ಮೊಡವೆಗಳ ಕಲೆಗಳಿಂದ ಕಿರಿಕಿರಿ ಆಗ್ತಿದ್ಯಾ? ಕಬ್ಬಿನ ರಸದಿಂದ ಹೀಗೆ ಮಾಡಬೇಕು..sugar cane juice

sugarcane juice
Published on

sugar cane juice: ಕಬ್ಬಿನ ರಸವು ಅನೇಕ ಪ್ರಯೋಜನಗಳನ್ನು ಹೊಂದಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಕಬ್ಬಿನ ರಸ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.  ಆದರೆ ನಿಮ್ಮ  ಮುಖದ ಅಂದಕ್ಕೆ ಕೂಡಾ  ಬಳಸಲಾಗುತ್ತದೆ ಎಂದು ನಿಮಗೆ ತಿಳಿದಿದ್ಯಾ? ನಾವು ಇಂದು ನಿಮಗೆ ತಿಳಿಸಿ ಕೊಡಲಿದ್ದೇವೆ...

ಬೇಸಿಗೆಯಲ್ಲಿ ಎಲ್ಲಿ ನೋಡಿದರೂ ಈ ಕಬ್ಬಿನ  ಜ್ಯೂಸ್​​ ಗಾಡಿಗಳೇ ಕಾಣಸಿಗುತ್ತವೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಈ ಕಬ್ಬಿನ ರಸವನ್ನು ಕುಡಿಯಲು ಇಷ್ಟಪಡುತ್ತಾರೆ. ಒಂದಿಷ್ಟು ಐಸ್ ಹಾಕಿ ಅದಕ್ಕೆ ಶುಂಠಿ ಪುದೀನಾ ಹಾಕಿ ಕುಡಿದರೆ ರುಚಿಯೇ ಬೇರೆಯಾಗಿರುತ್ತದೆ. ಈ ಕಬ್ಬಿನ ಜ್ಯೂಸ್ ಆರೋಗ್ಯಕ್ಕೂ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ರುಚಿಯ ಜೊತೆಗೆ ಪೋಷಕಾಂಶಗಳಿಂದ ಕೂಡಿದೆ.

ಕಬ್ಬಿನ ರಸವನ್ನು ಬಳಸುವುದರಿಂದ ಮೊಡವೆಗಳಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದು ಹೇಳಲಾಗುತ್ತದೆ. ಕಬ್ಬಿನ ರಸದಲ್ಲಿ ಸ್ವಲ್ಪ ಮುಲ್ತಾನಿ ಮಿಟ್ಟಿಯನ್ನು ಬೆರೆಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿದರೆ ಮುಖದ ಮೇಲಿನ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ.

ಕಬ್ಬಿನ ರಸವನ್ನು ಸ್ವಲ್ಪ ಜೇನುತುಪ್ಪದೊಂದಿಗೆ ಬೆರೆಸಿ ಮತ್ತು ಈ ಮಿಶ್ರಣವನ್ನು ಚರ್ಮದ ಮೇಲೆ ಕಾಲು ಗಂಟೆ ಮಸಾಜ್ ಮಾಡಿ ಮತ್ತು ನಂತರ 20 ನಿಮಿಷಗಳ ಕಾಲ ಬಿಡಿ. ನಂತರ ನೀರಿನಿಂದ ಮುಖವನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಚರ್ಮ ಹೊಳೆಯುತ್ತದೆ.

ಕಬ್ಬಿನ ರಸಕ್ಕೆ ಸ್ವಲ್ಪ ಕಾಫಿ ಪುಡಿ ಸೇರಿಸಿ ಮುಖಕ್ಕೆ ಹಚ್ಚುವುದರಿಂದ ತ್ವಚೆ ಕಾಂತಿಯುತವಾಗುತ್ತದೆ.

ನಿಂಬೆ ರಸ, ಸೇಬಿನ ರಸ, ದ್ರಾಕ್ಷಿ ರಸ ಮತ್ತು ತೆಂಗಿನ ಹಾಲಿನೊಂದಿಗೆ ಕಬ್ಬಿನ ರಸವನ್ನು ಸಮಪ್ರಮಾಣದಲ್ಲಿ ಬೆರೆಸಿ ಚರ್ಮಕ್ಕೆ ಹಚ್ಚಿ. ಹೀಗೆ ಹಚ್ಚುವುದರಿಂದ ತ್ವಚೆಯ ಮೇಲಿನ ಮೊಡವೆ ಕಲೆಗಳು ನಿವಾರಣೆಯಾಗಿ ತ್ವಚೆಯು ಹೊಳೆಯುತ್ತದೆ.

ಕಬ್ಬಿನ ರಸದಿಂದ ತಯಾರಿಸಿದ ಐಸ್ ಕ್ಯೂಬ್ ಗಳನ್ನು ಬಳಸುವುದರಿಂದ ತ್ವಚೆಯು ಗಟ್ಟಿಯಾಗಿ ಮತ್ತು ಯೌವನವಾಗಿರಲು ನಿಮಗೆ ದುಪ್ಪಟ್ಟು ಫಲಿತಾಂಶವನ್ನು ನೀಡುತ್ತದೆ.

ಕಬ್ಬಿನ ರಸಕ್ಕೆ ಸ್ವಲ್ಪ ಪಪ್ಪಾಯಿಯ ತಿರುಳನ್ನು ಸೇರಿಸಿ ತ್ವಚೆಗೆ ಹಚ್ಚುವುದರಿಂದ ತ್ವಚೆಯು ಗಟ್ಟಿಯಾಗಿ, ಯೌವನವಾಗಿ ಕಾಣುತ್ತದೆ ಎಂದೂ ಹೇಳಲಾಗುತ್ತದೆ.

ನಾಲ್ಕು ಚಮಚ ಕಬ್ಬಿನ ರಸವನ್ನು ಎರಡು ಚಮಚ ತುಪ್ಪದೊಂದಿಗೆ ಬೆರೆಸಿ ಚರ್ಮಕ್ಕೆ ಚೆನ್ನಾಗಿ ಮಸಾಜ್ ಮಾಡಿ ನಂತರ ತೊಳೆದರೆ ಒಣ ಚರ್ಮಕ್ಕೆ ಹೊಸ ಹೊಳಪು ಬರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net