ಗೆಣಸು ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಸಿಹಿ: ನಿಯಮಿತವಾಗಿ ತಿನ್ನಿ ಚಮತ್ಕಾರ ನೋಡಿ

sweet potato
Published on

ದಿಕಾಲದ ಮಾನವನಿಂದ ಹಿಡಿದು ಇಂದಿನವರೆಗೂ ಆಹಾರಕ್ಕಾಗಿ ಬಳಸುತ್ತಿರುವ ಗೆಡ್ಡೆ-ಗೆಣಸಿನಲ್ಲಿ ಅತ್ಯಧಿಕ ಪ್ರಮಾಣದ ಪೌಷ್ಠಿಕಾಂಶವನ್ನು ಕಾಣಬಹುದು. ಆದರೆ, ಇತ್ತೀಚಿನ ದಿನಗಳಲ್ಲಿ ಗೆಣಸು ಕಂಡರೆ ಮೂಗೂ ಮುರಿಯುವ ಜನರೇ ಹೆಚ್ಚು. ಅನಾದಿಕಾಲದಿಂದಲೂ ಸೇವಿಸುತ್ತೀರುವ ಗೆಡ್ಡೆ-ಗೆಣಸು ದೇಹಕ್ಕೆ ಬೇಕಾದ ವಿಟಮಿನ್ ಬಿ6, ಕ್ಯಾಲಿಯಂ, ಕಬ್ಬಿಣ್ಣ, ಸೋಡಿಯಂ, ಝಿಂಕ್, ಮೆಗ್ನಿಶಿಯಂ ಮೊದಲಾದ ಆರೋಗ್ಯಕರ ಅಂಶಗಳನ್ನು ಒದಗಿಸುತ್ತದೆ.

ಇತ್ತೀಚೆಗೆ ಕಾಡುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ಮಧುಮೇಹವು ಒಂದು. ಭಾರತದಲ್ಲೇ ಮಧುಮೇಹಿಗಳ ಸಂಖ್ಯೆ 100 ಮಿಲಿಯನ್​ ದಾಟಿದೆ. ಸಕ್ಕರೆ ಕಾಯಿಲೆ ಉಳ್ಳವರು ತಮ್ಮ ಆರೋಗ್ಯವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬೇಕು. ಹೀಗಾಗಿ ಮಧುಮೇಹಿಯಗಳಿಗೆ ಗೆಣಸು ಸಹಕಾರಿ ಆಗುತ್ತದೆ. ಪೈಥೋಕೆಮಿಕಲ್, ಬೆಟಾ ಕ್ಯಾರೋಟಿನ್ ಮತ್ತು ಹಲವು ಪೋಷಕಾಂಶಗಳನ್ನು ಒಳಗೊಂಡಿರುವ ಗೆಣಸು ತೂಕ ಹಾಗೂ ದೇಹದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡುತ್ತದೆ.

ಚಳಿಗಾಲದಲ್ಲಿ ಮಧುಮೇಹಿಗಳಿಗೆ ಪೂರಕ

Sweet Potatoes

* ಋತುಚಕ್ರ ಪೂರ್ವ ಸಮಸ್ಯೆ, ದೇಹದ ಸ್ನಾಯು ಮತ್ತು ನರಗಳ ಕಾರ್ಯವನ್ನು ವೃದ್ಧಿಸುತ್ತದೆ.

* ಗೆಣಸನ್ನು ನಿಯಮಿತ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.

* ಅಸ್ತಮಾ ನಿವಾರಣೆ ಮಾಡುವುದಲ್ಲದೆ, ಇಮ್ಯೂನಿಟಿ ಬೂಸ್ಟರ್​ ಆಗಿ ಕಾರ್ಯನಿರ್ವಹಿಸುತ್ತದೆ.

* ತೂಕ ಹೆಚ್ಚಿಸಲು ಸಹಕಾರಿ.

*ಹೃದಯದ ಸ್ವಾಸ್ಥ್ಯವನ್ನು ಕಾಪಾಡುವ ವಿಟಮಿನ್-ಎ ಇದೆ.

* ಸಿಹಿ ಗೆಣಸು ಸಕ್ಕರೆಯ ಅಂಶಗಳನ್ನು ಒಳಗೊಂಡಿರುವುದರಿಂದ ಬಾಣತಿಯರಿಗೆ ಬಿ ವಿಟಮಿನ್​ನೊಂದಿಗೆ ಫಾಲಿಸ್​ ಆಸಿಡ್ ಹೇರಳವಾಗಿ ಸಿಗುತ್ತದೆ.

ಸಿಹಿ ಗೆಣಸಿನ ಪ್ರಯೋಜನ

ಕ್ಯಾನ್ಸ‌ರ್ ನಿವಾರಣೆ : ಸಿಹಿಗೆಣಸಿನಲ್ಲಿ ಕ್ಯಾರೊಟಿನಾಯ್ಡ್ ಅಧಿಕವಾಗಿರುವುದರಿಂದ ಕ್ಯಾನ್ಸರ್​ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಗೆಣಸಿನಲ್ಲಿರುವ ಅಂಥೋಸಯಾನಿನ್, ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಅದಕ್ಕಾಗಿ ಆಹಾರ ಸೇವನೆಯಲ್ಲಿ ಗೆಣಸನ್ನು ಬಳಕೆ ಮಾಡುವುದು ಉತ್ತಮ.

Sweet Potatoes

ಚರ್ಮ, ಕಣ್ಣಿನ ಸಮಸ್ಯೆಗೆ ಮದ್ದು: ಚಳಿಗಾಲದಲ್ಲಿ ಚರ್ಮದ ರಕ್ಷಣೆಗೆ ಸಿಹಿಗೆಣಸು ಉತ್ತಮ ಮದ್ದು. ನಿಯಮಿತ ಸೇವನೆಯಿಂದ ತ್ವಚೆಗೆ ತೇವಾಂಶ ಸಿಗುತ್ತದೆ. ಚರ್ಮದ ಸಮಸ್ಯೆಗಳು ಹಾಗೂ ಕಪ್ಪು ಕಲೆಗಳನ್ನು ದೂರ ಮಾಡುತ್ತದೆ. ಇದರೊಂದಿಗೆ ವಯಸ್ಸಾಗದಂತೆ ಚರ್ಮವನ್ನು ರಕ್ಷಿಸುತ್ತದೆ. ಅಲ್ಲದೆ, ಕಣ್ಣಿನ ರಕ್ಷಣೆಗೂ ಇದು ಉತ್ತಮ. ದೃಷ್ಟಿ ಸುಧಾರಣೆಗೆ ಸಿಹಿಗೆಣಸಿನಲ್ಲಿರುವ ಬೀಟಾ ಕ್ಯಾರೋಟಿನ್ ಅಂಶವು ಸಹಾಯ ಮಾಡುತ್ತದೆ.

ಮಾನಸಿಕ ಒತ್ತಡ ನಿವಾರಣೆ : ಸಿಹಿಗೆಣಸಿನಲ್ಲಿರುವ ಮೆಗ್ನಿಸಿಯಮ್ ಅಂಶವು ಮಾನವನ ಮಾನಸಿಕ ಒತ್ತಡವನ್ನು ನಿಯಂತ್ರಸಲು ಸಹಕಾರಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net