ರುಮಟಾಯ್ಡ್​ ಸಂಧಿವಾತದ ಲಕ್ಷಣಗಳು, ಮುನ್ನೆಚ್ಚರಿಕಾ ಕ್ರಮ ಮತ್ತು ಚಿಕಿತ್ಸೆ...

Health 12 Feb 20
Published on

ಅನಾರೋಗ್ಯಕರ ಜೀವನಶೈಲಿಯೇ ಯೌವನಾವಸ್ಥೆಯಲ್ಲಿ ಸಂಧಿವಾತ ಹಾಗೂ ಕೀಲು ನೋವಿನ ಸಮಸ್ಯೆಗಳಿಗೆ ಕಾರಣವಾಗಬಹುದು. ಭಾರತದಲ್ಲಿ ಒಟ್ಟು ಜನಸಂಖ್ಯೆಯ ಶೇ.15ರಷ್ಟು ಜನ ಅಂದರೆ ಸುಮಾರು 180 ದಶಲಕ್ಷ ಮಂದಿ ಸಂಧಿವಾತದಿಂದ ಬಳಲುವ ಹದಿವಯಸ್ಸಿನವರು. ಇವರು ಏಕಾಂಗಿತನವನ್ನು ಹಾಗೂ ನಿರಾಯಾಸ ಭಾವನೆಯನ್ನು ಅನುಭವಿಸುತ್ತಾರೆ. ಈ ರೀತಿಯಾಗಿ ಹದಿಹರೆಯದವರಲ್ಲಿ ಹಾಗೂ ಮಧ್ಯವಯಸ್ಸಿನವರಲ್ಲಿ ಕಂಡುಬರುತ್ತಿರುವ ಸಂಧಿವಾತವನ್ನು ರ್ಹುಮಟಾಯ್್ಡ ಸಂಧಿವಾತ ಎಂದು ಕರೆಯಲಾಗುತ್ತದೆ. ಇದು ಒಂದು ಆಟೋಇಮ್ಯೂನ್ ಸಮಸ್ಯೆಯಾಗಿದೆ. ಇದು ದುರ್ಬಲ ಜೀನ್ಸ್​ಗಳನ್ನು ಹೊಂದಿದ ವ್ಯಕ್ತಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಬ್ಯಾಕ್ಟೀರಿಯಾ ಹಾಗೂ ವೈರಲ್ ಸೋಂಕಿನಿಂದಲೂ ಕೆಲವೊಮ್ಮೆ ಹೆಚ್ಚಾಗಬಹುದು.

ಕಾರಣಗಳು:
  • ಬದಲಾದ ಜೀವನಶೈಲಿ, ವ್ಯಾಯಾಮದ ಕೊರತೆ ಅಸಹಜ ಭಂಗಿ, ಕಂಪ್ಯೂಟರ್ ಮುಂದೆ ಕುಳಿತು ದೀರ್ಘಾವಧಿ ಕೆಲಸ ಮಾಡುವುದು ಇತ್ಯಾದಿ
  • ಸಮತೋಲಿತ ಆಹಾರ ಪದ್ಧತಿ, ಮಾಲಿನ್ಯ ವಾತಾವರಣ, ಅಧಿಕ, ಮಾನಸಿಕ ಒತ್ತಡ
  • ಮಹಿಳೆಯರಲ್ಲಿ ಹೆಚ್ಚಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
  • ಕಡಿಮೆಯಾಗುತ್ತಿರುವ ದೇಹದ ಸಾಮರ್ಥ್ಯ
  • ಪೋಷಕಾಂಶಗಳ ಕೊರತೆ ಹಾಗೂ ಪೌಷ್ಟಿಕ ಆಹಾರದ ಕೊರತೆ.
ಲಕ್ಷಣಗಳು:
  1. ಕೀಲುಗಳಲ್ಲಿ ಊತ ಉಂಟಾಗಿ, ಇವುಗಳನ್ನು ಮುಟ್ಟುವಾಗ ಬಿಸಿಯಾಗುವುದು, ನೋವು ಕಾಣಿಸಿಕೊಳ್ಳುವುದು
  2. ಮುಂಜಾನೆ ಎದ್ದ ತಕ್ಷಣ ನಡೆಯುವುದಕ್ಕೆ ಕಷ್ಟವಾಗುವುದು
  3. ತುಂಬಾ ಸುಸ್ತಾಗುವುದು, ನಿಶ್ಶಕ್ತಿ ಹಾಗೂ ಹಸಿವು ಇಲ್ಲದಿರುವುದು
  4. ಕೀಲುಗಳ ಕೆಂಪಗಾಗುವುದು.
  5. ಪರಿಣಾಮಗಳು: 
  6. ರುಮಟ್ಯೋಯ್ಡ್​ ನೊಡ್ಯೂಲ್​ಗಳು ಕಾಣಿಸಿಕೊಳ್ಳುವುದು, ಅನೇಕ ಸೋಂಕುಗಳ ಸಾಧ್ಯತೆ.
  7. ಕಣ್ಣು ಹಾಗೂ ಬಾಯಿ ಒಣಗುವಿಕೆ ಇತ್ಯಾದಿ
ಮುನ್ನೆಚ್ಚರಿಕೆ ಅಂಶಗಳು
  • ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು. ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು.
  • ಸಮತೋಲಿತ ಆಹಾರ ಸೇವನೆ ಮಾಡಬೇಕು.
  • ನಿಯಮಿತವಾದ ಶಾರೀರಿಕ ಚಟುವಟಿಕೆ ರೂಢಿಸಿಕೊಳ್ಳಬೇಕು.
  • ಕೀಲುಗಳಲ್ಲಿ ಗಂಭೀರವಾದ ಗಾಯಗಳಾಗದೇ ಇರುವಂತೆ ನಿಗಾ ವಹಿಸಬೇಕು.
  • ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಬೇಕು.

ಹೋಮಿಯೋಕೇರ್ ಇಂಟರ್​ನ್ಯಾಷನಲ್​ನಲ್ಲಿ ಜೆನೆಟಿಕ್ ಕಾನ್​ಸ್ಟಿಟ್ಯೂಷನಲ್ ಚಿಕಿತ್ಸಾ ವಿಧಾನದಿಂದ ಸಂಧಿವಾತವನ್ನು ಗುಣಪಡಿಸಲಾಗುವುದು. ಹಾಗೆಯೇ ವ್ಯಕ್ತಿಯ ಶಾರೀರಿಕ, ಮಾನಸಿಕ ಸ್ಥಿತಿಯ ಪೂರ್ಣವಾದ ಮಾಹಿತಿಯನ್ನು ಪರಿಗಣಿಸಿ, ಕೂಲಂಕಷ ಅಧ್ಯಯನ ಮಾಡಿ, ಚಿಕಿತ್ಸೆ ನೀಡಲಾಗುತ್ತದೆ. ಯಾವುದೇ ಅಡ್ಡ ಪರಿಣಾಮವಿಲ್ಲದೇ ಈ ಸಮಸ್ಯೆಗಳನ್ನು ಗುಣಪಡಿಸಲಾಗುವುದು. ಚಿಕಿತ್ಸೆಯ ನಂತರ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net