ಯೋಗಕ್ಷೇಮ: ಎಲ್ಲರಿಗೂ ಶಕ್ತಿಯನ್ನು ನೀಡುವ ಸೂರ್ಯನಿಗೆ ನಮನ

sudina
Published on

ಸೂರ್ಯಪಾನ ಮಾಡುವ ಸಮಯ: ಬೆಳಗ್ಗೆ ಸೂರ್ಯ ಹುಟ್ಟಿದ ಒಂದು ಗಂಟೆಯೊಳಗೆ ಅಥವಾ ಸಂಜೆ ಸೂರ್ಯ ಮುಳುಗುವ ಒಂದು ಗಂಟೆ ಮೊದಲು ಮಾಡಬಹುದು. ಈ ಸಮಯದಲ್ಲಿ ಬಿಟ್ಟು ಬೇರೆ ಸಮಯದಲ್ಲಿ ಸೂರ್ಯನನ್ನು ನೇರವಾಗಿ ದಿಟ್ಟಿಸಿ ನೋಡುವುದು ನಿಷಿದ್ಧ. ಸೂರ್ಯಪಾನ ಮಾಡುವವರು ಬೆಳಗ್ಗೆ ಅಥವಾ ಸಂಜೆಯ ಯಾವುದಾದರೂ ಒಂದು ಕಾಲವನ್ನು ಆರಿಸಿಕೊಳ್ಳಬಹುದು.

ಸೂರ್ಯಪಾನದ ಕಾಲ: ಆರಂಭ ಮಾಡಿದ ಮೊದಲ ದಿನ ಹತ್ತು ಸೆಕೆಂಡ್ ಕಾಲ ಸೂರ್ಯಪಾನ ಮಾಡಬೇಕು. ನಂತರ ಪ್ರತಿದಿನ ಹತ್ತು ಸೆಕೆಂಡ್​ಗಳಷ್ಟು ಸೂರ್ಯನನ್ನು ದಿಟ್ಟಿಸಿ ನೋಡುವ ಸಮಯವನ್ನು ಹೆಚ್ಚಿಸುತ್ತ ಹೋಗಬೇಕು. ಅಂದರೆ, ಎರಡನೆಯ ದಿನ ಇಪ್ಪತ್ತು ಸೆಕೆಂಡು, ಹೀಗೆ. ಇದರಿಂದ ಒಂದು ತಿಂಗಳು ಕಳೆಯುವ ವೇಳೆಗೆ ಐದು ನಿಮಿಷಗಳ ಸೂರ್ಯಪಾನ ಮಾಡುವ ಕ್ಷಮತೆ ನಿಮಗೆ ದೊರೆಯುತ್ತದೆ. ಹೀಗೆಯೇ ಮುಂದುವರಿಸಿ, ಮೊದಲನೆಯ ಹಂತವಾದ ಮೂರು ತಿಂಗಳ ಅಂತ್ಯದಲ್ಲಿ ನಿಮಗೆ ಹದಿನೈದು ನಿಮಿಷಗಳ ಕಾಲ ಸೂರ್ಯಪಾನ ಸಿದ್ಧಿಸಿರುತ್ತದೆ. ಮತ್ತೆ ಮುಂದುವರಿಸಿ ಎರಡನೆಯ ಹಂತದಿಂದ ಆರನೆಯ ತಿಂಗಳವರೆಗೆ ಹೋಗಿ. ಆ ವೇಳೆಗೆ ನೀವು ಮೂವತ್ತು ನಿಮಿಷ ಸೂರ್ಯಪಾನವನ್ನು ಮಾಡಬಲ್ಲಿರಿ. ಮತ್ತು ಮುಂದುವರಿಸಿ ಮೂರನೆಯ ಹಂತವಾದ ಒಂಬತ್ತು ತಿಂಗಳನ್ನೂ ಮುಗಿಸಿರಿ. ಇದು ನಿಮ್ಮ ಕಡೆಯ ಹಂತ. ನೀವು ಆಗ ನಲವತ್ತೆ ೖದು ನಿಮಿಷಗಳ ಸೂರ್ಯಪಾನವನ್ನು ಮಾಡುವ ಹಂತವನ್ನು ಮುಟ್ಟಿರುತ್ತೀರಿ. ಆದರೆ ಹೀರಾರತನ್ ಮಾನೇಕ್ ಅವರು ನಿಮ್ಮ ಸೂರ್ಯಪಾನದ ಅಂತಿಮ ಹಂತವನ್ನು

ನಲವತ್ತನಾಲ್ಕು ನಿಮಿಷಕ್ಕೆ ನಿಲ್ಲಿಸುವ ಸಲಹೆ ನೀಡುತ್ತಾರೆ. ಅವರ ಪ್ರಕಾರ, ನೀವು ಮೂರನೆಯ ಹಂತವನ್ನು ಮುಟ್ಟಿದ ನಂತರ ಮತ್ತೆ ಸೂರ್ಯಪಾನವನ್ನು ಮುಂದುವರಿಸಬೇಕಾಗಿಲ್ಲ. ಅವರ ಪ್ರಕಾರ ಇದು ಒಂದು ಬಾರಿ ಅಂತಿಮ ಹಂತ ಮುಟ್ಟಿ ನಿಲ್ಲಿಸಬಹುದಾದ ಪ್ರಕ್ರಿಯೆ. ಒಮ್ಮೆ ಸೂರ್ಯಪಾನ ಸಿದ್ಧಿಸಿದ ನಂತರ ಮತ್ತೆ ಮತ್ತೆ ದೇಹವನ್ನು ರೀಚಾರ್ಜ್ ಮಾಡಬೇಕಾದದ್ದಿಲ್ಲ. ದೇಹದ ಜೀವಕಣಗಳು ಸೂರ್ಯಕಿರಣವನ್ನು ಪಡೆದು ಅದನ್ನು ದೇಹಕ್ಕೆ ಬೇಕಾದ ಶಕ್ತಿಯನ್ನಾಗಿ ಮಾರ್ಪಡಿಸುವ ತಂತ್ರವನ್ನು ಕಲಿತುಕೊಂಡುಬಿಟ್ಟಿರುತ್ತವೆ.

ಸೂರ್ಯಪಾನ ಮಾಡುವ ರೀತಿ: ಸೂರ್ಯಪಾನವನ್ನು ಬರಿಗಾಲಿನಲ್ಲಿ ನೆಲದ ಮೇಲೆ ನಿಂತು ಮಾಡಬೇಕು ಹಾಗೂ ನೆಲದ ಮಣ್ಣನ್ನೋ, ಕಲ್ಲನ್ನೋ ಮುಟ್ಟುತ್ತಿರಬೇಕು. ಅಂದರೆ, ಭೂಮಿಯ ಜೊತೆ ಸ್ಪಷ್ಟವಾಗಿ ಪಾದ ಸ್ಪರ್ಶವಾಗಬೇಕು.

ನಮ್ಮ ದೇಹ ಒಂದು ಉತ್ತಮ ವಿದ್ಯುತ್​ವಾಹಕ ಎಂಬುದು ನಿಮ್ಮ ಗಮನದಲ್ಲಿರಲಿ. ಸೂರ್ಯಪಾನ ಯಶಸ್ವಿಯಾಗಬೇಕಾದರೆ ನಿಮ್ಮ ದೇಹದ ಮೂಲಕ ಸೂರ್ಯಶಕ್ತಿ ಹಾಗೆಯೂ ಹಾದು ಹೋಗುವಂತಾಗಬೇಕು. ಸೂರ್ಯನನ್ನು ಬರಿಗಣ್ಣಿನಿಂದ ದಿಟ್ಟಿಸಿ ನೋಡಬೇಕು.

ಶ್ರೀಮತಿ ಮಾನೇಕ್ ಅವರು ತಮ್ಮ ಪತಿ ಸೂರ್ಯಪಾನ ಮಾಡುವ ರೀತಿಯನ್ನು ಹೀಗೆ ವಿವರಿಸುತ್ತಾರೆ; ‘ಅವರು ಸೂರ್ಯನನ್ನು ನೋಡುವ ರೀತಿ ಪಾನೀಯವನ್ನು ಕುಡಿಯುವಂತಿರುತ್ತದೆ.’ ನೋಡುವಾಗ ಆದಷ್ಟು ರೆಪ್ಪೆ ಅಲುಗಿಸದೆ ನೋಡಬೇಕು. ಆದರೆ ಹಾಗೆಂದು ಸೂರ್ಯಪಾನ ಅಭ್ಯಾಸ ಮುಂದುವರಿದಂತೆ, ಕಾಲಕ್ರಮೇಣ ಸೂರ್ಯನನ್ನು ರೆಪ್ಪೆ ಅಲುಗಿಸದೆ ದಿಟ್ಟಿಸಿ ನೋಡುವ ಕಲೆ ಸಿದ್ಧಿಸುತ್ತದೆ. ಸೂರ್ಯಪಾನದ ವೇಳೆ ಕಣ್ಣು ಸ್ಥಿರವಾಗದೆ ಅತ್ತಿತ್ತ ಓಡಾಡುತ್ತಿತ್ತು ಎಂಬ ಬಗ್ಗೆ ವ್ಯರ್ಥವಾಗಿ ಚಿಂತೆ ಮಾಡಬೇಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net