲೆಟ್ ಎಕೋ ಇಂಡಿಯಾ, ರೋಡ್ ಟು ವ್ಯಾಲರ್, ಕುಕೀರನ್ ಇಂಡಿಯಾ ಮತ್ತು ರಿಯಲ್ ಕ್ರಿಕೆಟ್ ನಂತಹ ಗೇಮ್‌ಗಳನ್ನೂ ಇದು ಹೊಂದಿದೆ.