ಆಧ್ಯಾತ್ಮಿಕ ಆರೋಗ್ಯಕ್ಕೆ ಅತೀತಶಕ್ತಿಯ ಅರಿವು ಆವಶ್ಯಕ

mind
Published on

ಆಧ್ಯಾತ್ಮಿಕ ಆರೋಗ್ಯಕ್ಕೆ ಅತೀತಶಕ್ತಿಯ ಅರಿವು ಮತ್ತು ಸೃಷ್ಟಿಯ ಉಗಮ ಹಾಗೂ ಉಳಿವಿಗೆ ಕಾರಣಕರ್ತನಾದ ಸೃಷ್ಟಿಕರ್ತನಿಗೆ (ಅತೀತಶಕ್ತಿ) ಕೃತತೆ ಮತ್ತು ಅರ್ಪಣ ಮನೋಭಾವ ಅತ್ಯವಶ್ಯಕ. ವೈಜ್ಞಾನಿಕವಾದ ಅತೀತಶಕ್ತಿಯನ್ನು ಸೃಷ್ಟಿಕರ್ತನೆಂದೂ, ದೇವರೆಂದೂ ಹಲವಾರು ನಾಮಗಳಿಂದ ಕರೆಯುವ ವಾಡಿಕೆಯಿದೆ. ಸೃಷ್ಟಿಯನ್ನು ನಿಯಂತ್ರಿಸುವ ಅತೀತಶಕ್ತಿಯೊಂದರ ಅಧೀನದಲ್ಲಿ ಸೃಷ್ಟಿಯಲ್ಲಿರುವ ಅಸಂಖ್ಯಾತ ಭಾಗಗಳನ್ನು ಮತ್ತು ಕ್ರಿಯೆಗಳನ್ನು ನಿಯಂತ್ರಿಸುವ ಪ್ರತ್ಯೇಕ ಶಕ್ತಿ ಟಕಗಳಿರಬಹುದೇನೋ? ಈ ಉಪ ನಿಯಂತ್ರಕ ಶಕ್ತಿಗಳನ್ನು ವಿವಿಧ ಹೆಸರಿನಲ್ಲಿ ಕರೆಯಲು ಹಲವಾರು ದೇವರನಾಮಗಳು ಸೃಷ್ಟಿಯಾಗಿರಬಹುದೇನೋ? ಸೃಷ್ಟಿಗಾಗಿ ಬ್ರಹ್ಮ, ನಿರ್ವಹಣೆಗಾಗಿ ವಿಷ್ಣು, ಲಯಕ್ಕಾಗಿ ಶಿವ ಎನ್ನಲಾಗುತ್ತದೆ. ಅತೀತಶಕ್ತಿಯ ಕಣ ಪ್ರತಿಯೊಂದರಲ್ಲೂ ಇರುವುದರಿಂದ ಎಲ್ಲವೂ ದೈವಸ್ವರೂಪ ಎಂಬಂತೆ ವಿವಿಧ ಜೀವ ಮತ್ತು ನಿರ್ಜೀವ ವಸ್ತುಗಳನ್ನು ದೇವರೆಂದು ಪೂಜಿಸಲಾಗುತ್ತಿದೆ. ಶಕ್ತಿಯನ್ನು ನೋಡಲಾಗುವುದಿಲ್ಲ. ಅದರ ಪರಿಣಾಮದಿಂದಲೇ ಅರಿಯಬೇಕು. ಅದೃಶ್ಯ ಶಕ್ತಿಗೆ ವಿವಿಧ ರೂಪಗಳನ್ನು ನೀಡಿ ಕೃತತೆ ಸಮರ್ಪಿಸುವ ವಿಗ್ರಹಗಳ ಆರಾಧನೆ ಪ್ರಚಲಿತದಲ್ಲಿದೆ.

ಅತೀತಶಕ್ತಿ ವೈಜ್ಞಾನಿಕ: ಅತೀತಶಕ್ತಿಯ ನಿಯಂತ್ರಣ ಇರುವುದನ್ನು ಸೃಷ್ಟಿಯಲ್ಲಿ ಜರುಗುವ ಹಲವಾರು ಸೂಕ್ಷ$್ಮ ಸಾ್ಯಾಧಾರಗಳಿಂದ ಗುರುತಿಸಬಹುದು. ನಿಗದಿತ ಸೂಯೋರ್ದಯ, ಚಂದ್ರೋದಯ, ಗ್ರಹಗಳಾಗುವಿಕೆ, ಋುತುಮಾನ, ಹುಟ್ಟು, ಸಾವು, ಗರ್ಭಕೂಸಿನ ನಿಗದಿತ ಹುಟ್ಟು ಮತ್ತು ಬೆಳವಣಿಗೆ, ವಯೋಧರ್ಮದ ಬದಲಾವಣೆಗಳು, ನೀರಿನ ಚಕ್ರ, ಅಭಿವೃದ್ಧಿ ಕಡೆಗೇ ಸಾಗಿಬಂದಿರುವ ಸೃಷ್ಟಿಯ ಮತ್ತು ಮಾನವನ ವಿಕಾಸ, ಸಸ್ಯ ಪ್ರಾಣಿಗಳಿಗಿರುವ ಸಂಬಂಧ, ಸಮತೋಲನ ಕ್ರಿಯೆಗಳು ಇತ್ಯಾದಿ ಗಮನಿಸಿದಲ್ಲಿ ಇವುಗಳ ನಿಯಂತ್ರಕನೊಬ್ಬ ಇರಲೇಬೇಕೆಂಬುದನ್ನು ದೃಢಪಡಿಸುತ್ತವೆ.

ಸಹಜ ವೀರ್ಯಾಣು ಮತ್ತು ಅಂಡಾಣುಗಳಿದ್ದರೂ ಸಮ್ಮಿಲನವಾದಾಗೆಲ್ಲ ಗರ್ಭಧಾರಣೆ ಆಗುವುದಿಲ್ಲ. ಯಾವುದೋ ರ್ನಿದಿಷ್ಟ ಸಮ್ಮಿಲನದಿಂದ ಮಾತ್ರ ಆಗುತ್ತದೆ. ಹೆರಿಗೆಯಾಗುವ ತನಕ ಮತ್ತು ನಂತರ ಪ್ರತಿದಿನ, ಪ್ರತಿತಿಂಗಳು, ಪ್ರತಿವರ್ಷಗಳಲ್ಲಾಗಬೇಕಾದ ಪೂರ್ವನಿಗದಿತ ಬೆಳವಣಿಗೆಗಳು, ಬದಲಾವಣೆಗಳು ಕರಾರುವಕ್ಕಾಗಿ ಮಗುವಿನಲ್ಲಿ ಆಗುತ್ತವೆ. ಗರ್ಭಧಾರಣೆಯಾದ ಕೆಲದಿನಗಳ ನಂತರ ಹಿಗ್ಗಲು ಪ್ರಾರಂಭಿಸಿದ ಗರ್ಭಕೋಶ, ಬೆಳೆಯುವ ಗರ್ಭಕೂಸಿಗನುಗುಣವಾಗಿ ಹಿಗ್ಗುತ್ತಾ 9 ತಿಂಗಳಾಗುತ್ತಿದ್ದಂತೆ ಸ್ವಯಂಪ್ರೇರಿತವಾಗಿ ಕುಗ್ಗಿ ಹೆರಿಗೆಗೆ ಅನುವುಮಾಡಿಕೊಡುತ್ತದೆ. ಕಿರಿದಾಗಿದ್ದ ಯೋನಿ ಬಹುಗಾತ್ರದ ಕೂಸನ್ನು ಹೊರಹಾಕುವಷ್ಟರ ಮಟ್ಟಿಗೆ ಹಿಗ್ಗಿ ಹೆರಿಗೆಯಾದಾಕ್ಷಣ ಸಹಜ ಸ್ಥಿತಿ ತಲುಪುತ್ತದೆ. ಇದೆಂತಹ ವಿಸ್ಮಯ! ಹೆರಿಗೆಯಾದ ನಂತರದ ಹಾಲು ಸುರಿಕೆ, ಹಾಲಿನಲ್ಲಿರುವ ವಿಶಿಷ್ಟ ಪೌಷ್ಟಿಕಗಳು ಮತ್ತು ರೋಗನಿರೋಧಕಗಳು, ನಿಗದಿತ ಅವಧಿಯಲ್ಲುಂಟಾಗುವ ಮಗುವಿನ ಬೆಳವಣಿಗೆಯ ಮೈಲುಗಲ್ಲುಗಳು, ಪ್ರೌಢಾವಸ್ಥೆ, ಯೌವ್ವನ, ಮುಪ್ಪು, ಸಾವು ಇವೆಲ್ಲವೂ ನಿಗದಿತ ಸಮಯಕ್ಕೆ ಚಾಚೂತಪ್ಪದೆ ಸ್ವಯಂಚಾಲಿತವಾಗಿ ಜರುಗುತ್ತವೆ. ಲೈಂಗಿಕ ಅಂಗಾಂಗಗಳು (ವೃಷಣ,ಅಂಡಾಶಯ) ಹುಟ್ಟಿನಿಂದಲೇ ದೇಹದಲ್ಲಿದ್ದರೂ ಪ್ರೌಢಾವಸ್ಥೆ ತಲುಪುವವರೆಗೂ ಕಾರ್ಯನಿರ್ವಹಿಸುವುದಿಲ್ಲ. ವಯಸ್ಸಿಗನುಗುಣವಾಗಿ ಮನಸ್ಸು ಮತ್ತು ಭಾವಗಳಲ್ಲೂ ನಿಗದಿತ ಬದಲಾವಣೆಗಳುಂಟಾಗುತ್ತವೆ. ಜೀವಕೋಶದ ಆಯಸ್ಸು ಹುಟ್ಟಿದ ದಿನದಂದೇ ನಿರ್ಧಾರವಾಗುವುದನ್ನು ಅಪಾಪೋಸಿಸ್​ ಎಂದು ಕರೆಯಲಾಗಿದ್ದು, ಹುಟ್ಟು ಮತ್ತು ಸಾವುಗಳೂ ಅತೀತ ಶಕ್ತಿಯ ನಿಯಂತ್ರಣದಲ್ಲಿವೆ ಎಂಬುದನ್ನು ದೃಢೀಕರಿಸುತ್ತವೆ.

ದೇಹದಲ್ಲಿ ಜರುಗುವ ಹಲವಾರು ಟನೆಗಳಿಗೆ ವೈಜ್ಞಾನಿಕವಾಗಿ ಉತ್ತರಗಳನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಅಸಂಖ್ಯಾತ ಜೀವಕೋಶಗಳಿಂದಾಗಿರುವ ಮನುಷ್ಯನ ದೇಹದಲ್ಲಿ ಸುಮಾರು 13 ವ್ಯವಸ್ಥೆಗಳಿದ್ದು, ಅವು ಒಂದಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸಿ ಮನುಷ್ಯನನ್ನು ಜೀವಂತವಾಗಿಡುವ ನಿಯಂತ್ರಣ ವಿಸ್ಮಯಕಾರಿ. ಇವು ಹೇಗೆ ಪೂರಕವಾಗಿವೆ ಎಂಬ ವಿಧಿ ವಿಧಾನಗಳನ್ನು ವಿಜ್ಞಾನ ಕಂಡುಕೊಂಡಿದ್ದರೂ ಅಂತಿಮವಾಗಿ ಅವು ಹೇಗೆ, ಯಾರಿಂದ ನಿಯಂತ್ರಿತವಾಗುತ್ತವೆ ಎಂಬುದು ಈಗಲೂ ನಿಗೂಢ. ದೈಹಿಕ ಕ್ರಿಯೆಗಳನ್ನು ಪೋಷಿಸುವ ಹೃದಯದ ಕಾರ್ಯನಿಯಂತ್ರಣ ಇನ್ನಿತರ ಅಂಗಾಂಗಗಳಂತೆ ಮಿದುಳಿನ ನಿಯಂತ್ರಣದಲ್ಲಿಲ್ಲದೆ ತನ್ನಿಂದಲೇ ನಿಯಂತ್ರಿಸಲ್ಪಡುವಿಕೆಯೂ ಅತೀತಶಕ್ತಿಯ ನಿಯಂತ್ರಣದ ಸೂಚಕ.

ಬದುಕುತ್ತಾರೆಂಬುವವರು ಸಾವನ್ನಪ್ಪುವ, ಸಾಯುವರು ಎಂದುಕೊಂಡವರು ದೀರ್ಕಾಲ ಬದುಕುವ ವಿಸ್ಮಯಗಳಿವೆ. ಪ್ರತಿಯೊಬ್ಬರ ಬದುಕಿನಲ್ಲೂ ವಿಮರ್ಶೆಗೆ ನಿಲುಕದ ಇಂಥ ಹಲವಾರು ಪ್ರಸಂಗಗಳಿವೆ. ಸೃಷ್ಟಿಯ ವಿಕಾಸ ಕ್ರಿಯೆಯ ಹಂತಗಳನ್ನು ಗಮನಿಸಿದಾಗ ಹಲವಾರು ವೈಪರೀತ್ಯಗಳ ನಡುವೆಯೂ ಸೃಷ್ಟಿ ಪತನವಾಗದೆ, ಅಭಿವೃದ್ಧಿಯ ಕಡೆಗೇ ಸಾಗುತ್ತ ಬಂದಿರುವುದು ಮತ್ತು ಕೋಟ್ಯಂತರ ವರ್ಷಗಳ ಮನುಷ್ಯನ ವಿಕಾಸವೂ ಅಭಿವೃದ್ಧಿ ಹಂತಗಳ ಕಡೆಗೇ ಜರುಗಿರುವುದು ಅತೀತಶಕ್ತಿಯ ವ್ಯವಸ್ಥಿತ ನಿಯಂತ್ರಣಕ್ಕೆ ಸಾಯಾಗಿವೆ.

ಸೃಷ್ಟಿಯಲ್ಲಿರುವ ಯಾವುದನ್ನೂ ನಾಶಪಡಿಸಲಾಗುವುದಿಲ್ಲ, ಹೊಸದಾಗಿ ಸೃಷ್ಟಿಸಲೂ ಸಾಧ್ಯವಿಲ್ಲ. ಇರುವವುಗಳಿಂದ ಮತ್ತೊಂದನ್ನು ರೂಪಿಸಬಹುದಷ್ಟೇ. ಅತೀತಶಕ್ತಿಯ ಅಧೀನದಲ್ಲಿ ನಾವಿದ್ದು ಅದರ ಅಪೇೆಗೆ ತಕ್ಕಂತೆ ಕೃತತಾಪೂರ್ವಕವಾಗಿ ನಡೆದುಕೊಳ್ಳುವ ಜೀವನಶೈಲಿ ಆಧ್ಯಾತ್ಮಿಕ ಆರೋಗ್ಯಕ್ಕೆ ಅತ್ಯವಶ್ಯಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net