

Beauty secret: ಕೆಲವೊಮ್ಮೆ ನಾವು ಕನ್ನಡಿಯಲ್ಲಿ ನಮ್ಮ ಮುಖವನ್ನು ನೋಡಿಕೊಂಡಾಗ ನಮ್ಮ ಚರ್ಮವು ಸುಕ್ಕುಗಳು, ವರ್ಣದ್ರವ್ಯ ಇವೆಲ್ಲವೂ ನಮ್ಮ ಆತ್ಮ ವಿಶ್ವಾಸದ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ, ಇದರ ಪರಿಹಾರಕ್ಕಾಗಿ ಜನರು ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿ ಕ್ರೀಮ್ಗಳು, ಸೀರಮ್ಗಳು ಅಥವಾ ಚಿಕಿತ್ಸೆಗಳನ್ನು ಬಳಸುತ್ತಾರೆ. ಇವೆಲ್ಲವೂ ತಾತ್ಕಾಲಿಕವಾಗಿರುತ್ತದೆ. ನಿಜವಾದ ಹೊಳಪು ಯಾವಾಗಲೂ ದೇಹದ ಆಳದ ಪೋಷಣೆಯಿಂದ ಬರುತ್ತದೆ. ದೇಹದ ಜೀವಕೋಶಗಳು ಸರಿಯಾದ ಪೋಷಕಾಂಶಗಳನ್ನು ಪಡೆದರೆ, ಅವು ನೇರವಾಗಿ ನಿಮ್ಮ ಚರ್ಮದ ಮೇಲೆ ಗೋಚರಿಸುತ್ತದೆ.
ನಮ್ಮ ದೈನಂದಿನ ಆಹಾರದಲ್ಲಿ ಇವುಗಳನ್ನು ಸೇರಿಸಿದರೆ ಚರ್ಮದ ಸೌಂದರ್ಯವನ್ನು ನೈಸರ್ಗಿಕವಾಗಿ ಬಹಿರಂಗಪಡಿಸುವ ಐದು ವಿಷಯಳಿವೆ. ಅವು ಯಾವುವು ನೋಡೋಣ ಬನ್ನಿ...
ದಾಳಿಂಬೆ ಚರ್ಮವು ಚರ್ಮ ರಕ್ಷಣೆಗೆ ಅದ್ಭುತವಾದಂತಹ ಆಹಾರವಗಿದೆ. ಇದರಲ್ಲಿರುವ ಪಾಲಿಫೆನಾಲ್ಗಳು, ಫ್ಲ್ಯಾವೊನಾಯ್ಡ್ಗಳು ಸೂರ್ಯನ ಕಿರಣಗಳಿಂದ ರಕ್ಷಣೆ ನೀಡುತ್ತದೆ. ಆಂಟಿಆಕ್ಸಿಡೆಂಟ್ ಗುಣಗಳು ಚರ್ಮದ ವಯಸ್ಸು ಸೌಂದರ್ಯತೆಯನ್ನು ಕಾಪಾಡುತ್ತವೆ. ಇದು ವಿಟಮಿನ್ ಸಿ ಮತ್ತು ಪ್ಯೂನಿಕಾಲಜಿನ್ ಚರ್ಮದಲ್ಲಿ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಿ, ಚರ್ಮವನ್ನು ದೃಢವಾಗಿ ಮತ್ತು ಯೌವ್ವನದಿಂದ ಇಡುತ್ತದೆ.
ತೆಂಗಿನ ನೀರು ನೈಸರ್ಗಿಕವಾಗಿ ಎಲೆಕ್ಟ್ರೋಲೈಟ್ಗಳ ಮೂಲವಾಗಿದೆ. ಇದರಲ್ಲಿರುವ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ಗಳು ದೇಹ ಮತ್ತು ಚರ್ಮಕ್ಕೆ ಅಗತ್ಯವಾದ ತೇವಾಂಶವನ್ನು ಒದಗಿಸುತ್ತದೆ. ವಿಶೇಷವಾಗಿ ಬೇಸಿಗೆಯಲ್ಲಿ, ಇದು ನಿರ್ಜಲೀಕರಣವನ್ನು ತಡೆಯುತ್ತದೆ ಮತ್ತು ಚರ್ಮ ಒಣಗುವುದನ್ನು ತಡೆಯುತ್ತದೆ. ತೆಂಗಿನಕಾಯಿ ಕ್ರೀಮ್ನಲ್ಲಿರುವ MCT ಗಳು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತವೆ ಮತ್ತು ಒಳಗಿನಿಂದ ಪೋಷಿಸುತ್ತವೆ. ಇವು ಚರ್ಮವನ್ನು ಶುದ್ಧವಗಿಟ್ಟು ಹೊಳೆಯುವಂತೆ ಮಾಡುತ್ತದೆ.
ಅಲೊವೆರಾ ಚರ್ಮವನ್ನು ಶಾಂತಗೊಳಿಸುವಂತಹ ಶಕ್ತಿಯನ್ನು ಹೊಂದಿದೆ. ಇದರಲ್ಲಿರುವ ಅಸ್ಮನ್ನನ್ ಎಂಬ ಅಂಶವು ಚರ್ಮದ ರಕ್ಷಣಾತ್ಮಕ ತಡೆಗೋಡೆಯನ್ನು ಬಲಪಡಿಸುತ್ತದೆ. ಇದು ಚರ್ಮದಲ್ಲಿರುವ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಲೊವೆರಾವನ್ನು ಚರ್ಮಕ್ಕೆ ಲೇಪಿಸುವುದರಿಂದ ಇದು ಚರ್ಮವನ್ನು ಮೃದುವಾಗಿಡಲು ಸಹಾಯ ಮಾಡುತ್ತದೆ. ಹಾಗೆಯೇ, ಚರ್ಮವು ದಪ್ಪ, ಮೃದು ಮತ್ತು ಆರೋಗ್ಯವಾಗಿರುವಂತೆ ಮಾಡುತ್ತದೆ.
ಪ್ರತಿನಿತ್ಯ ಪಿಸ್ತವನ್ನು ಸೇವಿಸುವುದರಿಂದ ಇದು ಚರ್ಮ ರಕ್ಷಣೆಯನ್ನು ಮಾಡುತ್ತದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್ಗಳು, ವಿಟಮಿನ್ E ಇರುವುದರಿಂದ ಫ್ರೀ ರಾಡಿಕಲ್ಗಳನ್ನು ನಿಯಂತ್ರಿಸಿ, ಮುಂಚಿತ ವಯಸ್ಸು, ಸುಕ್ಕುಗಟ್ಟುವುದನ್ನು ಕಡಿಮೆ ಮಾಡುತ್ತದೆ. ಇದರ ಸೇವನೆಯಿಂದ UV ಕಿರಣಗಳಿಂದ ರಕ್ಷಣೆ ನೀಡಿ, ಚರ್ಮವನ್ನು ತೇವವಾಗಿಡಲು ಸಹಾಯ ಮಾಡುತ್ತದೆ. ಲಘು ಊಟದ ಆಯ್ಕೆಯಲ್ಲಿ ಪಿಸ್ತಾಗಳನ್ನು ಸೇರಿಸುವುದರಿಂದ ಇದು ಆರೋಗ್ಯಕರ ತಿಂಡಿ ಮತ್ತು ಅದೇ ಸಮಯದಲ್ಲಿ ಸೌಂದರ್ಯ ವರ್ಧಕವಾಗಿದೆ.
ಪ್ರಾಚೀನ ಕಾಲದಿಂದಲೂ ಕೇಸರಿಯನ್ನು ಸೌಂದರ್ಯದ ಸಂಗಾತಿ ಎಂದು ಕರೆಯಲಾಗುತ್ತದೆ. ಇದರಲ್ಲಿರುವ ಕ್ರೋಸಿನ್ ಮತ್ತು ಸಫ್ರನಲ್ ಎಂಬ ಉತ್ಕರ್ಷಣ ನಿರೋಧಕಗಳು ಚರ್ಮದಲ್ಲಿನ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಿ, ಚರ್ಮಕ್ಕೆ ಬೇಕಾದ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಕೇಸರಿ ಚರ್ಮವನ್ನು ಕಾಂತಿಯುತವಾಗಿ ಕಾಣುವಂತೆ ಮಾಡುವುದಲ್ಲದೆ, ಅದರ ಒಟ್ಟಾರೆ ಆರೋಗ್ಯಕರ ಹೊಳಪನ್ನು ಹೆಚ್ಚಿಸುತ್ತದೆ. (ಏಜೆನ್ಸೀಸ್)