ಬಸ್, ಮೆಟ್ರೋ, ಜಿಮ್, ಕಾಲೇಜು, ಉದ್ಯೋಗ ಸ್ಥಳ ಹೀಗೆ ಎಲ್ಲಿ ನೋಡಿದರೂ ಜೆನ್ಜೀಗಳ ಕಿವಿಯಲ್ಲಿ ಸಖತ್ ಟ್ರೆಂಡೀ ಆಗಿರುವ ವೈರ್‌ಲೆಸ್ ಇಯರ್‌ಬಡ್ಸ್ ಕಾಣಬಹುದು. ತಮ್ಮ ನೆಚ್ಚಿನ ಹಾಡುಗಳು, ಪಾಡ್ಕಾಸ್ಟ್, ಆನ್‌ಲೈನ್ ಕ್ಲಾಸ್, ಗೇಮಿಂಗ್ ಹಾಗೂ ವಿಡಿಯೋ ಕಾಲ್‌ಗಳಿಗೆ ಇವುಗಳನ್ನು ಬಳಸುತ್ತಿದ್ದಾರೆ. ಇದನ್ನು ಹಾಕಿಕೊಂಡರೇ ಮುಗಿಯಿತು ಹೊರಗಿನ ಪ್ರಪಂಚದಲ್ಲಿ ಏನಾದರೂ ನಮಗೇನು ಎನ್ನುವಂತೆ ಮುಂದೋಗುತ್ತಿರುತ್ತಾರೆ.